ಅಡಿಕೆ ಬೆಳೆದ ರೈತರಿಗೆ ಬಂಪರ್: 55,000 ರೂಪಾಯಿ ಗಡಿ ದಾಟಿದ ‘ಕೆಂಪು ಚಿನ್ನ’!

ಅಡಿಕೆ ಕರ್ನಾಟಕದ ರೈತರಿಗೆ ಬೆನ್ನೆಲುಬು ಎನ್ನಬಹುದು. ಯಾಕಂದ್ರೆ ಅಡಿಕೆಯಿಂದ ನಮ್ಮ ರೈತರಿಗೆ ಭಾರಿ ಬೆಂಬಲ ಸಿಗುತ್ತಿದೆ. ಯಾವೆಲ್ಲಾ ಬೆಳೆ ಬೆಳದರೂ ಉದ್ಧಾರ ಆಗದ ರೈತರಿಗೆ, ಅಡಿಕೆ ಬೆಳೆ ಕೈಹಿಡಿದು ನಡೆಸುತ್ತಿದೆ. ಹೀಗಿದ್ದಾಗ ಅಡಿಕೆ ಬೆಳೆಗೆ ಬಂಪರ್ ಬೆಲೆ ಬರುತ್ತಿದೆ. ಇದೀಗ ಮತ್ತೊಮ್ಮೆ ಕರ್ನಾಟಕದಲ್ಲಿ ಅಡಿಕೆ ಬೆಲೆ 55,000 ರೂಪಾಯಿ ಗಡಿ ದಾಟಿ ಹೊಸ ಇತಿಹಾಸ ನಿರ್ಮಿಸಿದೆ.

ಇದೀಗ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ. ಅದ್ರಲ್ಲೂ ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂಪಾಯಿ ಗಡಿಗೆ ಹತ್ತಿರದಲ್ಲೇ ಇದೆ. ಈ ಮೂಲಕ ಅಡಿಕೆ ಬೆಲೆಯಲ್ಲಿ ಚೇತರಿಕೆ ಆಗಿದ್ದರಿಂದ, ಬೆಳೆಗಾರರು ಖುಷಿಯಾಗಿದ್ದಾರೆ. ಹೀಗೆ ಡಿಮ್ಯಾಂಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯು ಇದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಮಳೆ ಇಲ್ಲದೆ ಕಷ್ಟಪಟ್ಟು, ಟ್ಯಾಂಕರ್ ನೀರನ್ನ ಹಾಕಿ ಅಡಿಕೆ ಬೆಳೆ ಉಳಿಸಿಕೊಂಡ ರೈತರಿಗೆ ಈಗ ಖುಷಿಯಾಗಿದೆ.

Arecanut Price Has Been Crossed 55000 Rupees Of Price Once Again In Karnataka

ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟು?

ಹೆಚ್ಚಾಗಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆ ಭಾರಿ ಬೆಲೆ ಪಡೆದುಕೊಂಡಿದೆ. ಗೊರಬಲು ಗರಿಷ್ಠ 37,130 ರೂಪಾಯಿಗೆ ಮಾರಾಟವಾಗಿ, ಬೆಟ್ಟೆ ಗರಿಷ್ಠ 52,989 ರೂಪಾಯಿಗೆ ಮಾರಾಟವಾಗಿದೆ. ಹಾಗೇ ರಾಶಿ 53,921 & ಸರಕು 55 ಸಾವಿರದ ಗಡಿಯನ್ನ ಕನಿಷ್ಠ ಬೆಲೆಯಲ್ಲಿ ದಾಟಿದೆ. ಈ ಮೂಲಕ ಅಡಿಕೆ ಬೆಲೆ ಭಾರಿ ವೇಗ ಪಡೆದುಕೊಂಡು ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಮತ್ತಷ್ಟು ಏರಿಕೆಯ ಕಾಣುವ ನಿರೀಕ್ಷೆ ಇದೆ.

ಟ್ಯಾಂಕರ್‌ ನೀರಿಗೆ 1000 ರೂಪಾಯಿ!

ಅಡಿಕೆ ಬೆಳೆಗಾರರು 2-3 ತಿಂಗಳ ಹಿಂದೆ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ನಂಬಿ, ಲಕ್ಷ ಲಕ್ಷ ಖರ್ಚು ಮಾಡಿದ್ದರು. ನೀರನ್ನು ಹಾಕಿಸಿಕೊಳ್ಳಲು ಭರ್ಜರಿ 1000 ರೂಪಾಯಿ ಪ್ರತಿ ಟ್ಯಾಂಕರ್‌ಗೆ ಕೊಡಬೇಕಿತ್ತು. ಒಂದು ಎಕರೆ ಅಡಿಕೆ ತೋಟ ಇದ್ದರೆ ಭರ್ಜರಿ 5 ಟ್ಯಾಂಕರ್ ನೀರು ಒಮ್ಮೆಗೆ ಬೇಕಿತ್ತು. ಈ ರೀತಿ ತಿಂಗಳಿಗೆ ಸುಮಾರು 4 ಅಥವಾ 5 ಬಾರಿ ಟ್ಯಾಂಕರ್ ನೀರು ಹಾಕಿಸಿ, ರೈತರು ತಮ್ಮ ಬೆಳೆ ಉಳಿಸಿಕೊಂಡಿದ್ದರು. ಹೀಗೆ ಏನಿಲ್ಲ ಎಂದರೂ ರೈತರಿಗೆ ಪ್ರತಿ ತಿಂಗಳು 25 ರಿಂದ 30 ಸಾವಿರ ರೂಪಾಯಿ ಖರ್ಚು ಪ್ರತಿ ಎಕರೆಗೆ ಆಗುತ್ತಿದೆ. ಇಷ್ಟೆಲ್ಲಾ ಕಷ್ಟಪಟ್ಟಿದ್ದಕ್ಕೆ ಈಗ ಲಾಭ ಸಿಕ್ಕಂತಾಗಿದೆ.

ಕರ್ನಾಟಕದ ರೈತರು ಬರದಿಂದ ಬೆಳೆ ನಷ್ಟ ಅನುಭವಿಸಿದ್ದು, ಇದೀಗ ತೋಟಗಾರಿಕೆ ಬೆಳೆಗಳನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದು ತೋಟಗಳಿಗೂ ಟ್ಯಾಂಕರ್‌ ಮೊರೆ ಹೋಗಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. ಉತ್ತಮ ಮಳೆಯಾದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೆ & ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿ ಹೋಗಿದ್ದು, ಮಳೆ ಇಲ್ಲದೆ ಭೀಕರ ಬರ ಎದುರಾಗಿದೆ. ಇದೇ ಕಾರಣಕ್ಕೆ ಬೆಳೆ ಉಳಿಸಿಕೊಳ್ಳಲು ಅಡಕೆ ಬೆಳೆಗಾರರು ಸಾವಿರ ಸಾವಿರ ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಒಂದು ಟ್ಯಾಂಕರ್ ನೀರಿಗೆ ಅಡಕೆ ಬೆಳೆಗಾರರು ಎಷ್ಟು ಸಾವಿರ ಕೊಡಬೇಕು ಗೊತ್ತಾ? ಮುಂದೆ ಓದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+