ಊರಿಗೆ ತೆರಳಲು ಪೀಣ್ಯಕ್ಕೆ ಹೋಗಬೇಕು

ಬೆಂಗಳೂರು. ಸೆ. 6: ನೂತನವಾಗಿ ನಿರ್ಮಾಣವಾಗಿರುವ ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣಕ್ಕೆ ಮೆಜೆಸ್ಟಿಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಅನೇಕ ಮಾರ್ಗದ ಬಸ್‌ಗಳನ್ನು ಬದಲಾಯಿಸಲು ಆದೇಶ ಹೊರಡಿಸಲಾಗಿದೆ. ಸೆಪ್ಟಂಬರ್‌ 10ರಿಂದ ರಾಜ್ಯದ ವಿವಿಧೆಡೆ ಸಂಪರ್ಕ ಕಲ್ಪಿಸುವ ಬಸ್‌ಗಳು ಪೀಣ್ಯ ಮಾರ್ಗವಾಗಿ ಸಂಚರಿಸಲಿದ್ದು ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಆಗಮಿಸುವುದಿಲ್ಲ.

ಮಹಾನಗರದ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಮೊದಲ ಹಂತವಾಗಿ ದಾವಣಗೆರೆ-ಹುಬ್ಬಳ್ಳಿ ವಲಯದ ಬಸ್‌ಗಳನ್ನು ವರ್ಗಾಯಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.(ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತಾ?)

ksrtc

ಚಿತ್ರದುರ್ಗ, ಸಿರಿಗೆರೆ, ದಾವಣಗೆರೆ, ಹರಪನಹಳ್ಳಿ, ಹರಿಹರ, ಹೂವಿನಹಡಗಲಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾವೇರಿ, ಸವಣೂರು, ಹುಬ್ಬಳ್ಳಿ, ಗದಗ , ಧಾರವಾಡ, ಬೆಳಗಾವಿ, ಸಂಕೇಶ್ವರ, ಕೋಲ್ಲಾಪುರ, ಲಕ್ಷ್ಮೀಶ್ವರ, ರೋಣ, ನರಗುಂದ, ರಾಮದುರ್ಗ, ಮುಂಡರಗಿಗೆ ತೆರಳುವ ಬಸ್‌ಗಳು ಪೀಣ್ಯದಿಂದಲೇ ಹೊರಡಲಿವೆ.

ದಾಂಡೇಲಿ, ಹಳಿಯಾಳ, ನವಲಗುಂದ, ಸವದತ್ತಿ, ಬೈಲಹೊಂಗಲ, ಖಾನಾಪುರ, ರಾಯಭಾಗ, ಜಮಖಂಡಿ, ಅಥಣಿ, ಮೀರಜ್‌, ಗೋಕರ್ಣ ಮುಂತಾದ ಮಾರ್ಗಗಳ ಬಸ್‌ಗಳು ಸೆ 10ರಿಂದ ಪೀಣ್ಯ ನಿಲ್ದಾಣದಿಂದ ಸಂಚರಿಸಿಲಿವೆ. ಆದರೆ ಶಿವಮೊಗ್ಗ ವಿಭಾಗದ ಬಸ್‌ಗಳು ಮೆಜೆಸ್ಟಿಕ್‌ನಿಂದಲೇ ಸಂಚರಿಸಲಿವೆ.

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಪೀಣ್ಯಕ್ಕೆ ಸಂಚರಿಸಲು ಸಂಪರ್ಕ ಸಾರಿಗೆ ಕಲ್ಪಿಸಲಾಗಿದ್ದು ಟಿಕೆಟ್‌ ಪಡೆಯುವ ರೀತಿ ಮತ್ತು ದರವನ್ನು ಸ್ಪಷ್ಟವಾಗಿ ವಿವರಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+