ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್‌ ಆದ್ಮಿ ಪಕ್ಷ ಸೇರಿಕೊಂಡ ಮಾಜಿ ಇನ್ಫಿ

By Srinath
|
Google Oneindia Kannada News

Bangalore- Infosys ex-board member V Balakrishnan joins AAP
ನವದೆಹಲಿ, ಜ.2- ದಿಲ್ಲಿಯಲ್ಲಿ ವಿಜಯ ದುಂಧುಬಿ ಮೊಳಗಿಸಿದ ಅರವಿಂದ್ ಕೇಜ್ರಿವಾಲಾ ನೇತೃತ್ವದ ಆಮ್‌ ಆದ್ಮಿ ಪಕ್ಷವು ಸದ್ದಿಲ್ಲದೆ ಸಂಚಲನವನ್ನುಂಟುಮಾಡುತ್ತಿದೆ. ಮಾಜಿ ಇನ್ಫಿ ನಂದನ ನೀಲೇಕಣಿ ಅವರು ಕಾಂಗ್ರೆಸ್ ಪಕ್ಷಕ್ಕೆ ಆಧಾರ್ ಆಗುವ ಸೂಚನೆಗಳು ಸ್ಪಷ್ಟವಾಗುತ್ತಿರುವ ಸಂದರ್ಭದಲ್ಲೇ ಮತ್ತೊಬ್ಬ ಮಾಜಿ ಇನ್ಫಿ ವಿ ಬಾಲಕೃಷ್ಣನ್ ಅವರು ಇದೀಗ ಆಮ್‌ ಆದ್ಮಿ ಪಕ್ಷದ ಮನೆ ಹೊಕ್ಕಿದ್ದಾರೆ.

ಖಚಿತ ಮೂಲಗಳ ಪ್ರಕಾರ ಇನ್ಫೋಸಿಸ್ ಬಿಪಿಓ ಮುಖ್ಯಸ್ಥ, ಫಿನಾಕಲ್, ಇಂಡಿಯಾ ಬ್ಯುಸಿನೆಸ್ ಯೂನಿಟ್ ಮತ್ತು ಇನ್ಫೋಸಿಸ್ ಲೋಡ್‌ ಸ್ಟೋನ್ ಚೇರ್‌ ಮೆನ್ ಮುಖ್ಯಸ್ಥರಾಗಿದ್ದು, ಇತ್ತೀಚೆಗೆ ರಾಜೀನಾಮೆ ನೀಡಿದ್ದ ಬಾಲಕೃಷ್ಣನ್ ಅವರು ರಾಜಕೀಯ ಪ್ರವೇಶ ಮಾಡಿದ್ದು, ಹೊಸ ವರ್ಷದ ಮೊದಲ ದಿನದಂದು AAP ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ.

ಇದರಿಂದ ಭ್ರಷ್ಟಾಚಾರ ವಿರೋಧಿ ಪಕ್ಷವೆನಿಸಿರುವ AAP ಪ್ರತಿಷ್ಠೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಅಂದರೆ ಲೋಕಸಭೆ ವೇಳೆಗೆ ಇನ್ನೂ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಪಕ್ಷವನ್ನು ಸೇರುವ ಲಕ್ಷಣಗಳಿವೆ. (ಅರವಿಂದ ಕೇಜ್ರಿವಾಲಾಗೆ ಇನ್ಫಿ ಮೂರ್ತಿ, ಟಾಟಾ ಹಣ)

'ದೇಶದ ರಾಜಕೀಯ ಚೌಕಟ್ಟಿನಲ್ಲಿ AAP ಕ್ರಾಂತಿಯನ್ನುಂಟುಮಾಡಿದೆ. ನಾನೂ ಸಹ ಈಗ ಆಮ್ ಆದ್ಮಿ ಸೆಳೆತಕ್ಕೆ/ ಮೋಡಿಗೆ ಒಳಗಾಗಿದ್ದೇನೆ' ಎಂದು ಬಾಲಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ. 1991ರಲ್ಲಿ Infosys ಸೇರಿದ್ದ ಅವರು ಕಂಪನಿಯ ಅತ್ಯುನ್ನತ ಸ್ಥಾನವಾದ ಸಿಇಒ ಸ್ಥಾನಕ್ಕೂ ಸ್ಪರ್ಧಿಸುವ ಹಂತಕ್ಕೆ ಬೆಳೆದಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ?:
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸುವ ಸೂಚನೆಗಳಿವೆ. ಹಾಗೇನಾದರೂ ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಇಬ್ಬರು ಮಾಜಿ ಇನ್ಫಿಗಳಾದ ನಂದನ ನೀಲೇಕಣಿ ಮತ್ತು ಬಾಲಕೃಷ್ಣನ್ ಅವರು ಚುನಾವಣೆಗೆ ಇಳಿದರೆ ಹಾಲಿ ಸಂಸದ ಅನಂತಕುಮಾರ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

English summary
Bangalore- Infosys ex-board member V Balakrishnan joins AAP. "Yes I have become the member of AAP, have got the confirmation today," Balakrishnan told PTI Yesterday. His move to dabble in politics comes three weeks after his sudden exit from India's second largest software services exporter, Infosys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X