ಶಿರೂರು ಗುಡ್ಡ ಕುಸಿತ 71 ದಿನಗಳ ನಂತರ ಅರ್ಜುನ ಮೃತದೇಹ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಶಿರೂರಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಕೋಯಿಕೋಡ್‌ನ ಲಾರಿ ಚಾಲಕರಾದ ಅರ್ಜುನ್ ಅವರ ಮೃತದೇಹ ಸುದೀರ್ಘ ಎರಡೂವರೆ ತಿಂಗಳ ನಂತರ ಸಿಕ್ಕಿದೆ. ಅರ್ಜುನನಿಗಾಗಿ ಇಡೀ ಕೇರಳವೇ ಪ್ರಾರ್ಥಿಸಿತ್ತು. ಆದರೆ, ದುರಾದೃಷ್ಟವಶಾತ್ ಅರ್ಜುನ್ ಬದುಕುಳಿಯಲಿಲ್ಲ. ಕೊನೆಯಾಗಿ ಅವರ ಮೃತದೇಹವಾದರೂ ಸಿಗಲಿ ಎಂದು ಅವರನ್ನು ಕಡೆಯಬಾರಿ ನೋಡಬೇಕು ಎಂದು ಅವರ ಕುಟುಂಬ ಕಾದಿತ್ತು. ಅದೂ ಸಹ ಸಾಧ್ಯವಾಗಿರಲಿಲ್ಲ. ಇದೀಗ ಮೃತದೇಹ ಸಿಕ್ಕಿದೆಯಾದರೂ..
ಏನಿದು ಘಟನೆಯ ಹಿನ್ನೆಲೆ: ಉತ್ತರ ಕನ್ನಡದಲ್ಲಿ ಜುಲೈನಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಮಳೆಯಿಂದಾಗಿ ಜುಲೈ 16ರಂದು ಭೂಕುಸಿತ (ಗುಡ್ಡ)ವಾಗಿತ್ತು. ಲಾರಿಯಲ್ಲಿ ಮರದ ದಿಮ್ಮೆಯನ್ನು ಸಾಗಿಸುತ್ತಿದ್ದ ಕೇರಳದ ಅರ್ಜುನ್ ಅವರು ಲಾರಿ ಸಹಿತ ಕಣ್ಮರೆಯಾಗಿದ್ದರು. ಭಾರೀ ಭೂಕುಸಿತದಿಂದಾಗಿ ಈ ಭಾಗದಲ್ಲಿ ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟವರು ಸಹ ಸಾವನ್ನಪ್ಪಿದ್ದರು. ಇಲ್ಲಿಯವರೆಗೆ ಈ ದುರಂತದಲ್ಲಿ 9 ಜನ ಮೃತಪಟ್ಟಿದ್ದಾರೆ. ಅರ್ಜುನ್ ಅವರ ಮೃತದೇಹ ಸಹ 71 ದಿನಗಳ ನಂತರ ಸಿಕ್ಕಿದೆ. ಶಿರೂರಿನ ಲೋಕೇಶ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಅವರು ಪತ್ತೆಯಾಗಿಲ್ಲ.

ಮೃತದೇಹ ಸಿಕ್ಕಿದ್ದು ಹೇಗೆ ?
ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯ ಆಳಭಾಗದಲ್ಲಿ ಲಾರಿಯೊಂದರ ಒಳಗೆ ಕೊಳತೆ ಸ್ಥಿತಿಯಲ್ಲಿ ಅರ್ಜುನ್ ಅವರ ಮೃತದೇಹ ಸಿಕ್ಕಿದ್ದು, ಈ ಮೃತದೇಹ ಅರ್ಜುನ್ ಅವರದ್ದೇ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣು ಹಾಗೂ ಕಲ್ಲಿನ ಅಡಿಗಳಲ್ಲಿ ತೀವ್ರ ಜಖಂಗೊಂಡ ಲಾರಿಯಲ್ಲಿ ಅರ್ಜುನ್ ಅವರ ಮೃತದೇಹ ಸಿಕ್ಕಿದೆ. ಮೃತದೇಹ ಬಹುತೇಕ ಕೊಳತೆ ಸ್ಥಿತಿಯಲ್ಲಿ ಸಿಕ್ಕಿದೆ ಎಂದು ಹೇಳಲಾಗಿದೆ. ಇನ್ನು ಕೇರಳ ಸರ್ಕಾರವು ಮೃತ ಅರ್ಜುನ ಅವರ ಕುಟುಂಬಕ್ಕೆ ಆಸರೆಯಾಗಿದೆ. ಅರ್ಜುನ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದುರಂತ ಸಂಭವಿಸಿದ ಬೆನ್ನಲ್ಲೇ ಈ ಪರಿಹಾರವನ್ನು ಘೋಷಿಸಿದ್ದರು.
ಕೇರಳದಲ್ಲಿ ನಡೆದಿತ್ತು ಪ್ರಾರ್ಥನೆ: ಅರ್ಜುನ್ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಅಲ್ಲದೇ ಇಡೀ ಕುಟುಂಬವನ್ನು ಅವರು ಮುನ್ನಡೆಸಿದ್ದರು. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಬಡ ಕುಟುಂಬದಲ್ಲಿ ಬೆಳೆದು ಇನ್ನೇನು ಒಳ್ಳೆಯ ಜೀವನ ನಡೆಸಬೇಕು ಎನ್ನುವ ಹಂತದಲ್ಲಿ ಅರ್ಜುನ್ ಕಣ್ಮರೆ ಸುದ್ದಿ ಕೇಳಿತ್ತು. ಕೇರಳದಲ್ಲಿ ಅರ್ಜುನ್ ಅವರು ಹೇಗಾದರೂ ಬದುಕಿ ಬರಬೇಕು ಎನ್ನುವ ಪ್ರಾರ್ಥನೆಗಳು ನಡೆದಿದ್ದವು. ಆದರೆ, ಯಾವ ಪ್ರಾರ್ಥನೆಗಳು ಸಹ ಫಲಿಸಲಿಲ್ಲ. ಇದೀಗ ಅವರ ಮೃತದೇಹವೂ ಸಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಇನ್ನು ಕಾರ್ಯಾಚರಣೆ ನಡೆಸುವಂತೆ ಕೇರಳ ಸರ್ಕಾರವು ಸಹ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಶಿರೂರಿನ ಗುಡ್ಡ ಕುಸಿತದ ಕಾರ್ಯಾಚರಣೆಗೆ ಕೇರಳವೂ ಕೈಜೋಡಿಸಿತ್ತು. ಅಲ್ಲದೇ ಕಳೆದ ಆರು ದಿನಗಳಿಂದಲೂ ಈ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯ ಹಿಂದೆ ಹಲವರು ಪರಿಶ್ರಮ ಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ, ಪೊಲೀಸರು ಹಾಗೂ ಭದ್ರತಾ ಪಡೆಗಳು ಹಾಗೂ ಮುಳುಗು ತಜ್ಞರು ಶ್ರಮಿಸಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications