ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಧಾರಣೆ ಕುಸಿತ: ಜೂನ್ 27ರಂದು 13 ಜಿಲ್ಲೆ ಬಂದ್

By Madhusoodhan
|
Google Oneindia Kannada News

ಬೆಂಗಳೂರು, ಜೂನ್ 25: ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿ ಖಂಡಿಸಿ ಜೂನ್ 27ರಂದು ರಾಜ್ಯದ 13 ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಅಡಿಕೆ ಧಾರಣೆ ನಿರಂತರ ಕುಸಿಯುತ್ತಿದ್ದು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಂದ್ ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

sirsi

ಸ್ಥಳೀಯ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ 13 ಜಿಲ್ಲೆಗಳಲ್ಲಿ ಸೇರಿದಂತೆ 13 ಜಿಲ್ಲೆಗಳ ಬಂದ್ ಗೆ ಕರೆನೀಡಲಾಗಿದೆ ಎಂದು ಚಂದ್ರಶೇಖರ್ ಒನ್ ಇಂಡಿಯಾಕ್ಕೆ ತಿಳಿಸಿದರು.[ಅಡಿಕೆ ಧಾರಣೆ ಪಾತಾಳಕ್ಕೆ, ಕಂಗೆಟ್ಟ ಬೆಳೆಗಾರ]

ವಿವಿಧ ಕಾರಣಗಳಿಂದ ಅಡಿಕೆ ಮತ್ತು ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಲಂಕಾ, ಮಲೇಷಿಯಾ ಸೇರಿದಂತೆ ನೆರೆ ರಾಷ್ಟ್ರಗಳಿಂದ ತೆಂಗು ಮತ್ತು ಅಡಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ದೇಶದ ಅಡಿಕೆಗೆ ಧಾರಣೆ ಇಲ್ಲವಾಗಿದೆ. ರಾಜ್ಯ ಸರ್ಕಾರ ಸಹ ನಿರ್ಲಕ್ಷ್ಯ ತಾಳಿದ್ದು ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಿದರು.

ಹಿಂದಿನ ವರ್ಷ ಕ್ವಿಂಟಲ್‌ಗೆ 80 ಸಾವಿರ ರು. ಇದ್ದ ಅಡಿಕೆ ದರ ಈಗ 20 ಸಾವಿರ ರು. ಗಿಂತ ಕೆಳಕ್ಕೆ ಕುಸಿದಿದೆ. ಅಡಿಕೆಗೆ ವಿವಿಧ ರೋಗಗಳು ತಾಗಿದ್ದು ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]

27ರಂದು ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ಬಂದ್‌ ಮಾಡುವ ಮೂಲಕ ಸರ್ಕಾರಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಲಾಗುವುದು. ಈ ಹೋರಾಟಕ್ಕೆ ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು ಮತ್ತು ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.[ಚೀನಾದ ಮೌತ್ ಫ್ರೆಶ್ನರ್ ಆಗಿ ದಕ್ಷಿಣ ಕನ್ನಡದ ಅಡಿಕೆ!]

ಬಂದ್ ಯಾಕೆ?
* ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ 13 ಜಿಲ್ಲೆಗಳಲ್ಲಿ ಬಂದ್ ಆಚರಣೆ
* ಕೇಂದ್ರದ ಆಮದು ನೀತಿ ಬದಲಾವಣೆಗೆ ಒತ್ತಾಯ
* ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡನೆ
* ಪರಿಹಾರಕ್ಕೆ ಮುಂದಾಗದಿದ್ದರೆ ಉಗ್ರ ಹೋರಾಟ

English summary
Bengaluru: The price of arecanut has declined by around 10 per cent, in a span of three months, dashing farmers' hopes. Karnataka Rajya Raitha Sangha called for 13 districts( Davanagere, Shivamogga, Uttara Kannda, Udupi) Bandh on June 27th, 2016. Karnataka Rajya Raitha Sangha president Kodihalli Chandrashekhar informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X