ಯಾದಗಿರಿ: ಗೋಣಿಚೀಲದಲ್ಲಿ ಮಗುವನ್ನಿಟ್ಟು ಸುಡಲು ಯತ್ನ!

Posted By:
Subscribe to Oneindia Kannada

ಯಾದಗಿರಿ, ಡಿಸೆಂಬರ್ 21: ಶಹಪುರ ತಾಲ್ಲೂಕಿನ ವಡಗೇರಾ ಗ್ರಾಮದ ಬಳಿ ಶಿಶುವೊಂದನ್ನು ಗೋಣಿಚೀಲದಲ್ಲಿಕಟ್ಟಿ ಬೆಂಕಿ ಹಚ್ಚಲು ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬೆಂಕಿ ಹೊತ್ತಿಕೊಂಡು ಹೋಗೆ ಬರುವ ವೇಳೆ ಚೀಲದಲ್ಲಿ ಮಗು ಅಳುವಿನ ಶಬ್ಧ ಕೇಳಿಬಂಧಿದೆ. ದಾರಿ ಹೋಕರು ತಕ್ಷಣ ಪರಿಶೀಲನೆ ನಡೆಸಿ ಗೋಣಿಚೀಲವನ್ನು ಬಿಚ್ಚಿ ನೊಡಿದಾಗ ಮಗುವಿರುವುದು ಕಂಡು ಅವಕ್ಕಾಗಿದ್ದಾರೆ.[ಕಾರ್ಕಳದ ತಾಯಿ-ಮಗ ಕಾರು ಅಪಘಾತದಲ್ಲಿ ಸಾವು]

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿರುವ ದಾರಿಹೋಕರು ಮಗುವನ್ನು ಕಾಪಾಡಿದರು. ಪ್ರಸ್ತುತ ಸಿಕ್ಕಿರುವ ಶಿಶು ಗಂಡು ಮಗುವಾಗಿದ್ದು, ವಡಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದರು.

Attempt to burn a child in a bag in Yadagiri

ಮಗು ಸುಡುಲು ಯತ್ನ ನಡೆಸಿವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಪ್ರಾರಂಭವಾಗಿದೆ.[ಸ್ನಾನದ ಮನೆಯಲ್ಲಿ ಉಸಿರುಗಟ್ಟಿ ತಾಯಿ, ಮಗು ಸಾವು]

ಕಾರು ಹರಿದು ಮಗು ಸಾವು

ಮೈಸೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ ಪರಿಣಾಮ ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಆನಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ಬಳ್ಳಾರಿ ಮೂಲದ ಆನಗಟ್ಟಿಯಲ್ಲಿ ವಾಸಿಸುತ್ತಿದ್ದ ಸಂತೋಷ್ ನಾಯಕ ಹಾಗೂ ಜ್ಯೋತಿ ಬಾಯಿ ಎಂಬವರ ಪುತ್ರ ಮಂಜು ಎಂದು ಗುರುತಿಸಲಾಗಿದೆ.

Attempt to burn a child in a bag in Yadagiri

ಮಗು ರಸ್ತೆಯ ಬದಿಯಲ್ಲಿ ಆಟವಾಡುತ್ತಿದ್ದ ವೇಳೆ ವೇಗದಿಂದ ಬಂದ ಕಾರು ಮಗುವಿನ ಮೇಲೆ ಹರಿದಿದೆ. ಇದರ ಪರಿಣಾಮ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ತಂದೆ-ತಾಯಿಯ ಕಣ್ಣೆದುರೇ ಈ ದುರ್ಘಟನೆ ನಡೆದಿದೆ.
ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧಕ್ಕೆ ಮುಂದಾಗಿದ್ದಾರೆ.[ತಾಯಿಯ ಜೀವಕ್ಕೆ ಕುತ್ತಾದ ವಿಚಿತ್ರ ಮಗುವಿನ ಜನನ!]


ತಲೆಯ ಮೇಲೆ ಮಗವಿಗೆ ವಿಚಿತ್ರ ಗಡ್ಡೆ

ಹೊಳೆನರಸೀಪುರ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕುಮಾರಿ ಎಂಬುವರು ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿನ ತಲೆಯಲ್ಲಿ ಮತ್ತೊಂದು ತಲೆಯಂತೆ ಗೆಡ್ಡೆ ಬೆಳೆದಿರುವುದು ವೈದ್ಯಲೋಕಕ್ಕೆ ಅಚ್ಚರಿಯನ್ನು ಸೃಷ್ಟಿಸಿದೆ. ಬಹಳ ಪ್ರಯಾಸದಿಂದ ಈ ಮಗುವನ್ನು ವೈದ್ಯರು ಹೊರತೆಗೆದಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಆದರೆ ಕುಮಾರಿ ಮತ್ತು ಮೂರ್ತಿ ದಂಪತಿಗಳು ಮಗುವಿನ ಅವಸ್ಥೆ ಕಂಡು ವ್ಯಥೆ ಪಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Attempt to burn a child in a bag in Yadagiri, The death of the child in the car accident in Mysore, Strange Childbirth in holenarsipur governmant hospital.
Please Wait while comments are loading...