ಕನ್ನಡ ಟೀ ಶರ್ಟ್ ಮೂಲಕ ಸಿನಿಮಾಗಳಿಗೆ ವಿಭಿನ್ನ ಪ್ರಚಾರ

By: ಮಲೆನಾಡಿಗ
Subscribe to Oneindia Kannada

ಚಲನ ಚಿತ್ರಗಳು ಮತ್ತು ಟೀವಿ ಕಾರ್ಯಕ್ರಮಗಳನ್ನು ಬ್ರಾಂಡ್ ಮಾಡಿ ಅದರ ಸಾಮಾನುಗಳನ್ನು ಮಾರುವುದು ಒಂದು ದೊಡ್ಡ ವ್ಯಪಾರ. ಚಿತ್ರಗಳಲ್ಲಿ ತೊಡುವ ಬಟ್ಟೆ, ತೋರಿಸುವ ಕಾರು, ಫೋನ್, ಜಾಗ ಇತ್ಯಾದಿಗಳನ್ನು ಪ್ಯಾಕೇಜ್ ಮಾಡಿ ಮಾರಾಟ ಮಾಡುವುದು ಹಾಲಿವುಡ್ ಅವರು ಬಹಳ ಚೆನ್ನಾಗಿ ಮಾಡ್ತಾರೆ. ಕೆಲವು ಮೂಲಗಳ ಪ್ರಕಾರ ಇದು $20 ಬಿಲಿಯನ್ ವಹಿವಾಟು ಇರುವ ಒಂದು ವ್ಯಾಪಾರ. ಕನ್ನಡ ಚಿತ್ರ ರಂಗದಲ್ಲಿ ಇಂಥ ಒಂದು ಟ್ರೆಂಡ್ ಹಾಗೂ ಬ್ರಾಂಡಿಂಗ್ ಇತ್ತೀಚಿನ ದಿನಗಳಲ್ಲಿ ಕಾಣಸಿಗುತ್ತಿದೆ. ಇದು ಒಂದು ಒಳ್ಳೆಯ ಬೆಳವಣಿಗೆ.

ಪವನ್ ಕುಮಾರ್ ಅವರ ಲೂಸಿಯಾ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರದ ಆರ್ಡರ್ ಪಡೆದ AziTeez -Your Alter Ego ಸಂಸ್ಥೆ ವಿಶೇಷ ರೀತಿಯಲ್ಲಿ ಟೀ ಶರ್ಟ್ ಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುತ್ತಿದೆ.

ಉಳಿದವರು ಕಂಡಂತೆ ಚಿತ್ರದ ಟ್ರೇಲರ್ ನೋಡಿದವರೆಲ್ಲರೂ ಮೆಚ್ಚಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡದೊಡನೆ ಸೇರಿ Aziteez ಚಿತ್ರದ ಶೀರ್ಷಿಕೆಯನ್ನೇ ಅಂಗಿಯಾಗಿಸಿದೆ. ಕನ್ನಡ ಚಿತ್ರರಂಗ ಬೆಳೆದರೆ, ಸಾಂಸ್ಕೃತಿಕ ವಲಯ ಹಬ್ಬಿದರೆ ಕನ್ನಡಕ್ಕೆ, ಕನ್ನಡಿಗರಿಗೆ ಬೆಲೆ. ಮತ್ತು ಈ ಅಂಗಿಯ ಬೆಲೆ ಕೇವಲ 350 ರೂ. ಬನ್ನಿ ಖರೀದಿಸಿ, ಒಳ್ಳೆಯ ಚಿತ್ರದ ಪ್ರಚಾರವೊಂದರಲ್ಲಿ ಪಾಲ್ಗೊಳ್ಳಿ ಎಂದು ಸ್ಥಾಪಕರಲ್ಲಿ ಒಬ್ಬರಾದ ಸುಧೀಂದ್ರ ಅವರು ಒನ್ ಇಂಡಿಯಾ ಸಂಸ್ಥೆಗೆ ತಿಳಿಸಿದ್ದಾರೆ.

ಕನ್ನಡದ ಜೊತೆ ನಾವು ಬೆಳೆಯುತ್ತೆವೆಯೋ ಅಥವಾ ನಮ್ಮ ಜೊತೆ ಕನ್ನಡ ಬೆಳೆಯುತ್ತದೆಯೋ ಎಂಬ ಎರಡು ವರುಷದ ಹಿಂದಿನ ಪ್ರಶ್ನೆಗೆ ಉತ್ತರವಾಗಿ ಈಗ Aziteez ಬೆಳೆಯುತ್ತಿದೆ. ಈ ವಿನ್ಯಾಸದ ಅಂಗಿಗಳನ್ನು www.aziteez.com ಗೆ ಭೇಟಿ ನೀಡಿ ಖರೀದಿಸಬಹುದು. ಸಂಸ್ಥೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ತಮ್ಮ ಸಂಸ್ಥೆಯಿಂದ ಆಗುತ್ತಿರುವ ಕನ್ನಡ ಸಂಸ್ಕೃತಿ, ಅಭಿಮಾನ ಸಿನಿಮಾ ಪ್ರಚಾರದ ಬಗ್ಗೆ ಸುಧೀಂದ್ರ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ.

