ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷ, ಸದಸ್ಯರ ನೇಮಕ
ಬೆಂಗಳೂರು, ಆಗಸ್ಟ್ 10: ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಆದೇಶ 2013 ಅಧ್ಯಾಯ ||ರ ಸೆಕ್ಷನ್ 3(ಬಿ) ಅನ್ವಯ ಒಂದು ವರ್ಷದ ಅವಧಿಗೆ ಸುತ್ತು ಸರದಿಯ ಮೂಲಕ ಈ ಕೆಳಕಂಡವರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಲಾಗಿದೆ.

ಮುಂದುವರೆದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಆದೇಶ 2013 ಅಧ್ಯಾಯ (||) ಸೆಕ್ಷನ್ 3 ಬಿ (2)ರ ಮೇರೆಗೆ ಶ್ರೀ ಅಜಯ್ ಸಿಂಗ್, ವಿಧಾನಸಭಾ ಸದಸ್ಯರು, ಜೇವರ್ಗಿ ವಿಧಾನಸಭಾ ಕ್ಷೇತ್ರ ಇವರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಒಂದು ವರ್ಷದ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಇತರ ಸದಸ್ಯರೆಂದರೆ ಸೈಯದ್ ನಾಜೀರ್ ಹುಸೇನ್ ರಾಜ್ಯಸಭಾ ಸದಸ್ಯರು, ಅರವಿಂದ ಅರಳಿ ಯಲಕನೂರು ಎಂಎಲ್‌ಸಿ ಬೀದರ್, ತಿಪ್ಪಣ್ಣಪ್ಪ ಕಮಕನೂರು ಎಂಎಲ್‌ಸಿ ಕಲಬುರ್ಗಿ, ಅಜಯ್ ಸಿಂಗ್ ಎಂಎಲ್‌ಎ ಜೇವರ್ಗಿ ವಿಧಾನಸಭಾ ಕ್ಷೇತ್ರ, ಬಿಆರ್ ಪಾಟೀಲ್ ಶಾಸಕ ಅಳಂದ ವಿಧಾನಸಭಾ ಕ್ಷೇತ್ರ, ರಾಜಾ ವೆಂಕಟಪ್ಪ ನಾಯ್ಕ್ ಶಾಸಕ ಯಾದಗಿರಿ ವಿಧಾನಸಭಾ ಕ್ಷೇತ್ರ, ಹಂಪನಗೌಡ ಬಾದರ್ಲಿ ಶಾಸಕ ಸಿಂಧನೂರು ವಿಧಾನಸಭಾ ಕ್ಷೇತ್ರ, ಬಸವರಾಯ ರಾಯರೆಡ್ಡಿ ಶಾಸಕ ಯಲಬುರ್ಗಾ ವಿಧಾನಸಭಾ ಕ್ಷೇತ್ರ, ರಾಘವೇಂದ್ರ ಇಟ್ನಾಳ್ ಶಾಸಕ ಕೊಪ್ಪಳ ವಿಧಾನಸಭಾ ಕ್ಷೇತ್ರ, ತುಕಾರಾಮ್ ಶಾಸಕ ಸಂಡೂರು ವಿಧಾನಸಭಾ ಕ್ಷೇತ್ರ, ಎಚ್‌ಆರ್ ಗವಿಯಪ್ಪ ಶಾಸಕ ವಿಜಯನಗರ ವಿಧಾನಸಭಾ ಕ್ಷೇತ್ರ ಇವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.












Click it and Unblock the Notifications