ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:ನನಗೆ ಮತ ಹಾಕಿದ ಪ್ರತಿಯೊಬ್ಬರಿಗೆ 6,000ರೂ. ಕೊಡುವುದಾಗಿ ಜಾರಕಿಹೊಳಿ ಬಹಿರಂಗ ಹೇಳಿಕೆ

|
Google Oneindia Kannada News

ಬೆಂಗಳೂರು, ಜನವರಿ 22: ವಿಧಾನಸಭಾ ಚುನಾವಣೆ 2023 ಹತ್ತಿರವಾಗುತ್ತಿದೆ. ರಾಜಕಾರಣಿಗಳು ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಓಲೈಸಲು ಮುಂದಾಗಿದ್ದಾರೆ. ಇದರ ಭಾಗಅವೆಂಬಂತೆ ರಮೇಶ್ ಜಾರಕಿಹೊಳಿಯವರು ನನಗೆ ಮತ ಹಾಕಿದರೆ ಪ್ರತಿ ಮತಕ್ಕೆ 6,000 ರೂಪಾಯಿ ಕೊಡುವುದಾಗಿ ಭಾನುವಾರ ಬಹಿರಂಗವಾಗಿ ಹೇಳಿದ್ದಾರೆ.

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಮ್ಮೀ ಹೆಬ್ಬಾಳ್ಕರ್ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಧ್ಯೆ ಚುನಾವಣೆ ಸಮರ ಮುಂದುವರಿದಿದೆ. ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸುವುದಾಗಿ ಬಹಿರಂಗವಾಗಿ ಈ ಹಿಂದೆ ಹೇಳಿದ್ದ ಜಾರಕಿಹೊಳಿ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಮತಕ್ಕೆ ಇಂತಿಷ್ಟು ಹಣ ನೀಡುವುದಾಗಿ ಎಂದು ಬಹಿರಂಗವಾಗೇ ಘೋಷಿಸಿದ್ದಾರೆ.

 Karnataka Assembly Election 2023: ಬೆಳಗಾವಿ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು Karnataka Assembly Election 2023: ಬೆಳಗಾವಿ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

Assembly Election 2023: If Vote For Me I Will Give Rs 6000 Every Vote Ramesh Jarkiholi Announced

ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಎದುರಾಳಿ ಅಭ್ಯರ್ಥಿಯು ಮತದಾರರನ್ನು ಸೆಳೆಯಲು 3000ರೂ. ಹಾಗೂ ಗಿಫ್ಟ್ ನೀಡಲಿದ್ದಾರೆ ಎನ್ನಲಾಗಿದೆ. ಆದರೆ ನಾವು ಗಿಫ್ಟ್ ಕೊಡುವುದಿಲ್ಲ. ಬದಲಾಗಿ ಕಾಂಗ್ರೆಸ್‌ಗಿಂತ ಡಬಲ್ ಹಣ ನೀಡುತ್ತೇನೆ. ನನಗೆ ಮತ ಹಾಕಿದರೆ ಒಂದು ಮತಕ್ಕೆ 6,000 ರೂಪಾಯಿ ನೀಡುತ್ತೇನೆ ಎಂದು ಹೇಳಿದ್ದಾರೆ.

Assembly Election 2023: If Vote For Me I Will Give Rs 6000 Every Vote Ramesh Jarkiholi Announced

ಹಣ ಘೋಷಣೆ ಬೆನ್ನಲ್ಲೆ ಚುನಾವಣೆ ಪ್ರಚಾರ, ಮತದಾರರಿಗೆ ಓಲೈಕೆ, ಆಮಿಷ ಒಡ್ಡುವುದಕ್ಕೆ ಬಿಜೆಪಿಯಲ್ಲಿ ಅವಕಾಶ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಈ ವಿಧಾನಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಶತಾಯಗತಾಯ ಸೋಲಿಸಬೇಕು ಎಂದು ರಮೇಶ್ ಜಾರಕಿಹೊಳಿ ಪಣತೊಟ್ಟಿದ್ದು, ಈ ಸಂಬಂಧದ ಕೋಟಿಗಟ್ಟಲೇ ಹಣ ಖರ್ಚು ಮಾಡುವುದಾಗಿ ತಿಳಿಸಿದ್ದರು. ಮೇ ತಿಂಗಳ ಆಸುಪಾಸಿನಲ್ಲಿ ಚುನಾವಣೆ ನಡೆಯಲಿದ್ದು ಒಟ್ಟಾರೆ ಬೆಳಗಾವಿಯಲ್ಲಿ ಚುನಾವಣಾ ಕಣ ರಂಗೇರಲಿದೆ. ಮತದಾರರ ಓಲೈಕೆಯಲ್ಲಿ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇದೆ.

English summary
Assembly Election 2023: If vote for me i will give Rs 6000 every vote BJP MLA ramesh jarkiholi announced on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X