ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಕತ್ತಿದ್ರೆ ಕ್ರೈಸ್ತ, ಮುಸ್ಲಿಮರ ಕೈಲಿರುವ ಜಪಮಣಿ ಕಿತ್ಕೊಳ್ಳಿ

By Srinath
|
Google Oneindia Kannada News

ಬೆಂಗಳೂರು, ನ.8: ಕಂದಾಚಾರ/ ಮೂಢನಂಬಿಕೆ ನಿಷೇಧ ಪ್ರಯತ್ನ ಗಾಢವಾಗಿ ಕಾಡತೊಡಗಿದೆ. 'ವಿನಾಶ ಕಾಲಕ್ಕೆ ವಿಪರೀತ ಬುದ್ಧಿ' ಎನ್ನುವಂತೆ ಸರಕಾರ ನಡೆದು ಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಯಡಿಯೂರಪ್ಪ ಅವರು ಸ್ವಾಮಿಗಳ ಪಾದಪೂಜೆ, ಕಚೇರಿಯಲ್ಲಿ ಪೂಜೆ, ಮನೆ ಮುಂದೆ ರಂಗೋಲಿ ಹಾಕಬಾರದು ಎಂದು ಹೇಳಲು ಸಿದ್ದರಾಮಯ್ಯ ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸ್ಪಷ್ಟ ಬಹುಮತ ಇದೆ ಎಂದು ಬೀಗುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠಕ್ಕೆ ಬಿದ್ದು ಬೆಳಗಾವಿ ಅಧಿವೇಶನದಲ್ಲಿ ಮೂಢನಂಬಿಕೆ ನಿಷೇಧಕ್ಕೆ ಯತ್ನಿಸಿದರೆ ಅದು ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ. ಮೂಢನಂಬಿಕೆ ಸಿದ್ದು ಸರಕಾರ ಬಲಿಯಾಗುವುದು ಖಚಿತ ಎಂದು ಪ್ರತಿಪಕ್ಷಗಳು ವಿರೋಧದ ಕಿಡಿಹೊತ್ತಿಸಿವೆ.

ಮೌಢ್ಯ ಆಚರಣೆಗಳ ಸಂಬಂಧ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲದ ಕಾಯ್ದೆಯನ್ನು (ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ-2013) ಸರಕಾರ ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿದೆ. ರಾಜ್ಯ ಸರಕಾರ ಮೂಢನಂಬಿಕೆ ನಿಷೇಧ ಕಾಯ್ದೆ ವಿಷಯದಲ್ಲಿ ಇಲ್ಲದ ಅತಿರೇಕವಾಗಿ ವರ್ತಿಸುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಬಹುತೇಕ ಎಲ್ಲ ವಿರೋಧ ಪಕ್ಷಗಳ ನಾಯಕರು ಮೂಢನಂಬಿಕೆ ನಿಷೇಧ ಕರಡು ಮತ್ತು ಅದನ್ನು ರಚಿಸಿದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ರೈಸ್ತ, ಮುಸ್ಲಿಮರೂ ಜಪಮಣಿ ಹಿಡಿಯುತ್ತಾರೆ

ಕ್ರೈಸ್ತ, ಮುಸ್ಲಿಮರೂ ಜಪಮಣಿ ಹಿಡಿಯುತ್ತಾರೆ

ಜಪಮಣಿ ಹಿಡಿಯುವ ವ್ಯವಸ್ಥೆ ಕ್ರೈಸ್ತ ಮತ್ತು ಮುಸ್ಲಿಂ ಧರ್ಮಗಳಲ್ಲಿಯೂ ಇದೆ. ಅದನ್ನು ನಿಷೇಧಿಸುವ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದರ್ಶಿಸುತ್ತಾರಾ? ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಕೆಲ್ಸವಿಲ್ಲದ ಲೇಖಕರ ಮಾತು ಕೇಳಿ ಮೌಢ್ಯ ನಿಷೇಧ

ಕೆಲ್ಸವಿಲ್ಲದ ಲೇಖಕರ ಮಾತು ಕೇಳಿ ಮೌಢ್ಯ ನಿಷೇಧ

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಇಲ್ಲದ ಬರಹಗಾರರ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹು ಜನರ ನಂಬಿಕೆಗೆ ಧಕ್ಕೆ ತರುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲ. ಶಾಲಾ ಮಕ್ಕಳು ದೇವಾಲಯಕ್ಕೆ ಭೇಟಿ ನೀಡುವುದನ್ನೂ ನಿರ್ಭಂಧಿಸುವ ಕಾಯಿದೆ ವರ್ಗ ಸಂಘರ್ಷಕ್ಕೆ ಆಹ್ವಾನ ನೀಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಸನದಲ್ಲಿ ಎಚ್ಚರಿಸಿದ್ದಾರೆ.

ಜೆಡಿಎಸ್ ನಿಲುವೇನು?

ಜೆಡಿಎಸ್ ನಿಲುವೇನು?

