ಈ ವಾರಾಂತ್ಯದಲ್ಲಿ 1ದಿನ ರಜೆ ಹಾಕಿದ್ರೆ ಬ್ಯಾಂಕುಗಳಿಗೆ 5ದಿನ ರಜೆ
Recommended Video

ಸರಕಾರೀ ಮತ್ತು ಬ್ಯಾಂಕುಗಳಿಗೆ ಯುಗಾದಿ ಹಬ್ಬ ಭಾನುವಾರ ಬಿದ್ದರೇನಂತೆ ಮಾರ್ಚ್ ಮಾಸಾಂತ್ಯದಲ್ಲಿ ಸಿಗಲಿದೆಯಲ್ಲವೇ ಸಾಲು ಸಾಲು ಐದು ದಿನ ಬ್ಯಾಂಕ್ ರಜೆ. ಹಾಗಾಗಿ, ಗ್ರಾಹಕರು ತಮ್ಮ ತಮ್ಮ ಬ್ಯಾಂಕ್ ಕೆಲಸಗಳನ್ನು ಮಾರ್ಚ್ 28ರೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಾರ್ಚ್ 29ರಿಂದ ಏಪ್ರಿಲ್ 2ರವರೆಗೆ ರಜೆಯ ನಿಮಿತ್ತ ಐದು ದಿನ (ಮಾ 31 ಒಂದು ದಿನ ಬಿಟ್ಟು) ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕುಗಳ ವರ್ಕಿಂಗ್ ಡೇಗಳಂದೇ ಎಟಿಎಂನಲ್ಲಿ ದುಡ್ಡಿಗೆ ಪರದಾಡಬೇಕು, ಇನ್ನು ಈ ಐದು ದಿನಗಳಲ್ಲಿ ಇನ್ನೇನು ಕಥೆನೋ?
ಮಹಾವೀರ ಜಯಂತಿ, ಗುಡ್ ಫ್ರೈಡೆ, ಬ್ಯಾಂಕ್ ವಾರ್ಷಿಕ ಲೆಕ್ಕಪತ್ರದ ಮುಕ್ತಾಯ ದಿನ ಮತ್ತು ಭಾನುವಾರದ ರಜೆಯಿಂದಾಗಿ ನಾಲ್ಕುದಿನ ಬ್ಯಾಂಕ್ ವಹಿವಾಟುಗಳು ಇರುವುದಿಲ್ಲ. ರಜೆಯ ದೃಷ್ಟಿಯಿಂದ ಎಟಿಎಂನಲ್ಲಿ ಹಣ ತುಂಬಿಸಲು ಮುಂಜಾಗೃತಾ ಕ್ರಮ ತೆಗೆದುಕೊಳ್ಳುವುದಾಗಿ ಬ್ಯಾಂಕ್ ಅಧಿಕಾರಿಗಳು ಭರವಸೆಯನ್ನೇನೋ ನೀಡಿದ್ದಾರೆ.

ಎರಡು ತಿಂಗಳ ಹಿಂದೆ ಅಂದರೆ ಜನವರಿಯಲ್ಲೂ ಇದೇ ರೀತಿ ಸಾಲುಸಾಲು ರಜೆಯ ಸವಿಯನ್ನು ಬ್ಯಾಂಕ್ ಅಧಿಕಾರಿಗಳು ಅನುಭವಿಸಿದ್ದರು. ಮಾರ್ಚ್ 29ರಿಂದ ಏಪ್ರಿಲ್ 2ರ ವರೆಗಿನ ರಜೆಗಳ ಪಟ್ಟಿ ಇಂತಿದೆ:
ಮಾರ್ಚ್ 29 - ಮಹಾವೀರ ಜಯಂತಿ
ಮಾರ್ಚ್ 30 - ಗುಡ್ ಫ್ರೈಡೆ
ಮಾರ್ಚ್ 31 - ವರ್ಕಿಂಗ್ ಡೇ
ಏಪ್ರಿಲ್ 1 - ಭಾನುವಾರ
ಏಪ್ರಿಲ್ 2- ಬ್ಯಾಂಕ್ ವಾರ್ಷಿಕ ಲೆಕ್ಕಪತ್ರದ ಕೊನೆಯ ದಿನ












Click it and Unblock the Notifications