ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ನಿಷೇಧದಿಂದ 10 ಲಕ್ಷ ಉದ್ಯೋಗ ನಷ್ಟ

By Kiran B Hegde
|
Google Oneindia Kannada News

ಬೆಂಗಳೂರು, ಜ. 2: ಕರ್ನಾಟಕದ ಹಾಗೂ ಗೋವಾ ರಾಜ್ಯಗಳಲ್ಲಿ ಉಕ್ಕು ಗಣಿಗಾರಿಕೆ ಹಾಗೂ ರಫ್ತಿನ ಮೇಲೆ ಹೇರಿರುವ ನಿಷೇಧದಿಂದ ಸುಮಾರು 10 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಯೆಸ್ ಬ್ಯಾಂಕ್ ಹಾಗೂ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (Assocham) ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಕರ್ನಾಟಕ ಹಾಗೂ ಗೋವಾದಲ್ಲಿ ಗಣಿಗಾರಿಕೆ ರಫ್ತು ನಿಷೇಧಿಸಿದ ನಂತರ ಖನಿಜಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2009-10ರಲ್ಲಿ 117 ದಶಲಕ್ಷ ಟನ್ ರಫ್ತು ನಡೆದಿತ್ತು. ಆದರೆ, ನಿಷೇಧ ಹೇರಿದ ಮೇಲೆ ರಫ್ತು ಪ್ರಮಾಣ 2013-14 ದಶಲಕ್ಷ ಟನ್‌ಗೆ ಕುಸಿದಿದೆ. [ಅಕ್ರಮ ಗಣಿಗಾರಿಕೆ ಮೇಲಷ್ಟೇ ಸಿಬಿಐ]

mining

ಏಕಗವಾಕ್ಷಿ ಜಾರಿಗೆ ತನ್ನಿ : ಖಾಸಗಿ ವಲಯವನ್ನು ಪ್ರೋತ್ಸಾಹಿಸಲು ಹಸಿರು ಭೂಮಿ ಹಾಗೂ ಕಂದು ಭೂಮಿ ಪ್ರೊಜೆಕ್ಟ್‌ಗಳಿಗೆ ಕ್ಲಿಯರೆನ್ಸ್ ನೀಡಲು ಏಕಗವಾಕ್ಷಿಯಂತಹ ಅಭಿವೃದ್ಧಿಪರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. [ರೆಡ್ಡಿಗೆ ಜಾಮೀನು ನೀಡಲು 7 ಷರತ್ತು]

ನಗರೀಕರಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ವಿವಿಧ ಲೋಹಗಳು ಹಾಗೂ ಖನಿಗಳ ಬೇಡಿಕೆ 4ರಿಂದ 5 ಪಟ್ಟು ಹೆಚ್ಚುವ ನಿರೀಕ್ಷೆಯಿದೆ. ಉತ್ಪಾದನೆ ವಲಯವು ವಾರ್ಷಿಕ ಶೇ. 9ರಿಂದ 10ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

English summary
Ban on iron ore mining and exports in Karnataka and Goa led to job losses about 10 lakhs, directly and indirectly. A joint study conducted by Yes Bank and the Associated Chambers of Commerce and Industry (Assocham) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X