ಇನ್ನೂ ಆರೇ ತಿಂಗಳ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ : ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ
ವಿಜಯಪುರ, ಆಗಸ್ಟ್14: ಏಳೆಂಟು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಬೀಳುತ್ತದೆ. ಇನ್ನೂ ಏಳೆಂಟು ತಿಂಗಳ ಕಾಯಿರಿ ನಮ್ಮದೇ ಸರ್ಕಾರ ಬರುತ್ತದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದ್ದಿದ್ದಾರೆ.
ವಿಜಯಪುರದಲ್ಲಿ ಭಾನುವಾರ ಸಂಜೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾರ್ಯಕರ್ತರಿಗೆ ಅಭಿನಂದನಾ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಈಗ ಕೇಳಿಬೇಡಿ ಅಂತಿದ್ದಾರೆ. ಇನ್ನೂ ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕೊಡೋದು ದೂರದ ಮಾತು ಎಂದು ಹೇಳಿದರು.

ಯಾರೇ ಏನೇ ಭವಿಷ್ಯ ನುಡಿದರೂ ಮತ್ತೆ ದೇಶದ ಪ್ರಧಾನಿ ನರೇಂದ್ರ ಮೋದಿ ಆಗುತ್ತಾರೆ. ಮೋದಿ ನೋಡಿ ಲೋಕಸಭಾ ಚುನಾವಣೆಯಲ್ಲಿ ವೋಟ್ ಹಾಕೋಣ, ವಿಜಯಪುರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಹೊಸ ಸರ್ಕಾರ ಬಂದಾಗ ಮೂರು ತಿಂಗಳ ಸಮಯ ಕೊಡಬೇಕಾಗುತ್ತದೆ
ಇನ್ಮುಂದೆ ನಮ್ಮ ಹೋರಾಟ ಆರಂಭವಾಗುತ್ತದೆ.
ಈಚೆಗೆ ಒಬ್ಬರು ಬಂದು ನನ್ನ ವಿರುದ್ಧ ಆರೋಪ ಮಾಡಿದ್ದರು. ಏನೇ ಕೊಡೋದಿದ್ದರೇ ಗೋಶಾಲೆಗೆ ಕೊಡಿ ಅಂತ ಅಧಿಕಾರಿಗಳಿಗೆ ಹೇಳುತ್ತೇನೆಂದು ಆರೋಪಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾನು ಯಾವುದೇ ವರ್ಗಾವಣೆ ದಂಧೆ ಮಾಡಿಲ್ಲ. ನಾನು ಯಾವತ್ತೂ ವರ್ಗಾವಣೆ ದಂಧೆ ಮಾಡಿಲ್ಲ, ನನಗೆ ಬೇಕಾದ ಅಧಿಕಾರಿಗಳನ್ನು ಸರ್ಕಾರ ನನ್ನ ಕ್ಷೇತ್ರಕ್ಕೆ ಹಾಕಿಕೊಟ್ಟಾಗ ಅವರು ಬಂದು ಭೇಟಿಯಾಗಿ ಹೂಗುಚ್ಛ ಕೊಡುತ್ತಿದ್ದರು. ಆಗ ಅಧಿಕಾರಿಗಳು ನಿಮ್ಮದು ಏನಾದರೂ ಇದೆಯೇನು ಅಂತ ಕೇಳುತ್ತಿದ್ದರು. ಆಗ ನಾನು ಯಾವುದೇ ಹಣ ತೆಗೆದುಕೊಳ್ಳಲ್ಲ, ಗೋಶಾಲೆಗೆ ನಿಮ್ಮಿಂದ ಏನಾದರೂ ಸಹಾಯ ಮಾಡಿ ಎನ್ನುತ್ತಿದ್ದೆ. ಗೋಶಾಲೆ ಹೆಸರಲ್ಲಿ ದುಡ್ಡು ತಿನ್ನುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ ತಿರುಗೇಟು ನೀಡಿದರು.
