Bank Holidays: ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ
Karnataka bank holidays March 2026: ಕರ್ನಾಟಕದಲ್ಲಿ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಮಾರ್ಚ್ ತಿಂಗಳಿನಲ್ಲಿ 10 ದಿನ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಮತ್ತೊಂದೆಡೆ, ಸಾಮಾನ್ಯ ಗ್ರಾಹಕರಿಗೆ ತೊಂದರೆ ಆಗುವ ಸಾಧ್ಯತೆಯಿದೆ. ಯಾವೆಲ್ಲ ದಿನ ಬ್ಯಾಂಕ್ ಬಂದ್ ಆಗಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರ್ಚ್‌ನಲ್ಲಿ ಯುಗಾದಿ, ರಂಜಾನ್, ಹಾಗೂ ಮಹಾವೀರ್ ಜಯಂತಿ ಹಾಗೂ ವಾರಾಂತ್ಯದ ರಜೆಗಳು ಸೇರಿ ಒಟ್ಟು 10 ರಜೆಗಳು ಸಿಗಲಿವೆ. ಸಾಮಾನ್ಯವಾಗಿ ಎರಡು, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದನ್ನು ಹೊರತುಪಡಿಸಿದರೆ, ಸರ್ಕಾರಿ ರಜೆ ದಿನಗಳಂದು ಬ್ಯಾಂಕ್‌ಗಳು ಮುಚ್ಚಲಿವೆ.

ಮಾರ್ಚ್‌ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ
ಮಾರ್ಚ್ 1 - ಭಾನುವಾರ
ಮಾರ್ಚ್ 8 - ಭಾನುವಾರ
ಮಾರ್ಚ್ 14 - ಎರಡನೇ ಶನಿವಾರ
ಮಾರ್ಚ್ 15 - ಭಾನುವಾರ
ಮಾರ್ಚ್ 19 - ಯುಗಾದಿ
ಮಾರ್ಚ್ 21 - ರಂಜಾನ್
ಮಾರ್ಚ್ 22 - ಭಾನುವಾರ
ಮಾರ್ಚ್ 28 - ನಾಲ್ಕನೇ ಶನಿವಾರ
ಮಾರ್ಚ್ 29 - ಭಾನುವಾರ
ಮಾರ್ಚ್ 31 - ಮಹಾವೀರ ಜಯಂತಿ
ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 4ರಂದು ಬೆಂಗಳೂರಿನ ಹಲವಾರು ಐಟಿ-ಬಿಟಿ ಕಂಪನಿಗಳು ರಜೆ ಘೋಷಿಸಿವೆ. ಜೊತೆಗೆ, ರಾಜ್ಯ ಸರ್ಕಾರವು ಪರಿಮಿತ ರಜೆಗಳ ಪಟ್ಟಿಯಲ್ಲಿ ಮಾರ್ಚ್ 2 ಸೋಮವಾರ ಹೋಳಿ ಆಚರಣೆಗೆ ರಜೆ ಪಡೆಯಲು ಅವಕಾಶ ಕಲ್ಪಿಸಿದೆ ಎನ್ನುವ ಮಾಹಿತಿಯಿದೆ.
ಮಾರ್ಚ್‌ನಲ್ಲಿ ಮೂರು ಸಾರ್ವತ್ರಿಕ ರಜೆಗಳು
* ಮಾರ್ಚ್ 19 - ಯುಗಾದಿ
* ಮಾರ್ಚ್ 21 - ರಂಜಾನ್
* ಮಾರ್ಚ್ 31 - ಮಹಾವೀರ ಜಯಂತಿ
ಸರಣಿ ರಜೆ ಪಡೆಯುವ ಅವಕಾಶ
ಮಾರ್ಚ್‌ನಲ್ಲಿ ನೌಕರರಿಗೆ ಎರಡು ಬಾರಿ ದೀರ್ಘ ವಾರಾಂತ್ಯದ ಲಾಭ ಪಡೆಯುವ ಅವಕಾಶವೂ ಇದೆ.
ಮೊದಲ ಅವಕಾಶದಲ್ಲಿ, ಮಾರ್ಚ್ 19 ಗುರುವಾರ ಯುಗಾದಿ ರಜೆ, ಮಾರ್ಚ್ 21 ರಂಜಾನ್, ಮಾರ್ಚ್ 22 ಭಾನುವಾರ ಇರುವುದರಿಂದ, ಶುಕ್ರವಾರ (ಮಾರ್ಚ್ 20) ಒಂದು ದಿನ ರಜೆ ಪಡೆದರೆ ನಾಲ್ಕು ದಿನಗಳ ನಿರಂತರ ರಜೆಗಳು ಸಿಕ್ಕಂತಾಗಲಿವೆ. ಅಲ್ಲದೆ, ಮಾರ್ಚ್ 28 ಮತ್ತು 29 ವಾರಾಂತ್ಯ ರಜೆಗಳಾಗಿದ್ದು, ಮಾರ್ಚ್ 31 ಮಹಾವೀರ ಜಯಂತಿ ಇರುವುದರಿಂದ, ಮಾರ್ಚ್ 30ರಂದು ಒಂದು ದಿನ ರಜೆ ಪಡೆದರೆ ಮತ್ತೊಮ್ಮೆ ನಾಲ್ಕು ದಿನಗಳ ಸರಣಿ ರಜೆಯನ್ನು ಪಡೆಯಬಹುದಾಗಿದೆ. ಹೀಗೆ ಮಾರ್ಚ್ ತಿಂಗಳಲ್ಲಿ ನೌಕರರಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಪ್ರವಾಸ ಯೋಜನೆ ಮಾಡಲು ಇದೇ ಸೂಕ್ತ ಸಮಯ ಎಂದು ಹೇಳಲಾಗುತ್ತದೆ.












Click it and Unblock the Notifications