ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿನಲ್ಲಿ ಆಶ್ಲೇಷ ಮಳೆಯ ಅಬ್ಬರ: ಮುಳುಗಿದ ಹೆಬ್ಬಾಳೆ ಸೇತುವೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಚಿಕ್ಕಮಗಳೂರಿನಲ್ಲಿ ವರುಣ ಅಬ್ಬರಕ್ಕೆ ಜನರು ತತ್ತರ | Oneindia Kannada

ಚಿಕ್ಕಮಗಳೂರು, ಆಗಸ್ಟ್.09: ಮಲೆನಾಡಿನಲ್ಲಿ ಕುಂಭದ್ರೋಣ, ಪುನರ್ವಸು ಮಳೆ ಬಳಿಕ ಈಗ ಆಶ್ಲೇಷ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ಸಂಜೆಯಿಂದ ಪ್ರಾರಂಭವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿಯುತ್ತಲೇ ಇದೆ.

ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ, ಹೊರನಾಡು, ಬಾಳೆಹೊನ್ನೂರಿನಲ್ಲಿ ಭಾರೀ ಮಳೆಯಾಗಿದ್ದು, ಇದೀಗ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಮುಳುಗಿದೆ.

ಕರಾವಳಿಯಲ್ಲಿ ಮತ್ತೆ ಮಳೆ: ಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆಕರಾವಳಿಯಲ್ಲಿ ಮತ್ತೆ ಮಳೆ: ಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆ

ತುಂಗಾ, ಭದ್ರಾ, ಹೇಮಾವತಿ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆಶ್ಲೇಷ ಮಳೆಯ 6ನೇ ದಿನ ವರುಣನ ಅಬ್ಬರ ಹೆಚ್ಚಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Ashlesha rains have now started in chikkamagaluru

ಸ್ವಲ್ಪ ದಿನ ಬಿಡುವು ಪಡೆದಿದ್ದ ವರುಣ ಬುಧವಾರ ಕರಾವಳಿಯಲ್ಲೂ ಸಹ ಮತ್ತೇ ಅಬ್ಬರಿಸದ್ದ. ಕಳೆದ ರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಸುಳ್ಯ, ಸುಬ್ರಹ್ಮಣ್ಯ, ಪುತ್ತೂರಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಮುಂದುವರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರಾ ಸೇರಿದಂತೆ ಇನ್ನಿತರ ನದಿಗಳು ತುಂಬಿ ಉಕ್ಕಿ ಹರಿಯತೊಡಗಿದೆ. ಸುಬ್ರಹ್ಮಣ್ಯ ಬಳಿಯ ಹೊಸಮಠ ಸೇತುವೆ ಮತ್ತೆ ಮುಳುಗಡೆಯಾಗಿದೆ.

English summary
Ashlesha rains have now started in chikkamagaluru district. Rain started from the evening and the whole night was pouring. Now Hebbale bridge is Drowned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X