ಇನ್ನೂ ಬಹಳಷ್ಟು ಕಾರಣಗಳಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು. ಅನೇಕ ತಪ್ಪು ನಿರ್ಣಯಗಳು, ಕಾಂಗ್ರೆಸ್ ಗ್ಯಾರಂಟಿ ಘೋಷಣೆ, ಬಿಜೆಪಿ ಸರ್ಕಾರದಲ್ಲಿ ಕೆಲವು ಸಚಿವರು ಮಾಡಿದ ಭ್ರಷ್ಟಾಚಾರ, ಬಿಜೆಪಿ ಸರ್ಕಾರದಲ್ಲಿ ಹಿಂದುತ್ವ ನಿರ್ಲಕ್ಷ್ಯ ಆಯ್ತು. ಇವೆಲ್ಲ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ಬೀಳುವಂತಾಯಿತು ಎಂದು ಯತ್ನಾಳ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಎಷ್ಟೊಂದು ಚುನಾವಣೆ ಪ್ರಚಾರ ಮಾಡಿದರು. ಈಗ ನಾವು ಅಂದಾಜು ಮಾಡುತ್ತಿದ್ದೇವೆ ನರೇಂದ್ರ ಮೋದಿ ಪ್ರಚಾರಕ್ಕೆ ಬರದಿದ್ದರೇ ಇನ್ನೂ ಚೀಂತಾಜನಕವಾಗಿ ಸೋಲುತ್ತಿದ್ದೇವು. ಈಗ ರಾಜ್ಯದಲ್ಲಿ ಬಿಜೆಪಿ 66 ಸ್ಥಾನ ಗೆಲ್ಲಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಮೋದಿಯವರ ಪರಿಶ್ರಮ, ಪ್ರವಾಸದಿಂದಾಗಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ಅತೀ ಹೆಚ್ಚು ಪ್ರವಾಸ ಮಾಡಿರುವ ನಂಬರ್ ಒನ್ ರಾಜಕಾರಣಿ ನಾನು. ನಾನು 44 ಕಡೆಗಳಲ್ಲಿ ಸಭೆ ಮಾಡಿದೆ.
ಕೆಲವೊಂದು ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳು ಹೇಳುತ್ತಿದ್ದರು. ಸಾಬರಿಗೂ ನಮಗೆ ಚೆನ್ನಾಗಿದೆ, ನೀವೂ ಮುಸ್ಲಿಂಮರ ಬಗ್ಗೆ ಮಾತಾಡಬೇಡಿ ಅಂತಿದ್ದರು. ಏನು ನಾಲ್ಕೈದು ಸಾವಿರ ಸಾಬರ ವೋಟ್ ಬರ್ತಾವೋ ಇಲ್ಲವೋ, ಆದರೆ 50 ಸಾವಿರ ವೋಟ್ ಕಳೆದುಕೊಳ್ಳಬೇಕಾಗುತ್ತದೆ. ಒಂದಕ್ಕೆ ಗಟ್ಟಿಯಾಗಿರಬೇಕು, ನಾನು ಗಟ್ಟಿಯಾಗಿದ್ದೇನೆ ಎಂದು ಹೇಳಿದರು.
ವಿಜಯಪುರದಲ್ಲಿ ನನ್ನ ಸೋಲಿಸಲು ಎಷ್ಟು ಪ್ರಯತ್ನಗಳು ನಡೆದವು. ಈಗ ವಿಜಯಪುರದ ಕಾಂಗ್ರೆಸ್ ನ ಇಬ್ಬರು ಮಂತ್ರಿಗಳಾಗಿದ್ದಾರೆ, ಒಬ್ಬ ಮಂತ್ರಿ ವಿಜಯಪುರದಲ್ಲಿ ಮೆರವಣಿಗೆ ಮಾಡಿಕೊಳ್ಳಲಿಲ್ಲ. ಮತ್ತೊಬ್ಬ ಮಂತ್ರಿ ಮೆರವಣಿಗೆ ಮಾಡಿಕೊಂಡ. ಸಿದ್ದೇಶ್ವರ ದೇಗುಲದ ಬಳಿ ಮುಸ್ಲಿಂ ಧ್ವಜ ಹಾರಿಸಿ, ನಾಲ್ಕೈದು ಸಾವಿರ ಜನ ಸೇರಿದ್ದರು. ಇನ್ನೊಬ್ಬ ಮಂತ್ರಿ ಯಾಕೆ ಮೆರವಣಿಗೆ ಮಾಡಿಕೊಳ್ಳಲಿಲ್ಲ ಅಂದರೆ ವಿಜಯಪುರ ನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಸೋತಿದ್ದಕ್ಕೆ ನಾನು ವಿಜಯಪುರದಲ್ಲಿ ಮೆರವಣಿಗೆ ಮಾಡಿಕೊಳ್ಳಲಿಲ್ಲ ಅಂತ ಇನ್ನೊಬ್ಬ ಮಂತ್ರಿ ಹೇಳುತ್ತಾನೆ ಎಂದು ಪರೋಕ್ಷವಾಗಿ ಸಚಿವ ಶಿವಾನಂದ ಪಾಟೀಲ ವಿರುದ್ಧ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications