ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಧವ್ ವಿವಾದ: ವರದಿ ಕೇಳಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 23 : ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ವಿರುದ್ಧ ಕೇಳಿಬಂದಿರುವ ಭೂ ಹಗರಣಕ್ಕ ಸಂಬಂಧಿಸಿ ವರದಿ ಸಲ್ಲಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಜಾಧವ್ ಹಗರಣದ ಸಂಬಂಧ ವರದಿ ಬಿತ್ತರವಾಗುತ್ತಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿಲು ಜಾಧವ್ ಸಿಎಂ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿದ್ದರು. ಆದರೆ ದಾಖಲೆಗಳ ಸಮೇತ ಬನ್ನಿ, ಇದರಲ್ಲಿ ನಿಮ್ಮ ಕೈವಾಡ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಿಎಂ ಸಿದ್ದರಾಮಯ್ಯ, ಜಾಧವ್ ಅವರಿಗೆ ಸೂಚನೆ ನೀಡಿದ್ದಾರೆ.[ಅರವಿಂದ ಜಾಧವ್‌ ಅವರ ವಿರುದ್ಧ ಭೂ ಹಗರಣ ಆರೋಪ?]

 Arvind Jadhav land allegation: CM Siddaramaiah seeks report

ಸಿಎಂ ಭೇಟಿ ಮಾಡಿದ ಜಾಧವ್ ಸ್ಪಷ್ಟನೆ ನೀಡಲು ಮುಂದಾದರು. ಆದರೆ ಇದನ್ನು ತಲೆಗೆ ಹಾಕಿಕೊಳ್ಳದ ಸಿದ್ದರಾಮಯ್ಯ' ನೀವು ದಾಖಲೆಗಳೊಂದಿಗೆ ಬನ್ನಿ' ಎಂದು ಹೇಳಿ ಕಳುಹಿಸಿದರು. ಅಲ್ಲದೆ ಆದಷ್ಟು ಬೇಗ ವರದಿ ಸಲ್ಲಿಕೆ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.[ಓಡಿ ಹೋದ ಮುಖ್ಯ ಕಾರ್ಯದರ್ಶಿ ಜಾಧವ್!]

ಆರೋಪ ಏನು?
ಅರವಿಂದ್ ಜಾಧವ್ ಅವರ ತಾಯಿ ತಾರಾಬಾಯಿ ಅವರು ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯಲ್ಲಿ ಖರೀದಿ ಮಾಡಿರುವ ಸರ್ಕಾರಿ ಭೂಮಿಗೆ ದಾಖಲಾತಿಗಳನ್ನು ಸಿದ್ಧಪಡಿಸಲು ಅರವಿಂದ್ ಜಾಧವ್ ಅವರು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂಬುದು ಆರೋಪ.

English summary
After the encroachment allegation against Karnataka Chief Secretary Arvind Jadhav , Karnataka Chief Minister Siddaramaiah seeking the detailed report from Revenue Debarment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X