ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಚುನಾವಣೆಯಲ್ಲಿ ಏನೇನು ಹೊಸತನವಿರಲಿದೆ?

By Prasad
|
Google Oneindia Kannada News

Recommended Video

Karnataka Assembly Elections 2018 : ಚುನಾವಣೆಯ ಬಗ್ಗೆ ಪ್ರಮುಖ ಸಂಗತಿಗಳು | Oneindia Kannada

ಬೆಂಗಳೂರು, ಮಾರ್ಚ್ 27 : ಕರ್ನಾಟಕದಲ್ಲಿ ಮತದಾನವನ್ನು ಅತ್ಯಂತ ಪಾರದರ್ಶಕವಾಗಿ, ಗೊಂದಲಗಳಿಂದ ಮುಕ್ತವಾಗಿ ಮತ್ತು ಜನರಿಗೆ ಅನುಕೂಲವಾಗುವಂತೆ ನಡೆಸಲು ಕರ್ನಾಟಕ ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರ ನೀಡಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮಂಗಳವಾರ ಪತ್ರಿಕಾಗೋಷ್ಠಿ ಕರೆದಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ಮಂತಯಂತ್ರಗಳ ಬಗ್ಗೆ ರಾಜಕಾರಣಿಗಳಿಗೆ ಮಾತ್ರವಲ್ಲ, ಮಾಧ್ಯಮದವರಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕ್ರಮಗಳಿಂದ ಹಿಡಿದು, ವಿಕಲಚೇತನರಿಗೂ ಅನುಕೂಲವಾಗುವಂತೆ ಹಲವಾರು ಉಪಕ್ರಮಗಳನ್ನು ಚುನಾವಣಾಧಿಕಾರಿಯವರು ತೆಗೆದುಕೊಳ್ಳಲಿದ್ದಾರೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

Assembly Elections : New things taken up by Election Commission

ಈ ಬಾರಿ ಚುನಾವಣೆಯಲ್ಲಿ ಹೊಸ ಉಪಕ್ರಮಗಳು:

* ಸಂಚಾರಿ ನಿಗಾ ತಂಡಗಳ ವಾಹನಗಳ ಜಿ.ಪಿ.ಎಸ್. ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ.
* ಮತಗಟ್ಟೆಗಳ ಜಿ.ಐ.ಎಸ್. ಆಧಾರಿತ ದತ್ತಾಂಶ ಹಾಗೂ ಡಿಜಿಟಲ್ ಮ್ಯಾಪ್‍ಗಳ ಲಭ್ಯತೆ.
* ಮತಗಟ್ಟೆಗಳ ಪ್ರದೇಶ ಹಾಗೂ ವಿಧಾನಸಭಾ ಕ್ಷೇತ್ರಗಳ ಡಿಜಿಟಲ್ ಅಟ್ಲಾಸ್.
* ವಿಕಲಚೇತನರನ್ನು ಗುರುತಿಸಿ ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ.
* ಮತಗಟ್ಟೆಗಳನ್ನು ಗುರುತಿಸಲು ಎಸ್‍ಎಂಎಸ್ ಆಧಾರಿತ ಸೇವೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

*
ಮತಗಟ್ಟೆಗಳನ್ನು ಗುರುತಿಸಲು ಆಪ್ ಸೇವೆ.
* ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಲ್ಲಿ ಕ್ಯೂ ಸ್ಟೇಟಸ್ ಸೌಲಭ್ಯ.
* ಲಭ್ಯ ಸೌಲಭ್ಯವನ್ನು ಆಧರಿಸಿ 3000 ದಿಂದ 6000 ಮತಗಟ್ಟೆಗಳ ಮತದಾನ ಪ್ರಕ್ರಿಯೆಯ ವೆಬ್‍ಕಾಸ್ಟಿಂಗ್ ವ್ಯವಸ್ಥೆ.
* ಚುನಾವಣಾ ಪ್ರಕ್ರಿಯೆಯ ಉಸ್ತುವಾರಿ ಸೌಲಭ್ಯಗಳ ಏಕೀಕೃತ ವ್ಯವಸ್ಥೆ.
* ಗಂಭೀರ ಸ್ವರೂಪದ ದೂರುಗಳ ತ್ವರಿತ ಪರಿಶೀಲನೆಗೆ ಜಿಐಎಸ್ ಆಧಾರಿತ ಟ್ರಾಕಿಂಗ್ ವ್ಯವಸ್ಥೆ.
* ಮುಖ್ಯವಾಹಿನಿಯಿಂದ ಹೊರಗೆ ಉಳಿದಿರುವ ಆದಿವಾಸಿ ಬುಡಕಟ್ಟು ಜನಾಂಗದವರು, ಅಲೆಮಾರಿ ಜನಾಂಗದವರ ನೋಂದಣಿಗೆ ವಿಶೇಷ ಅಭಿಯಾನ. ಪ್ರಾಯೋಗಿಕವಾಗಿ ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ಶೈಲಿಯ ಮತಗಟ್ಟೆಗಳ ಸ್ಥಾಪನೆ.
* ರಾಜ್ಯಾದ್ಯಂತ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಯಂತ್ರಗಳ ಕುರಿತು ಮಾಧ್ಯಮದವರು, ರಾಜಕೀಯ ಪಕ್ಷಗಳು ಹಾಗೂ ನ್ಯಾಯಾಂಗದವರಿಗೆ ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳು.
* ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಯುವ ಮತದಾರರ ಸಂಖ್ಯೆ ದ್ವಿಗುಣ. 2013ರಲ್ಲಿ ಯುವ ಮತದಾರರ ಸಂಖ್ಯೆ 7.18 ಲಕ್ಷ ಇದ್ದು, 2018ರಲ್ಲಿ 15.42 ಲಕ್ಷಕ್ಕೆ ಹೆಚ್ಚಳವಾಗಿದೆ.
* ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಲಿಂಗಾನುಪಾತವು 2013ಕ್ಕೆ ಹೋಲಿಸಿದರೆ 2018ರಲ್ಲಿ ಪ್ರತಿ ಸಾವಿರ ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ 958 ರಿಂದ 972ಕ್ಕೆ ಹೆಚ್ಚಳವಾಗಿದೆ.
* ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಆದ್ಯತೆ. ಈ ನಿಟ್ಟಿನಲ್ಲಿ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
* ರಾಹುಲ್ ದ್ರಾವಿಡ್ ಅವರನ್ನು ರಾಜ್ಯ ವಿಧಾನಸಭಾ ಚುನಾವಣೆಗೆ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
* ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಕರ್ನಾಟಕ ಚುನಾವಣಾ ಗೀತೆ ರಚನೆ.
* ಆಯ್ದ ಮತಗಟ್ಟೆಗಳಲ್ಲಿ ಕೆಲವು ವಿಕಲಚೇತನ ಸರ್ಕಾರಿ ನೌಕರರೂ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
* ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಹಾಗೂ ಗ್ರಾಮೀಣ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ.

English summary
Karnataka Assembly Elections 2018 : Karnataka Election commission has taken up many new things and initiatives to make the election impartial and confusion free and also to ease the voting for differently abled people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X