Get Updates
Get notified of breaking news, exclusive insights, and must-see stories!

Ballari Lok Sabha Election 2024: ಗಡಿ ನಾಡಿನಲ್ಲಿ ಇವರಿಗೆ ಗೆಲುವಿನ ಮಾಲೆ?

ದೇಶದಲ್ಲಿ ಏಳನೇ ಹಂತದ ಚುನಾವಣೆ ಭರದಿಂದ ಸಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಎಕ್ಸಿಟ್ ಪೋಲ್ ಹೊರ ಬೀಳಲಿದೆ. ಕರ್ನಾಟಕದಲ್ಲೂ ಈಗಾಗಲೇ ಎರಡೂ ಹಂತದ ಚುನಾವಣೆಗಳು ನಡೆದಿದ್ದು, ಅಭ್ಯರ್ಥಿಗಳಲ್ಲಿ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಬಾರಿ ಬಹಳ ಕುತೂಹಲ ಹುಟ್ಟಿಸಿರುವ ಕ್ಷೇತ್ರಗಳಲ್ಲಿ ಬಳ್ಳಾರಿ ಕೂಡಾ ಒಂದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಬಿಜೆಪಿ ಬಿ ಶ್ರೀರಾಮಲು ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇವರಿಗೆ ಹಾಲಿ ಸಂಡೂರಿ ವಿಧಾನಸಭಾ ಕ್ಷೇತ್ರದ ಶಾಸಕ ಇ ತುಕುರಾಮ ಬಿರುಸಿನ ಸ್ಪರ್ಧೆ ನೀಡಲಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಗಣಿ ನಾಡು, ಈಗ ಬಿಜೆಪಿ ಪರ ವಾಲಿದೆ.

Ballari Lok Sabha Election 2024 Results B Sriramulu vs E Tukaram Who Will Win

ಈ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಒಂದರಲ್ಲಿ ಮಾತ್ರ ಬಿಜೆಪಿ ಗೆಲುವು ದಾಖಲಿಸಿದೆ. ಇನ್ನು ಒಂದರಲ್ಲಿ ಜೆಡಿಎಸ್‌ ಜಯ ಸಾಧಿಸಿದರೆ, ಆರು ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿವೆ. 2000ರಲ್ಲಿ ಕೋಳುರು ಬಸವನಗೌಡ ಕಾಂಗ್ರೆಸ್‌ನಿಂದ ಕೊನೆಯ ಬಾರಿಗೆ ಇಲ್ಲಿಂದ ಲೋಕಸಭೆಗೆ ಪ್ರವೇಶ ಪಡೆದಿದ್ದರು. ಎರಡು ದಶಕಗಳಿಂದ ಈ ಕ್ಷೇತ್ರ ಬಿಜೆಪಿಗೆ ವರವಾಗಿದೆ.

ಈಗಾಗಲೇ 2014ರಲ್ಲಿ ಲೋಕಸಭೆಯನ್ನು ಇದೇ ಕ್ಷೇತ್ರದಿಂದ ಪ್ರತಿನಿಧಿಸಿರುವ ಬಿ.ಶ್ರೀರಾಮಲು ಹತ್ತು ವರ್ಷದ ಬಳಿಕ ದೆಹಲಿ ರಾಜಕರಾಣದತ್ತ ಮನಸ್ಸು ಮಾಡಿದ್ದಾರೆ.

ಕ್ಷೇತ್ರದಲ್ಲಿ ಸಮಸ್ಯೆಗಳೇನು?

ಕ್ಷೇತ್ರದಲ್ಲಿ ನೀರು, ತುಂಗಭದ್ರ ಜಲಾಶಯಕ್ಕೆ ಪರ್ಯಾಯ ಜಲಾಶಯ ನಿರ್ಮಾಣದ ಪ್ರಸ್ತಾಪ, ಬಳ್ಳಾರಿ-ಹೊಸಪೇಟೆ ಹೆದ್ದಾರಿ ಕಾಮಗಾರಿ, ಕೈಗಾರಿಕೆಗೆ ಭೂಮಿ ಕೊಟ್ಟವರಿಗೆ ಸಿಗದ ಪರಿಹಾರ, ಮೂಲ ಸೌಕರ್ಯದ ಕೊರತೆ ಈ ಭಾಗದಲ್ಲಿ ಬಹುವಾಗಿ ಕಾಡುತ್ತಿದೆ. ಈ ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿ ಈ ವಿಷಯದ ಬಗ್ಗೆ ಗಮನ ಹರಿಸಬೇಕಿದೆ.

Ballari Lok Sabha Election 2024 Results B Sriramulu vs E Tukaram Who Will Win

ಕಳೆದ ಚುನಾವಣೆಯ ಫಲಿತಾಂಶ

ಕಳೆದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ 6,16,338 ಮತಗಳನ್ನು ಪಡೆದಿದ್ದರು. ಇವರು ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ವಿ.ಎಸ್ ಉಗ್ರಪ್ಪ, 5,60,681 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಅಭ್ಯರ್ಥಿಗಳ ಬಲಾಬಲ

ಬಿ ಶ್ರೀರಾಮಲು ಅವರು ಕಳೆದ ವಿಧಾನ ಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದು, ಇದರ ಸಹಾನುಭೂತಿ ಕ್ಷೇತ್ರದಲ್ಲಿದ್ದು ಇದು ಅವರಿಗೆ ವರಾಗಬಹುದು. ಇನ್ನು ಜನರ್ಧಾನ್ ರೆಡ್ಡಿ ಸ್ಥಾಪಿಸಿದ ಕೆಆರ್‌ಪಿಪಿ ಪಕ್ಷ ವೀಲಿನ ವಾಗಿದ್ದು, ರಾಮುಲು ಅವರಿಗೆ ಬೂಸ್ಟ್ ನೀಡಬಹುದು. ಕ್ಷೇತ್ರದಲ್ಲಿ ಬಿಜೆಪಿಗೆ ಸಾಂಪ್ರದಾಯಿಕ ಮತಗಳು ಇದ್ದು, ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರವನ್ನು ಮಾಡುವಂತೆ ಮಾಡಿದೆ.

ಸಂಡೂರಿನ ಶಾಸಕ ಇ ತುಕಾರಮ್, ಒಳ್ಳೆಯ ಕೆಲಸಗಾರ ಎಂಬ ಇಮೇಜ್‌ ಬೆಳೆಸಿಕೊಂಡಿದ್ದಾರೆ. ಇದು ಇವರ ಗೆಲುವಿಗೆ ಪ್ಲಸ್ ಆಗಬಹುದು. ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ಕ್ಷೇತ್ರದಲ್ಲಿ ಮತದಾರರ ಮನ ವಲಿಸಬಹುದು.

ಜಾತಿ ಲೆಕ್ಕಾಚಾರ ಏನು?

ವಾಲ್ಮೀಕಿ ನಾಯಕ ಜನಾಂಗ, ಕುರುಬರು ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಮಿಕ್ಕಂತೆ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರರು ಸಮಾನ ಅವಕಾಶವನ್ನು ಹೊಂದಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು ಒಟ್ಟು 18,65,341 ಮತದಾರರು ಇದ್ದಾರೆ. ಇವರಲ್ಲಿ 9,20,022 ಪುರುಷ ಮತದಾರರು, 9,45,053 ಮಹಿಳಾ ಮತದಾರರು ಇದ್ದಾರೆ. ಇವರು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+