ಸುದ್ದಿ ಚಿತ್ರ: ಐಟಿ ಹೊರಗುತ್ತಿಗೆ, ಬೆಂಗಳೂರು ಟಾಪ್
ಬೆಂಗಳೂರು, ಜ.27: ವಿಶ್ವದ ಅಗ್ರಗಣ್ಯ ಹೊರ ಗುತ್ತಿಗೆ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ನಾಲ್ಕು ನಗರಗಳು ಕಾಣಿಸಿಕೊಂಡಿದೆ. ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಟಾಪ್ ಸ್ಥಾನದಲ್ಲಿ ಮುಂದುವರೆದಿದೆ.
ಥೋಲೋನ್ಸ್ ಸಂಸ್ಥೆ ವರದಿ ಪ್ರಕಾರ ವಿಶ್ವದ ಅಗ್ರಗಣ್ಯ ಐಟಿ ಹೊರ ಗುತ್ತಿಗೆ ಸಂಸ್ಥೆಗಳನ್ನು ಹೊಂದಿರುವ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನ ಗಳಿಸಿದೆ. ವಿಶ್ವದ ಟಾಪ್ 100 ಹೊರ ಗುತ್ತಿಗೆ ತಾಣಗಳ ಪೈಪೋಟಿ ನಡುವೆ ಬೆಂಗಳೂರು ಸತತವಾಗಿ ಎರಡನೇ ಬಾರಿಗೆ ನಂ.1 ಸ್ಥಾನದಲ್ಲಿ ಮುಂದುವರೆದಿದೆ.
ಉಳಿದಂತೆ ಮುಂಬೈ ಮೂರನೇ ಸ್ಥಾನದಲ್ಲಿದ್ದರೆ, ದೆಹಲಿ ಎನ್ ಸಿಆರ್ ಪ್ರದೇಶ ನಾಲ್ಕನೇ ಸ್ಥಾನ ಹಾಗೂ ಚೆನ್ನೈ ಐದನೇ ಸ್ಥಾನದಲ್ಲಿದೆ. ಉಳಿದಂತೆ ಹೈದರಾಬಾದ್, ಪುಣೆ, ಚಂಡೀಗಢ, ಕೋಲ್ಕತ್ತಾ, ಕೊಯಮತ್ತೂರು, ಜೈಪುರ, ಭುವನೇಶ್ವರ, ಅಹಮದಾಬಾದ್ ಹಾಗೂ ತಿರುವನಂತಪುರ ಕೂಡಾ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಫಿಲಿಫೈನ್ಸ್ ನ ಮೆಟ್ರೋ ಮನಿಲಾ ಎರಡನೇ ಸ್ಥಾನ ಪಡೆದಿದೆ. ಇನ್ನುಳಿದಂತೆ ಸೆಬು ನಗರ, ದಾವೋಸ್ ನಗರ, ಸ್ಟಾ ರೋಸಾ, ಬಾಕೊಲೊಡ್ ಸಿಟಿ, ಇಲಿಯೋಲೊ ಸಿಟಿ, ಬಾಗಿಯೋ ಸಿಟಿ ಪಟ್ಟಿಯಲ್ಲಿದೆ. ಚೀನಾದ ಶಾಂಘೈ, ಬೀಜಿಂಗ್, ಚೆಂಗ್ದು(ಕ್ಯಾಂಟನ್), ಟಿಯಾಜಿನ್ ಹಾಗೂ ಕ್ಸಿಯಾನ್ ನಗರಗಳು ಕೂಡಾ ಥೊಲೊನ್ ಟಾಪ್ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಐಟಿ ಹೊರಗುತ್ತಿಗೆ ನಗರಗಳಲ್ಲಿ ಗುರ್ ಗಾಂವ್
ದೆಹಲಿ ಎನ್ ಸಿಆರ್ ಪ್ರದೇಶಕ್ಕೆ ಸೇರಿರುವ ಗುರ್ ಗಾಂವ್ ಐಟಿ ಹೊರಗುತ್ತಿಗೆ ಕ್ಷೇತ್ರ ಎನಿಸಿದರೂ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಮುಕ್ತವಾಗಿಲ್ಲ

ಜಮ್ಮು ಮತ್ತು ಕಾಶ್ಮೀರದಲ್ಲಿ ಚೆಲುವೆ ಶ್ರದ್ಧಾ
ಪ್ರೇಮ ಕಥಾನಕದ ನಂತರ ವಿಭಿನ್ನ ಪಾತ್ರ ನಿರ್ವಹಿಸುತ್ತಿರುವ ಶ್ರದ್ಧಾ ಕಪೂರ್ ಅವರು ಹೈದರ್ ಚಿತ್ರದ ಚಿತ್ರೀಕರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿದಾಗ ಕಂಡಿದ್ದು ಹೀಗೆ

ಅಮೆರಿಕದಲ್ಲಿ ಮಹಾತ್ಮಾ ಗಾಂಧಿ, ನೆಹರೂ
ವಾಷಿಂಗ್ಟನ್ : ನ್ಯಾಷನಲ್ ಪ್ರೆಸ್ ಕ್ಲಬ್ ಅಧ್ಯಕ್ಷ(ಎಡ) ಗಿಲ್ ಕ್ಲೀನ್, ಮ್ಯಾಕ್ಸ್ ಡೆಸ್ ಫಾರ್ ಛಾಯಾಗ್ರಹಕ(ಮಧ್ಯ) ಹಾಗೂ ಮ್ಯಾರೊನ್ ಬೆಲ್ ಕೈಂಡ್(ಬಲ) ಅವರು ಮಹಾತ್ಮಾ ಗಾಂಧಿ ಹಾಗೂ ಜವಹಾರ ಲಾಲ್ ನೆಹರೂ ಇರುವ ಐತಿಹಾಸಿಕ ಚಿತ್ರದ ಜತೆಗೆ

ರಾಜಸ್ಥಾನದಲ್ಲಿ ಮಂಜು ಮುಸುಕಿದ ವಾತಾವರಣ
ರಾಜಸ್ಥಾನದ ಬೀವಾರ್ ನಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ನಿಂತಿರುವ ರೈಲು












Click it and Unblock the Notifications