'ಬಹಮನಿ ಉತ್ಸವ'ದ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಚರ್ಚೆ!

Posted By: Gururaj
Subscribe to Oneindia Kannada

ಬೆಂಗಳೂರು, ಫೆಬ್ರವರಿ 14 : 'ಬಹಮನಿ ಸುಲ್ತಾನರ ಆಳ್ವಿಕೆ, ಗತಕಾಲದ ವೈಭವ ಬಿಂಬಿಸುವ ಬಹಮನಿ ಉತ್ಸವವನ್ನು ಕಲಬುರಗಿ ನಗರದಲ್ಲಿ ಮಾರ್ಚ್ 6ರಂದು ನಡೆಸಲಾಗುತ್ತದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ 'ಬಹಮನಿ ಉತ್ಸವ'ವನ್ನು ಆಚರಣೆ ಮಾಡಲಾಗುತ್ತದೆ. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಹಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.

ವಿವಾದಕ್ಕೆ ಕಾರಣವಾದ 'ಬಹಮನಿ ಉತ್ಸವ' ಆಚರಣೆ

ಟ್ವಿಟರ್‌ನಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರ ಜನರ ತೆರಿಗೆ ಹಣದಲ್ಲಿ 'ಬಹಮನಿ ಉತ್ಸವ' ಮಾಡಬಾರದು ಎಂದು ಸರಣಿ ಟ್ವಿಟ್‌ಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ.

ಕರ್ನಾಟಕದ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಮುಳ್ಳಾಗಿ ಕನ್ನಡಿಗರನ್ನು ಗುಲಾಮರಂತೆ ಕಂಡ ಬಹಮನಿ ಸುಲ್ತಾನರ ಉತ್ಸವವನ್ನು ಮಾಡಬಾರದು ಎಂದು ಮಾಡಬಾರದು ಎಂಬ ಒತ್ತಾಯ ಕೇಳಿಬರುತ್ತಿದೆ. ಟ್ವಿಟರ್‌ನಲ್ಲಿ ನಡೆಯುತ್ತಿರುವ ಚರ್ಚೆಯ ಮಾಹಿತಿ ಇಲ್ಲಿವೆ ನೋಡಿ.

ಬಹಮನಿ ಸಾಮ್ರಾಜ್ಯದ ಕುರಿತು :ಬಹಮನಿ ಸುಲ್ತಾನರು ದಕ್ಷಿಣ ಭಾರತದಲ್ಲಿ ಮೊದಲ ಮುಸ್ಲಿಂ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದರು. ಕರ್ನಾಟಕದ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ರಾಜವಂಶದವರು ಆಳ್ವಿಕೆ ನಡೆಸಿದ್ದಾರೆ. ಮೊದಲು ಈಗಿನ ಕಲಬುರಗಿಯಲ್ಲಿದ್ದ ರಾಜಧಾನಿಯನ್ನು ಅವರು ಬೀದರ್‌ಗೆ ವರ್ಗಾವಣೆ ಮಾಡಿಕೊಂಡಿದ್ದರು.

ಸುಮಾರು ಎರಡು ಶತಮಾನಗಳ ಕಾಲ ಬಹುಮನಿ ಸುಲ್ತಾನರು ದಕ್ಷಿಣ ಭಾರತವನ್ನು ಆಳಿದ್ದಾರೆ. ಮಹಮದ್ ಬಿನ್ ತುಘಲಕ್‌ ಪ್ರತಿನಿಧಿಗಳಾಗಿ ಅವನ ಚಕ್ರಾಧಿಪತ್ಯದ ದಕ್ಷಿಣ ಭಾರತದ ರಾಜ್ಯಗಳನ್ನು ಆಳುತ್ತಿದ್ದ ಅಮೀರರಿಂದ ಈ ಸಾಮ್ರಾಜ್ಯ ಸ್ಥಾಪನೆಯಾಯಿತು.

ನಿಜವಾದ ಇತಿಹಾಸ ಜನರಿಗೆ ತಿಳಿಸಿ

ಸರ್ಕಾರ ಉತ್ಸವ ಮಾಡುವ ಬದಲು ನಿಜವಾದ ಇತಿಹಾಸವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.

ಹಿಂದೂ ವಿರೋಧಿ ಸರ್ಕಾರ

ಕರ್ನಾಟಕ ಸರ್ಕಾರ ವಿರೋಧಿ ಅದಕ್ಕಾರಿ ಬಹಮನಿ ಉತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಟ್ವಿಟರ್‌ನಲ್ಲಿ ಟೀಕಿಸಲಾಗಿದೆ.

ಮತಗಳನ್ನು ಕಳೆದುಕೊಳ್ಳುತ್ತಾರೆ

ಟೆಂಪಲ್ ರನ್ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಹಲವು ಮತಗಳು ಬಂದಿದ್ದವು. ಈಗ ಅದನ್ನು ಕಳೆದುಕೊಳ್ಳುತ್ತದೆ ಎಂದು ಚರ್ಚೆ ನಡೆದಿದೆ.

ಅವರು ಕಮ್ಯುನಿಷ್ಟರೆ?

ವಿರೋಧ ಮಾಡುವವರು ಕಮ್ಯುನಿಷ್ಟರೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government proposal to organize Bahmani Sultan Utsav in Kalaburagi on March 6, 2018 sparks controversy. Various organizations opposed Govt move. Discussion on twitter on Bahmani utsav.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