ಎಟಿಎಂ ಮಾಹಿತಿ ಕೊಟ್ಟು 28 ಸಾವಿರ ಕಳೆದುಕೊಂಡ್ರು!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜನವರಿ, 08: ರಾಜ್ಯದ ಹಲವೆಡೆಗಳಲ್ಲಿ ದೂರವಾಣಿ ಮೂಲಕ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಬಳಿಕ ಅವರ ಖಾತೆಯಿಂದ ಹಣವನ್ನು ಡ್ರಾ ಮಾಡಿ ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂತಹದ್ದೇ ಒಂದು ಪ್ರಕರಣ ಮಡಿಕೇರಿಯಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೋರ್ವ ತಾನು ಬ್ಯಾಂಕ್ ವ್ಯವಸ್ಥಾಪಕ ಎಂದು ನಂಬಿಸಿ ದೂರವಾಣಿ ಮೂಲಕ ನಗರದ ಮಹಿಳೆಯೊಬ್ಬರಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಒಟ್ಟು 28,580 ರೂ.ಗಳನ್ನು ಡ್ರಾ ಮಾಡಿ ವಂಚಿಸಿದ್ದಾರೆ.[ಬ್ಯಾಂಕ್ ಕೆಲಸ ಇದ್ರೆ ಜನವರಿ 11 ರವರೆಗೆ ಕಾಯಬೇಕು]

ATM

ನಗರದ ಗದ್ದಿಗೆ ಬಳಿಯ ನಿವಾಸಿ ಜುಬೈದ ಎಂಬುವವರು ನಗರದ ಇಂಡಿಯನ್ ಓವರ್‍ಸೀಸ್ ಬ್ಯಾಂಕಿನಲ್ಲಿ ತಮ್ಮ ಹಾಗೂ ತನ್ನ ಪತಿ ಹೆಸರಿನಲ್ಲಿ ಜಂಟಿ ಖಾತೆ ಹೊಂದಿದ್ದರು. ಜನವರಿ 6 ರಂದು ಜುಬೈದ ಅವರ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯ ಕರೆ ಬಂದಿದೆ.[ಸಿಲಿಕಾನ್ ಸಿಟಿ ಬೆಂಗಳೂರು ಈಗ 'ಸೈಬರ್ ಕ್ರೈಂ' ರಾಜಧಾನಿ]

ಆ ಅಪರಿಚಿತ ವ್ಯಕ್ತಿ ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡಿ, ನಾನು ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ ಮ್ಯಾನೇಜರ್, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಆದ್ದರಿಂದ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿ ಪಿನ್ ನಂಬರ್ ಪಡೆದುಕೊಂಡಿದ್ದಾನೆ.[ಅಶ್ಲೀಲ ಫೋಟೋ ಕಳಿಸಿದವನಿಗೆ 2 ವರ್ಷದ ಜೈಲು ಶಿಕ್ಷೆ]

ಬಳಿಕ ಜುಬೈದ ಅವರ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 8 ಬಾರಿ ಕಾರ್ಡ್ ಬಳಸಿ ಒಟ್ಟು 28,580 ರೂ ಹಣವನ್ನು ಡ್ರಾ ಮಾಡುವ ಮೂಲಕ ವಂಚಿಸಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಜುಬೈದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ವಂಚನೆಗೊಳಗಾದ ಮಹಿಳೆ ಜುಬೈದ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಬಿರುಸಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Madikeri: A women jubaida lost Rs. 28.580 in an ATM fraud. She received one unknown person call. He introuduced themself as a Indian overseas bank worker, than he asked to her ATM card pin number.
Please Wait while comments are loading...