ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ರಸ್ತೆ ಅಭಿವೃದ್ಧಿಗೆ ಎಡಿಬಿಯಿಂದ 2 ಸಾವಿರ ಕೋಟಿ ಸಾಲ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 31 : ಕರ್ನಾಟಕದ 12 ಜಿಲ್ಲೆಗಳ 419 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಎಡಿಬಿ 2,450 ಕೋಟಿ ಹಣಕಾಸು ನೆರವು ನೀಡಲಿದೆ. ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ -3 ಅನ್ನು ಈ ಅನುದಾನದಲ್ಲಿ ಜಾರಿಗೊಳಿಸಲಾಗುತ್ತದೆ.

ಕೇಂದ್ರ ಸರ್ಕಾರ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಜೊತೆಗಿನ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಎಡಿಬಿ ನೀಡುವ ಸಾಲದಲ್ಲಿ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ದ್ವಿಪಥ ಮತ್ತು ಚತುಷ್ಪಥ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತದೆ.

ಚಿತ್ರಗಳು : ಮಳೆ, ಗುಡ್ಡ ಕುಸಿತದ ಬಳಿಕ ಕೊಡಗಿನ ರಸ್ತೆಗಳುಚಿತ್ರಗಳು : ಮಳೆ, ಗುಡ್ಡ ಕುಸಿತದ ಬಳಿಕ ಕೊಡಗಿನ ರಸ್ತೆಗಳು

Asian Development Bank to fund 2450 crore for Karnataka road

ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ -3 ಅನ್ನು (ಕೆ-ಶಿಪ್‌) ಯೋಜನೆಯನ್ನು ಈ ಅನುದಾನದಲ್ಲಿ ಜಾರಿಗೊಳಿಸಲಾಗುತ್ತದೆ. 2011ರಲ್ಲಿ ಆರಂಭವಾದ ಕೆ-ಶಿಪ್ 2 ಯೋಜನೆ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ.

ಯಾವಾಗ ನೋಡಿದರೂ ರಿಪೇರಿ... ಮಂಗಳೂರಿಗೆ ಹೋಗುವುದಾದರೂ ಹೇಗೆ?ಯಾವಾಗ ನೋಡಿದರೂ ರಿಪೇರಿ... ಮಂಗಳೂರಿಗೆ ಹೋಗುವುದಾದರೂ ಹೇಗೆ?

ಯಾವ-ಯಾವ ರಸ್ತೆಗಳು?

ಸರ್ಕಾರಕ್ಕೆ ಸೆಡ್ಡು ಹೊಡೆದು ರಸ್ತೆ ಮಾಡಿದ ಗ್ರಾಮಸ್ಥರು!ಸರ್ಕಾರಕ್ಕೆ ಸೆಡ್ಡು ಹೊಡೆದು ರಸ್ತೆ ಮಾಡಿದ ಗ್ರಾಮಸ್ಥರು!

ಹಂತ-1

* ಕೊಳ್ಳೆಗಾಲ-ಹನೂರು ಹೆದ್ದಾರಿ (23.8 ಕಿ.ಮೀ)
* ಚಿಂತಾಮಣಿ - ಆಂಧ್ರಪ್ರದೇಶ ಗಡಿ (39.8 ಕಿ.ಮೀ)
* ಬೆಂಗಳೂರು ನೈಸ್ ರಸ್ತೆ - ಮಾಗಡಿ (51 ಕಿ.ಮೀ)

2ನೇ ಹಂತದಲ್ಲಿ ಮಾಗಡಿ-ಸೋಮವಾರಪೇಟೆ (166 ಕಿ.ಮೀ.), 3ನೇ ಹಂತದಲ್ಲಿ ಗದಗ-ಹೊನ್ನಾಳಿ (139 ಕಿ.ಮೀ.ರಸ್ತೆ)ಯನ್ನು ಅಭಿವೃದ್ಧಿ ಮಾಡಲಾಗುತ್ತದೆ.

'ಈ ಒಪ್ಪಂದದ ಮೂಲಕ ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿಗೆ ಎಡಿಬಿ ನೀಡುತ್ತಿರುವ ನೆರವು ಮುಂದುವರೆಯಲಿದೆ. ರಸ್ತೆ ಸುರಕ್ಷತೆಯನ್ನು ಇದು ಉತ್ತಮ ಪಡಿಸಲಿದೆ' ಎಂದು ಎಡಿಬಿಯ ಭಾರತ ವಿಭಾಗದ ನಿರ್ದೇಶಕ ಕೆಜಿಚಿ ಯೊಕೊಯಮ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಕೆ-ಶಿಪ್ 1 ಯೋಜನೆಯಡಿ 2001-08ರ ಅವಧಿಯಲ್ಲಿ 2,385 ಕಿ.ಮೀ.ರಸ್ತೆಯನ್ನು ಅಭಿವೃದ್ದಿ ಮಾಡಿತ್ತು. ಇದಕ್ಕೆ ಎಡಿಬಿ 2,390 ಕೋಟಿ ನೆರವು ನೀಡಿತ್ತು. ಕೆ-ಶಿಪ್ 2 ಯೋಜನೆ ಈಗ ಪೂರ್ಣಗೊಳ್ಳುತ್ತಿದ್ದು, ಕೆ-ಶಿಪ್ 3 ಯೋಜನೆಗೂ ಬ್ಯಾಂಕ್ ನೆರವು ನೀಡಿದೆ.

English summary
Central Government signed for the agreement with the Asian Development Bank (ADB) to develop 418 km road in 12 district of Karnataka. ADB will provide 2,450 crore finance for the road development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X