ವಿರೋಧ ಪಕ್ಷದ ನಾಯಕ ಯಾರು ಗೊತ್ತಾ? : ಯಶವಂತ ಗುರೂಜಿ ಭವಿಷ್ಯ!
ತುಮಕೂರು, ಆಗಸ್ಟ್ 11: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಮೂರು ತಿಂಗಳು ಕಳೆದರು, ರಾಜ್ಯ ಬಿಜೆಪಿಗೆ ವಿರೋಧ ಪಕ್ಷದ ನಾಯಕರ ಆಯ್ಕೆಯೇ ದೊಡ್ಡ ತಲೆನೋವಾಗಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಕಾಲಜ್ಞಾನಿ ಯಶವಂತ ಗುರೂಜಿ ಅವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಶುಕ್ರವಾರ ತುಮಕೂರಿನ ನೊಣವಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಯಶವಂತ ಗುರೂಜಿ ಮಾತನಾಡಿ, ಬಸವರಾಜ ಪಾಟೀಲ್ ಯತ್ನಾಳ್ ಅವರೇ ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕ ಆಗುತ್ತಾರೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಯಾರು ಏನೇ ಹೇಳಲಿ ಈ ಬಾರೀ ಹಿಂದೂ ಹುಲಿ ಬಸವರಾಜ ಪಾಟೀಲ್ ಯತ್ನಾಳ್ ಅವರೇ ರಾಜ್ಯದ ವಿರೋಧ ಪಕ್ಷದ ನಾಯಕ ಆಗುತ್ತಾರೆ ಎಂದು ಹೇಳಿದರು.

ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರು ವಿರೋಧ ಪಕ್ಷದ ನಾಯಕನ ಆಯ್ಕೆಯ ಕುರಿತು ಸಾಕಷ್ಟು ಚರ್ಚೆಗಳನ್ನ ನಡೆಸಿದ್ದು, ಮುಂಬರುವ ಅಮಾವಾಸ್ಯೆ ಬಳಿಕ ತತಕ್ಷಣವೇ ಬಸವರಾಜ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗುತ್ತಾರೆ. ಎಲ್ಲರ ಜಾತಕಗಳನ್ನ ನೋಡಿದ್ದೇವೆ. ಎಲ್ಲಾ ನಾಯಕರ ಬಲಾಬಲಗಳನ್ನ ನೋಡಿದಾಗ ಬಸವರಾಜ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಹಿಂದೆಯೇ ನಾನು ಹೇಳಿದ್ದೆ, ಎರಡು ಪೂರ್ಣಿಮೆ ಹಾಗೂ ಮೂರು ಅಮಾವಾಸ್ಯೆವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಲ್ಲ ಅಂತಾ. ಅದು ನಿಜ ಆಗಿದೆ. ಇದೀಗ ಆ ಯೋಗ ಕೂಡಿ ಬರ್ತಿದೆ. ಅಮಾವಾಸ್ಯೆ ಬಳಿಕ ಬಸವರಾಜ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕಾರ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಎಷ್ಟೇ ದೊಡ್ಡ ಲೀಡರ್ಸ್ ಇರಬಹುದು. ಗ್ರಹಗತಿಗಳ ಬಲಾಬಲಗ ಮೇಲೆ ಬಸವರಾಜ ಪಾಟೀಲ್ ಯತ್ನಾಳ್ ಅವರಿಗೆ ಯೋಗ ಕೂಡಿ ಬಂದಿದೆ. ಕೆಲ ರಾಜಕಾರಣಿಗಳು ನನಗೆ ಸವಾಲ್ ಹಾಕಿದರು. ಬಜೆಟ್ ಅಧಿವೇಶನ ನಡೆಯುತ್ತಿದೆ. ಶೀಘ್ರವೇ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯುತ್ತೆ ಅಂತಾ.
ಆಗಲೂ ನಾನು ಹೇಳಿದ್ದೆ. ಯಾವುದೇ ಕಾರಣಕ್ಕೂ ಎರಡು ಪೂರ್ಣಿಮೆ ಹಾಗೂ ಮೂರು ಅಮಾವಾಸ್ಯೆ ಮುಗಿಯೋವರೆಗೂ ಅದು ಅಸಾಧ್ಯ ಅಂತಾ ಹೇಳಿದ್ದೆ. ಇದು ಸತ್ಯ ಕೂಡ. ಇದು ನನ್ನ ಹೇಳಿಕೆ ಅಲ್ಲ. ಸ್ವತಃ ಕಾಲಜ್ಞಾನ ಭವಿಷ್ಯವಾಣಿಯಂತೆ ಎಂದು ಹೇಳಿದ್ದಾರೆ.












Click it and Unblock the Notifications