ದೇಶ ವಿಭಜಿಸುವವರ ಪಾಲಿಗೆ ಬೆಂಗಳೂರು ಗುರಿ: ಅನಂತಕುಮಾರ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ನವೆಂಬರ್ 1: ಸರ್ದಾರ್ ವಲ್ಲಭ ಭಾಯ್ ಪಟೇಲ್ ಜನ್ಮದಿನದ ಪ್ರಯುಕ್ತ ಸೋಮವಾರ ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಯಿತು. ಕೇಂದ್ರ ಸಚಿವ ಅನಂತಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಅಖಂಡತೆಗೆ ವಲಭ ಭಾಯ್ ಪಟೇಲ್ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಬ್ರಿಟಿಷರ ಆಳ್ವಿಕೆ ವೇಳೆ ದೇಶದಲ್ಲಿ 556 ರಾಜಾಡಳಿತವಿರುವ ಪ್ರದೇಶಗಳಿದ್ದವು. ಬ್ರಿಟಿಷರ ಒಡೆದು ಆಳುವ ನೀತಿಯ ಮಧ್ಯೆ ಅವುಗಳನ್ನೆಲ್ಲ ಒಗ್ಗೂಡಿಸುವುದು ಸುಲಭದ ವಿಚಾರ ಆಗಿರಲಿಲ್ಲ. ದೇಶವನ್ನು ಒಟ್ಟುಗೂಡಿಸಿದ್ದರಲ್ಲಿ ಸರ್ದಾರ್ ಪಟೇಲ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.[ಪಟೇಲರಿಗೆ ಅಧ್ಯಕ್ಷ ಗಾದಿ ತಪ್ಪಿಸಿತೆ ಮೋತಿಲಾಲರ ಪತ್ರ?]

Sardhar patel

ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಮತ್ತು ನಕ್ಸಲೀಯರಿಂದ ದೇಶವು ಈಗಲೂ ಸವಾಲುಗಳನ್ನು ಎದುರಿಸುತ್ತಿದೆ ಎಂದ ಅನಂತಕುಮಾರ್. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಸರ್ಜಿಕಲ್ ಸ್ಟ್ರೈಕ್ ಗೆ ಪ್ರೇರಣೆ ಸರ್ದಾರ್ ವಲ್ಲಭ ಭಾಯ್ ಪಟೇಲರೇ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯತೆ ಪ್ರತಿಪಾದಿಸುವವರ ಮೇಲೆ ದಾಳಿಗಳಾಗುತ್ತಿವೆ. ದೇಶ ವಿರೋಧಿ ಘೋಷಣೆಗಳು ಕೇಳಿಬರುತ್ತಿವೆ. ಇಂಥ ಕೃತ್ಯಗಳ ವಿರುದ್ಧ ಮೃದು ಧೋರಣೆ ತಳೆಯಲಾಗಿದೆ. ಈ ರೀತಿ ದೇಶ ವಿಭಜಿಸುವವರ ಪಾಲಿಗೆ ಬೆಂಗಳೂರು ಗುರಿಯಾಗಿದೆ. ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಂಥ ಧೋರಣೆ ಖಂಡನೀಯ ಎಂದರು.[ಚಿತ್ರಗಳಲ್ಲಿ ನೋಡಿ ರಾಷ್ಟ್ರೀಯ ಏಕತಾ ಓಟ]

ರಾಷ್ಟ್ರೀಯ ಭದ್ರತೆಗೆ ಹಾಗೂ ಆಂತರಿಕ ಸುರಕ್ಷತೆಗೆ ಆತಂಕ ಎದುರಾದಾಗ ಅಂಥ ವಿಚಾರವನ್ನು ಗಂಭೀರವಾಗಿ ನಿರ್ವಹಿಸಬೇಕು. ಗುಜರಾತ್ ನಲ್ಲಿ ಏಕತಾ ಪ್ರತಿಮೆಯನ್ನು ಮೋದಿ ಅವರ ನೇತೃತ್ವದಲ್ಲಿ ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ananth Kumar, central minister alleged against state government that, The attacks on cadre of nationalist forces is a mirror to the law and order situation in the state. He spoke in Rashtriya Ektha Diwas on Monday in Bengaluru.
Please Wait while comments are loading...