Get Updates
Get notified of breaking news, exclusive insights, and must-see stories!

Bank Holidays in september 2024: ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್ ರಜೆ!

2024ನೇ ಸಾಲಿನ ಸೆಪ್ಟೆಂಬರ್‌ನಲ್ಲಿ ಇರುವುದು 30 ದಿನ. ಅದರಲ್ಲಿ 15 ದಿನಗಳು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ತಿಂಗಳಿನಲ್ಲಿ ಸಾಲು ಸಾಲು ಹಬ್ಬ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರವೂ ಸೇರಿದಂತೆ ಒಟ್ಟು 15 ದಿನಗಳು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಅದು ಯಾವುದು ಎನ್ನುವ ವಿವರ ಈ ಲೇಖನದಲ್ಲಿದೆ.

ಈ ತಿಂಗಳ ಮೊದಲ ದಿನವೇ ಭಾನುವಾರ ಬಂದಿದ್ದು, ಮೊದಲ ದಿನವೇ ರಜೆಯೊಂದಿಗೆ ಪ್ರಾರಂಭವಾಗಿದೆ. ಸೆಪ್ಟೆಂಬರ್‌ 1ನ್ನೂ ಸೇರಿದಂತೆ ಈ ತಿಂಗಳಿನಲ್ಲಿ ಒಟ್ಟು ಬ್ಯಾಂಕ್‌ಗಳಿಗೆ ಬರೋಬ್ಬರಿ 15 ರಜೆ ಇರಲಿದೆ. ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಈ 15 ದಿನಗಳು ರಜೆ ಇರಲಿದ್ದು, ಸ್ಥಳೀಯ ಬ್ಯಾಂಕ್‌ಗಳಲ್ಲಿ ಸಣ್ಣಪುಟ್ಟ ಬದಲಾವಣೆ ಇರಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಧಿಕೃತ ಮಾಹಿತಿಯ ಅನುಸಾರ ಈ ದಿನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

Bank Holidays in September 2024 15 days bank holiday in September

01 ಸೆಪ್ಟೆಂಬರ್: ಭಾನುವಾರ (ಎಲ್ಲಾ ಬ್ಯಾಂಕ್‌ಗಳಿಗೂ ರಜೆ)

04 ಸೆಪ್ಟೆಂಬರ್: ಶಂಕರದೇವ ತಿರೋಭಾವ ತಿಥಿ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ (ಅಸ್ಸಾಂ) ರಜೆ ಇರಲಿದೆ.

07 ಸೆಪ್ಟೆಂಬರ್: ಈ ತಿಂಗಳ ಮೊದಲ ಶನಿವಾರದಂದು ಗಣೇಶ ಚತುರ್ಥಿ ಇರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ದಿನ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

08 ಸೆಪ್ಟೆಂಬರ್: ಭಾನುವಾರವಾಗಿದ್ದು, ಎಲ್ಲಾ ಬ್ಯಾಂಕ್‌ ರಜೆ ಇರಲಿದೆ.

14 ಸೆಪ್ಟೆಂಬರ್: ಈ ತಿಂಗಳ ಎರಡನೇ ಶನಿವಾರದಂದು ಕೇರಳದ ವಿಶೇಷ ಹಬ್ಬವಾದ ಓಣಂ ಆಚರಣೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕ್‌ಗಳಿಗೂ ರಜೆ ಇರಲಿದೆ.

15 ಸೆಪ್ಟೆಂಬರ್: ಭಾನುವಾರ ರಜೆ ಇರಲಿದೆ.

16 ಸೆಪ್ಟೆಂಬರ್ ಸೋಮವಾರವಾಗಿದ್ದು, ಈ ದಿನ ಮುಸ್ಲಿಂ ಸಮುದಾಯದ ಹಬ್ಬ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ) ಈದ್-ಎ-ಮಿಲಾದ್ ಹಬ್ಬ ಇರುವ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

17 ಸೆಪ್ಟೆಂಬರ್: ಈದ್-ಎ-ಮಿಲಾದ್ ಹಿನ್ನೆಲೆಯಲ್ಲಿ ಸಿಕ್ಕಿಂ ಹಾಗೂ ಛತ್ತೀಸ್‍ಘಡ್‌ ದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

18 ಸೆಪ್ಟೆಂಬರ್: ಈ ದಿನ ಅಸ್ಸಾಂನ ಪಾಂಗ್-ಲಬ್ಸೋಲ್ (ಸ್ಮರಣಾರ್ಥ ಉತ್ಸವ) ಇರುವುದರಿಂದ ಅಂದು ಸಹ ಬ್ಯಾಂಕ್‌ ರಜೆ ಇರಲಿದೆ.

20 ಸೆಪ್ಟೆಂಬರ್: ಶುಕ್ರವಾರವಾರವಾಗಿದ್ದು, ಈದ್-ಇ-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರ ಭಾಗದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

21 ಸೆಪ್ಟೆಂಬರ್: ಶ್ರೀ ನಾರಾಯಣ ಗುರು ಅವರ ಸಮಾಧಿದಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

22 ಸೆಪ್ಟೆಂಬರ್: ಭಾನುವಾರ ರಜೆ ಇರಲಿದೆ.

23 ಸೆಪ್ಟೆಂಬರ್: ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

28 ಸೆಪ್ಟೆಂಬರ್: ನಾಲ್ಕನೇ ಶನಿವಾರದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

29 ಸೆಪ್ಟೆಂಬರ್: ಇನ್ನು ಈ ತಿಂಗಳ ಕೊನೆಯ ಭಾನುವಾರವು ಸಹ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ರಾಜ್ಯದಿಂದ ರಾಜ್ಯಕ್ಕೆ ಬದಲಾಗಲಿದೆ ರಜೆದಿನ

ಗಮನಿಸಿ, ಈ ಎಲ್ಲಾ ಬ್ಯಾಂಕ್‌ ರಜೆಗಳು ಸಹ ಕರ್ನಾಟಕದ ಎಲ್ಲಾ ಬ್ಯಾಂಕ್‌ಗಳಲ್ಲಿಯೂ ರಜೆ ಇರುವ ಸಾಧ್ಯತೆ ಇಲ್ಲ. ಭಾರತದ ಆಯಾ ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್‌ ರಜೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಆದರೆ, ಎರಡನೇ ಶನಿವಾರ ಹಾಗೂ ಭಾನುವಾರ ಮತ್ತು ಕೆಲವು ವಿಶೇಷ ದಿನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+