ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ್, ಬಕ್ರೀದ್, ಗಣೇಶ ಚತುರ್ಥಿ...ಪೊಲೀಸರಿಗೆ ಬಿಡುವಿಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ಜುಲೈ 25ರಿಂದ ಸಾರಿಗೆ ಮುಷ್ಕರ, ಜುಲೈ 30ರಂದು ಕರ್ನಾಟಕ ಬಂದ್, ಸೆಪ್ಟೆಂಬರ್ 2ರಂದು ಕಾರ್ಮಿಕ ಸಂಘಟನೆಗಳ ಬಂದ್. ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್. ಸಾಲು-ಸಾಲು ಬಂದ್ ಹಿನ್ನಲೆಯಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

ಹೌದು. ಬಂದ್, ಗಣೇಶ ಚತುರ್ಥಿ, ಬಕ್ರೀದ್ ಹೀಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಕೈತುಂಬಾ ಕೆಲಸವಿದೆ. ಯಾವುದೇ ಅಹಿತರಕರ ಘಟನೆ ನಡೆಯದಂತೆ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸಾಲು-ಸಾಲು ಕೆಲಸಗಳಿಂದ ಅವರಿಗೂ ವಿಶ್ರಾಂತಿ ಇಲ್ಲದಂತಾಗಿದೆ.[ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

ಜುಲೈ 25ರಿಂದ ಮೂರು ದಿನಗಳ ಕಾಲ ಸಾರಿಗೆ ಮುಷ್ಕರ ನಡೆಯಿತು. ನಂತರ ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ ನಡೆಯಿತು. ನಂತರ ಎಬಿವಿಪಿ ಎರಡು ದಿನ ಬೃಹತ್ ಪ್ರತಿಭಟನೆ ನಡೆಸಿತು. ಸೆಪ್ಟೆಂಬರ್ 2ರಂದು ಭಾರತ್‌ ಬಂದ್, ಸೆಪ್ಟೆಂಬರ್ 5 ಗಣೇಶ ಚತುರ್ಥಿ, ಸೆ.9 ಕರ್ನಾಟಕ ಬಂದ್, ಸೆ.12 ಬಕ್ರೀದ್.

Bandh call, Bakrid, Ganesha processions series of events for police

ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸದ ಜೊತೆ ಪೊಲೀಸರನ್ನು ಭದ್ರತೆಗೂ ನಿಯೋಜನೆ ಮಾಡಲಾಗುತ್ತದೆ. ಹೀಗೆ ಸಾಲು-ಸಾಲು ಬಂದ್‌ಗಳಿಂದಾಗಿ ಪೊಲೀಸರಿಗೆ ಬಿಡುವಿಲ್ಲದಂತಾಗಿದೆ.[ಚಿತ್ರಗಳು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ]

ಬಂದ್‌ಗಳ ಸರಣಿ : 2016ರಲ್ಲಿ ಬಂದ್‌ಗಳ ಸರಣಿಯೇ ನಡೆಯುತ್ತಿದೆ. ಈಗ ಕಾವೇರಿ ವಿವಾದದ ಹಿನ್ನಲೆಯಲ್ಲಿ ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ದರಿಂದ ಪೊಲೀಸರಿಗೆ ಇನ್ನೊಂದು ವಾರ ಕೈ ತುಂಬಾ ಕೆಲಸವಿರುತ್ತದೆ.[ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್ ಗೆ ಜಾಮೀನು]

* 2016ರ ಮೇ 3ರಂದು ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೈತರು ಟ್ರಾಕ್ಟರ್‌ಗಳಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಪೊಲೀಸರು ರೈತರನ್ನು ತಡೆಯಲು ಹರಸಾಹಸ ಪಡಬೇಕಾಯಿತು.

* ನೂತನ ಪಿಎಫ್‌ ನೀತಿ ವಿರೋಧಿಸಿ ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಇದರಿಂದ ಪೊಲೀಸರಿಗೆ ಮೂರು ದಿನಗಳ ಕಾಲ ಹೆಚ್ಚು ಕೆಲಸವಿತ್ತು. ಹಿಂಸಾಚಾರದಲ್ಲಿ ಪೊಲೀಸರಿಗೂ ಗಾಯಗಳಾಗಿತ್ತು.

* ಜುಲೈ 3ರಿಂದ ಸಾರಿಗೆ ಸಂಸ್ಥೆಗಳ ನೌಕರರು ಮೂರು ದಿನಗಳ ಕಾಲ ಮುಷ್ಕರ ನಡೆಸಿದರು. ಇದರಿಂದಾಗಿ ಪೊಲೀಸರು ಮೂರು ದಿಗಳ ಕಾಲ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿದ್ದರು.

* ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಜುಲೈ 30ರಂದು ಕರ್ನಾಟಕ ಬಂದ್ ನಡೆಸಲಾಯಿತು. ಇದರಿಂದಾಗಿ ಎರಡು ದಿನಗಳ ಮಟ್ಟಿದೆ ಪೊಲೀಸರಿಗೆ ಹೆಚ್ಚಿನ ಕೆಲಸವಿತ್ತು.

* ಆಗಸ್ಟ್ 16ರಂದು ದೇಶವಿರೋಧಿ ಘೋಷಣೆ ಕೂಗಿದ್ದನ್ನು ಖಂಡಿಸಿ ಎಬಿವಿಪಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು.

* ಸೆಪ್ಟೆಂಬರ್ 2ರಂದು ವಿವಿಧ ಕಾರ್ಮಿಕ ಸಂಘಟನೆಗಳು ದೇಶವ್ಯಾಪ್ತಿ ಬಂದ್‌ಗೆ ಕರೆ ನೀಡಿದ್ದವು. ಅದು ಮುಗಿಯುತ್ತಿದ್ದಂತೆ ಸೆ.5ರಂದು ಗಣೇಶ್ ಚತುರ್ಥಿ ಎದುರಾಯಿತು.

English summary
Karnataka Bandh, Bakrid, Ganesha processions series of events coming up for Karnataka police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X