ಸಂಭ್ರಮದ ಬಗ್ಗೆ

ಸಂಭ್ರಮದ ಬಗ್ಗೆ

ಕಣ್ ಮುಚ್ಚಿ ತೆರೆಯುವಷ್ಟರಲ್ಲಿ ಪಟಪಟನೆ ಎರಡು ವರುಷಗಳನ್ನು ಮುಗ್ಸಿ ಮೂರರ ಹೊಸ್ತಿಲಲಿ ನಿಂತಿದೆ ಈಗ Aziteez. ಕನ್ನಡ ಎನೆ ಕುಣಿದಾಡುತ, ಮೂಗ್ನಲ್ಲೂ ಕನ್ನಡ ಮಾತಾಡುತ ಜನ ಬೆಳೆಸಿದ್ದು ಕೇವಲ ನಮ್ಮನ್ನಲ್ಲ.. ಕನ್ನಡವನ್ನ.. ಕರ್ನಾಟಕದ ವ್ಯಾಪ್ತಿಯನ್ನು.. ನಾಡಿನ ನುಡಿ ನಾಡಿಯ ನಡೆಯನ್ನ.. ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಳ್ಳದೇ ಇರುವುದರಿಂದಲೇ ಜನಪ್ರಿಯವಾಗಿರುವ ನಮ್ಮ ಸಂಸ್ಥೆ ತನ್ನ ಮೂರನೇ ವರುಷದ ಪ್ರಾರಂಭದ ಆಚರಣೆಗೆ ಕೊಟ್ಟ ಹೆಸರು - 'ಧರಿಸು ಕನ್ನಡವ , ಆದರಿಸು ಕನ್ನಡವ'.

ಮೂರು ಹೊಸ ವಿನ್ಯಾಸ

ಮೂರು ಹೊಸ ವಿನ್ಯಾಸ

ಇದು ಜನರ ಉತ್ಸವ. ರಾಜ್ಯೋತ್ಸವ. Aziteez ಈ ಸಂಭ್ರಮಕ್ಕೆ ಮೂರು ಹೊಸ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತಿದೆ. ಈ ವಿನ್ಯಾಸಗಳಲ್ಲಿ ಕನ್ನಡದ ಸೊಗಡಿನ ಚಿತ್ತಾರವಿದೆ. ಉತ್ತರ ದಕ್ಷಿಣ ಬೆಸೆಯುವ ವಿಸ್ತಾರವಿದೆ. ಅಕ್ಷರಗಳ ಹೊಸ ಪ್ರಯೋಗದ ಪ್ರಸ್ತಾರವಿದೆ. ಇವುಗಳೆಲ್ಲವುದರ ಜೊತೆಜೊತೆಗೆ ಪ್ರಪ್ರಥಮವಾಗಿ ಖಾದಿ ಕುರ್ತಾವನ್ನು ಪರಿಚಯಿಸುತ್ತಿರುವ ಹೆಮ್ಮೆ aziteez ನದು. ನೈಸರ್ಗಿಕ ವರ್ಣದ ಈ ವಸ್ತ್ರಗಳು ಕನ್ನಡದ ಮನೆಗಳ ಕೈಮಗ್ಗಗಳಲ್ಲಿ ತಯಾರಾದವುಗಳು.

ಖರೀದಿ ಹೇಗೆ?

ಖರೀದಿ ಹೇಗೆ?

ವಿವಿಧ ವಿನ್ಯಾಸದ ಅಂಗಿಗಳನ್ನು www.aziteez.com ಗೆ ಭೇಟಿ ನೀಡಿ ಖರೀದಿಸಬಹುದು.

