ಉಡುಪಿಯಲ್ಲಿ ಫೆ.4ರಿಂದ 8ರವರೆಗೆ ಸೇನಾ ನೇಮಕಾತಿ

ಉಡುಪಿ, ಜ.21 : ಬೆಂಗಳೂರಿನ ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯ ಮತ್ತು ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಯಾಗಿ ಪುರುಷ ಅಭ್ಯರ್ಥಿಗಳಿಗೆ ನೇಮಕಾತಿ ನಡೆಯಲಿದೆ. ಫೆಬ್ರವರಿ 4 ರಿಂದ 8 ರವರೆಗೆ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ಆಯೋಜಿಸಲಾಗಿದೆ.

ಫೆಬ್ರವರಿ 4ರಂದು ಸಿಪಾಯಿ, ಕ್ಲಾರ್ಕ್/ಎಸ್.ಕೆ.ಟಿ. ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಂದು ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಫೆಬ್ರವರಿ 5ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ನಡೆಯಲಿದ್ದು ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. [ಮಂಗಳೂರಲ್ಲಿ ಕೆಲಸ ಖಾಲಿ ಇದೆ]

Udupi

ಫೆಬ್ರವರಿ 6 ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ನಡೆಯಲಿದ್ದು, ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಫೆ.07 ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ನಡೆಯಲಿದ್ದು, ಚಿಕ್ಕಮಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. [ಹೆಚ್ಚಿನ ಮಾಹಿತಿ ಇಲ್ಲಿದೆ]

ಫೆಬ್ರವರಿ 8ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ನಡೆಯಲಿದ್ದು, ಗದಗ, ಹಾವೇರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಅಂದು ಮಾಜಿ ಸೈನಿಕರಿಗೆ (ಡಿ.ಎಸ್.ಸಿ.) ಭೂಸೇನೆ, ವಾಯುಸೇನೆ, ಜಲಸೇನೆ, ಸಿಪಾಯಿ ಜಿ.ಡಿ. ಹುದ್ದೆಗಾಗಿಗೂ ನೇಮಕಾತಿ ನಡೆಯಲಿದ್ದು, ಎಲ್ಲ ಜಿಲ್ಲೆಯ ಮಾಜಿ ಸೈನಿಕರು ಹಾಜರಾಗಬಹುದು.

ವಿದ್ಯಾರ್ಹತೆ : ಸಿಪಾಯಿ, ಕ್ಲಾರ್ಕ್/ಎಸ್.ಕೆ.ಟಿ. ಹುದ್ದೆಗೆ ಪಿಯುಸಿಯಲ್ಲಿ 50% ಅಂಕ ಪಡೆದಿರಬೇಕು. ಸಿಪಾಯಿ ಜಿಡಿ ಹುದ್ದೆಗೆ 10ನೇ ತರಗತಿಯಲ್ಲಿ 45% ಅಂಕ ಪಡೆದಿರಬೇಕು. ಸಿಪಾಯಿ ಟೆಕ್ನಿಕಲ್ ಹುದ್ದೆಗೆ ಪಿಯುಸಿಯಲ್ಲಿ 45% ಅಂಕ ಪಡೆದಿರಬೇಕು. ಸಿಪಾಯಿ ಎನ್‍ಎ/ಎನ್‍ಎವಿಇಟಿ ಹುದ್ದೆಗೆ ಪಿಯುಸಿಯಲ್ಲಿ 45% ಅಂಕ ಪಡೆದಿರಬೇಕು.

ವಯೋಮಿತಿ : ಸಿಪಾಯಿ, ಕ್ಲಾರ್ಕ್/ಎಸ್.ಕೆ.ಟಿ./ಸಿಪಾಯಿ ಟೆಕ್ನಿಕಲ್/ಸಿಪಾಯಿ ಎನ್‍ಎ/ಎನ್‍ಎ ವಿಇಟಿ/ ಹುದ್ದೆಗಳಿಗಾಗಿ 17 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು. ಸಿಪಾಯಿ ಜಿ.ಡಿ. ಹುದ್ದೆಗೆ ಆಗಮಿಸುವ ಅಭ್ಯರ್ಥಿಗಳ ವಯೋಮಿತಿ 17 ರಿಂದ 21 ವರ್ಷ. ಮಾಜಿ ಸೈನಿಕರಿಗೆ (ಡಿ.ಎಸ್.ಸಿ.) ಭೂಸೇನೆ, ವಾಯುಸೇನೆ, ಜಲಸೇನೆ, ಸಿಪಾಯಿ ಜಿ.ಡಿ. ಹುದ್ದೆಗೆ 48 ವರುಷ ವಯೋಮಿತಿ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸೇನಾ ಭರ್ತಿ ಕಾರ್ಯಾಲಯ ಮಂಗಳೂರನ್ನು ದೂರವಾಣಿ ಸಂಖ್ಯೆ 0824-2458376 ಹಾಗೂ ನೇಮಕಾತಿ ವಲಯ ಬೆಂಗಳೂರು ದೂರವಾಣಿ ಸಂಖ್ಯೆ 080-25596517 ಮೂಲಕ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+