ಅಗ್ನಿ ಶಾಮಕ ದಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ
ಬೆಂಗಳೂರು, ಮಾ.9 : ಅಗ್ನಿ ಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 1859 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 5.
ಅಗ್ನಿ ಶಾಮಕ ಠಾಣಾಧಿಕಾರಿ 87, ಅಗ್ನಿ ಶಾಮಕ ಚಾಲಕ 352, ಚಾಲಕ ತಂತ್ರಜ್ಞ 96, ಅಗ್ನಿ ಶಾಮಕ 1324 ಹುದ್ದೆಗಳಿವೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. [ನೇಮಕಾತಿ ಆದೇಶ ನೋಡಿ]

ಅಗ್ನಿ ಶಾಮಕ ಠಾಣಾಧಿಕಾರಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದಿದ್ದು, ರಸಾಯನ ಶಾಸ್ತ್ರವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಸೇವಾನಿರತ ಅಭ್ಯರ್ಥಿಗಳಾದ ಅಗ್ನಿ ಶಾಮಕ, ಪ್ರಮುಖ ಅಗ್ನಿ ಶಾಮಕ, ಅಗ್ನಿ ಶಾಮಕ ಚಾಲಕ, ಚಾಲಕ ತಂತ್ರಜ್ಞ ಇವರುಗಳು 8 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು. ಮಾನ್ಯತೆ ಪಡೆದ ಪದವಿ ಹೊಂದಿರಬೇಕು.
ಅಗ್ನಿ ಶಾಮಕ ಚಾಲಕ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್ಎಲ್‌ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಚಾಲ್ತಿಯಲ್ಲಿರುವ ಭಾರೀ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು. [ಅರ್ಜಿ ಸಲ್ಲಿಸಲು ವಿಳಾಸ]
ಚಾಲಕ ತಂತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಚಾಲ್ತಿಯಲ್ಲಿರುವ ಚಾಲಾನಾ ಪರವಾನಿಗೆ ಹೊಂದಿರಬೇಕು ಮತ್ತು ಸರ್ಕಾರದಿಂದ ಅಂಗೀಕೃತಗೊಂಡ ಐಟಿಐನ ಆಟೋಮೊಬೈಲ್ ಟ್ರೇಡ್ ಪ್ರಮಾಣ ಪತ್ರ ಪಡೆದಿರಬೇಕು.
ವಯೋಮಿತಿ : ಅಗ್ನಿ ಶಾಮಕ ಠಾಣಾಧಿಕಾರಿ ಹುದ್ದೆಗೆ ದಿನಾಂಕ 5/4/2015ಕ್ಕೆ 21 ವರ್ಷ ತುಂಬಿದವರು ಅರ್ಜಿ ಸಲ್ಲಿಸಬಹುದು. ಪ.ಜಾ/ಪ.ಪಂ/ಹಿಂದುಳಿದ ವರ್ಗಕ್ಕೆ 21ರಿಂದ 28 ವರ್ಷ. ಸಾಮಾನ್ಯ ವರ್ಗ 21ರಿಂದ 26 ವರ್ಷ, ಮಾಜಿ ಸೈನಿಕರಿಗೆ ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ ಮೂರು ವರ್ಷಗಳ ರಿಯಾಯಿತಿ.
ಅಗ್ನಿ ಶಾಮಕ, ಚಾಲಕ ತಂತ್ರಜ್ಞ, ಅಗ್ನಿ ಶಾಮಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಿನಾಂಕ 5/4/2015ಕ್ಕೆ 18 ವರ್ಷ ಪೂರ್ಣಗೊಂಡಿರಬೇಕು. ಪ.ಜಾ/ಪ.ಪಂ/ಹಿಂದುಳಿದ ವರ್ಗಗಳಿಗೆ 18 ರಿಂದ 28 ವರ್ಷ, ಸಾಮಾನ್ಯ ವರ್ಗ 18 ರಿಂದ 26 ವರ್ಷ, ಮಾಜಿ ಸೈನಿಕರಿಗೆ ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ ಮೂರು ವರ್ಷಗಳ ರಿಯಾಯಿತಿ.












Click it and Unblock the Notifications