ಫೇಸ್ ಬುಕ್ ನಲ್ಲಿ : https://www.facebook.com/AziTeez?fref=ts

ಕ್ಯಾಶ್ ಅಂಡ್ ಡೆಲಿವರಿ ಸೌಲಭ್ಯ ಕೂಡಾ ಇದೆ

Aziteezನ ಆಶಯ

Aziteezನ ಆಶಯ

ಕನ್ನಡದ ಜೊತೆ ನಾವು ಬೆಳೆಯುತ್ತೆವೆಯೋ ಅಥವಾ ನಮ್ಮ ಜೊತೆ ಕನ್ನಡ ಬೆಳೆಯುತ್ತದೆಯೋ ಎಂಬ ಎರಡು ವರುಷದ ಹಿಂದಿನ ಪ್ರಶ್ನೆಗೆ ಉತ್ತರವಾಗಿ ಈಗ Aziteez ಬೆಳೆಯುತ್ತಿದೆ. ತಮ್ಮ ಆಯ್ಕೆಯ ಅಂಗಿಗಳನ್ನು, ಕುರ್ತಾಗಳನ್ನು ಮನಬಂದಂತೆ ಖರೀದಿಸಬಹುದು. ಕನ್ನಡದ ಕಂಪನ್ನು ಪಸರಿಸಬಹುದು .ನಮ್ಮ ನಿತ್ಯ ವ್ಯವಹಾರದಲ್ಲಿ ಕನ್ನಡ ಪಾಲ್ಗೊಳ್ಳಲಿ ಎಂಬುದು Aziteezನ ಆಶಯ.ಹಾಲ್ಗಡಲ ಒಡಲ ಒಳಗಿಂದ ಬಂದ ಸುಧೆಯಂತೆ ಈ ಭಾಷೆ .. ಅದಕ್ಕೆ ಈ ಕನ್ನಡದೊಳ್ ಸುಧೆಯುಂಟು.

ಕನ್ನಡದಂಗಿಗಳ ಬಗ್ಗೆ

ಕನ್ನಡದಂಗಿಗಳ ಬಗ್ಗೆ ಕಳೆದ ವರ್ಷ ಸುವರ್ಣ ಸುದ್ದಿ ವಾಹಿನಿಯಲ್ಲಿ ಬಂದ ಸಂದರ್ಶನ ವಿಡಿಯೋ ಇಲ್ಲಿದೆ ನೋಡಿ

ಅಗತ್ಯಕ್ಕೆ ತಕ್ಕಂತೆ ಮಾರಾಟ

ಅಗತ್ಯಕ್ಕೆ ತಕ್ಕಂತೆ ಮಾರಾಟ

ನಮಗೆ ಬರೀ ಹಣ ಮಾಡುವ ಉದ್ದೇಶ ಮಾತ್ರ ಇಲ್ಲ. ಕನ್ನಡ ಹಾಗೂ ಕನ್ನಡ ಸಿನಿಮಾವನ್ನು ಇಷ್ಟಪಡುವ ಜನ ಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಟೀ ಶರ್ಟ್ ವಿತರಿಸಿದ್ದೇವೆ.

ಪ್ರತಿ ಟೀ ಶರ್ಟ್ ಮಾರಾಟದಿಂದ ನಾವು ಪ್ರಚಾರ ಕೊಡುವ ಚಿತ್ರ ತಂಡಕ್ಕೆ 50 ರು ಸಿಗುತ್ತದೆ ಜತೆಗೆ ಪ್ರಚಾರ ಕೂಡಾ.

ಕರ್ನಾಟಕದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ನಮ್ಮ ಟೀ ಶರ್ಟ್ ಗಳನ್ನು ಮಾರಾಟ ಮಾಡಿದ್ದೇವೆ. ನಮ್ಮದು ಆರು ಜನರಿರುವ ಸಣ್ನ ಸಂಸ್ಥೆ ನಮ್ಮ ಆಸೆ, ಕನ್ನಡ ಪರ ಹಂಬಲ ಮಾತ್ರ ಹಿರಿದಾದುದು ಎಂದು ಸುಧೀಂದ್ರ ಹೇಳಿದರು.

ಮುಂದಿನ ಯೋಜನೆ

ಮುಂದಿನ ಯೋಜನೆ

ಪ್ರದೇಶವಾರು ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿನ ಭಾಷೆ, ನುಡಿಗಟ್ಟುಗಳನ್ನು ಬಳಸಿ ಟೀ ಶರ್ಟ್ ವಿನ್ಯಾಸಗೊಳಿಸುತ್ತೇವೆ. ಐಟಿ ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈಗಾಗಲೇ 25 ಕ್ಕೂ ಅಧಿಕ ಐಟಿ ಸಂಸ್ಥೆಗಳಿಗೆ ಟೀ ಶರ್ಟ್ ಮಾರಾಟ ಮಾಡಿದ್ದೇವೆ ನಮ್ಮ ಕಚೇರಿ ವಿಳಾಸ ಕುಮಾರಸ್ವಾಮಿ ಲೇಔಟ್ ನಿಂದ ಈಗ ಜೆಪಿ ನಗರ ಪುಟ್ಟೇನಹಳ್ಳಿಗೆ ಶಿಫ್ಟ್ ಆಗಿದೆ. ಆನ್ ಲೈನ್ ಪ್ರಚಾರ ಬಿಟ್ಟರೆ ಬೇರೆ ಯಾವ ರೀತಿ ಪ್ರಚಾರ ಕೈಗೊಂಡಿಲ್ಲ ಎಂದು ಸುಧೀಂದ್ರ ತಿಳಿಸಿದರು.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aziteez which is a forerunner in the designing of Kannada T Shirts completes 2 years now. Aziteez has come up with various innovative designs which celebrate the spirit and diversity of Kannadigas. Aziteez is also promoting Kannada movies through T Shirts.
Please Wait while comments are loading...