ಜೆಡಿಎಸ್ ನಾಯಕ ಕುಮಾರಸ್ವಾಮಿ ಇನ್ನೂ ಹೇಳಿದ್ದಾರೆಂದರೆ- 'ನಾಡಿನ ಸಾಹಿತಿಗಳು ಮತ್ತು ಬರಹಗಾರರ ಬಗ್ಗೆ ತಮಗೆ ಅಪಾರ ಗೌರವ ಇದೆ, ಆದರೆ ಕೆಲಸ ಇಲ್ಲದ, ಸರ್ಕಾರವನ್ನು ರಿಮೋಟ್‌ ಕಂಟ್ರೋಲ್‌ ಮಾಡುತ್ತಿರುವ ಕೆಲ ಬರಹಗಾರರ ಮಾತು ಕೇಳಿ ಬಹುಜನರ ನಂಬಿಕೆಗಳನ್ನು ಹತ್ತಿಕ್ಕಲು ಹೊರಟಿರುವ ಕ್ರಮ ಸರಿಯಲ್ಲ'

'ಇಸ್ರೋ ಅಧ್ಯಕ್ಷರೇ ಮಂಗಳಯಾನ ರಾಕೆಟ್‌ ಉಡಾವಣೆಯಲ್ಲಿ ಯಾವುದೇ ವಿಘ್ನ ಎದುರಾಗದಿರಲಿ ಎಂದು ದೇವರ ಮೊರೆ ಹೋಗಿರುವಾಗ ಅಂಥ ಪೂಜೆ ಮಾಡುವುದನ್ನೇ ನಿಷೇಧಿಸಲು ಹೊರಟಿರುವುದು ಎಷ್ಟು ಸರಿ? ಇಂಥ ಸಂಘರ್ಷದ ವಾತಾವರಣ ಸೃಷ್ಟಿಸುವ ಬದಲು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿ, ಬದಲಾಗಿ ಜನರ ನಂಬಿಕೆಗಳಿಗೆ ಅಡ್ಡಿ ಪಡಿಸುವ ಕೆಲಸ ಬ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ

ಹಿಂದುಗಳ ನಂಬಿಕೆಯನ್ನು ಘಾಸಿಗೊಳಿಸುವ ರೀತಿಯಲ್ಲಿ ಈ ಮಸೂದೆಯನ್ನು ರೂಪಿಸಲಾಗಿದೆ. ಗುದ್ದಲಿ ಪೂಜೆ, ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವದಂತಹ ಆಚರಣೆಗಳನ್ನೂ ಮೂಢನಂಬಿಕೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಹೀಗಾಗಿ ಈ ಮಸೂದೆ ಜನವಿರೋಧಿ. ಈ ಸರ್ಕಾರಕ್ಕೆ ಅಭಿವೃದ್ಧಿ ವಿಷಯದಲ್ಲಿ ಜನಪ್ರಿಯತೆ ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ವಿವಾದಗಳ ಮೂಲಕ ಜನಪ್ರಿಯವಾಗಲು ಹೊರಟಿದೆ. ಒಂದು ವರ್ಗವನ್ನು ಸಂತೃಪ್ತಿಗೊಳಿಸಲು ಜನರ ನಂಬಿಕೆಗೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುತ್ತಿದೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ ಶೆಟ್ಟರ್:

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ ಶೆಟ್ಟರ್:

ಹಿಂದು ಸಮಾಜ ಕಾಲಕಾಲಕ್ಕೆ ಬದಲಾವಣೆಯನ್ನು ಸ್ವೀಕರಿಸಿದೆ. ಸತಿಸಹಗಮನ ಪದ್ಧತಿಯನ್ನು ತಿರಸ್ಕರಿಸಿದೆ. ಪತಿ ಸತ್ತ ನಂತರ ಪತ್ನಿ ಕೇಶಮುಂಡನೆ ಮಾಡಿಸುವುದು ಬಹುತೇಕ ನಿಂತಿದೆ. ಹೀಗೆ ಅನೇಕ ಆಚರಣೆಗಳು ತನ್ನಿಂದ ತಾನೆ ಜನರಿಂದ ದೂರ ಆಗಿವೆ. ಹಿಂದು ಧರ್ಮ ಶ್ರೇಷ್ಠವಾದದ್ದು. ಅದನ್ನು ವಿಚಾರವಾದಿಗಳು ಕೀಳಾಗಿ ಕಂಡಿದ್ದಾರೆ. ಬೇಕಾಬಿಟ್ಟಿ ಶಿಫಾರಸುಗಳನ್ನು ಮಾಡಿದ್ದಾರೆ. ಬೇರೆ ಧರ್ಮಗಳಲ್ಲಿನ ಮೂಢನಂಬಿಕೆಗಳ ಕಡೆಗೆ ಅವರು ಗಮನವನ್ನೂ ಕೊಟ್ಟಿಲ್ಲ. ಹೀಗಾಗಿ 'ಕೈ' ಇಲ್ಲದವರಿಗೆ 'ಕೈ', 'ಕಾಲು' ಇಲ್ಲದವರಿಗೆ 'ಕಾಲು' ನೀಡುತ್ತಾರೆ ಎನ್ನುವ ಬೆನ್‌ ಹಿನ್‌ ಅವರಿಂದ 'ಬುದ್ಧಿ'ಇಲ್ಲದ ಈ ವಿಚಾರವಾದಿಗಳಿಗೆ 'ಬುದ್ಧಿ' ಕೊಡಿಸಬೇಕಾಗಿದೆ.

ಗೊಂದಲದಲ್ಲಿರುವ ಮುಖ್ಯಮಂತ್ರಿಗೆ ಶೆಟ್ಟರ್‌ ಸಲಹೆ:

ಗೊಂದಲದಲ್ಲಿರುವ ಮುಖ್ಯಮಂತ್ರಿಗೆ ಶೆಟ್ಟರ್‌ ಸಲಹೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಮೂಢನಂಬಿಕೆಯ ಗುಂಗಿನಿಂದ ಹೊರಬಂದು, ನಂತರ ಮಸೂದೆ ಮಂಡನೆಗೆ ತಯಾರಿ ನಡೆಸಲಿ ಎಂದೂ ಶೆಟ್ಟರ್‌ ಟೀಕಿಸಿದ್ದಾರೆ.
ಪ್ರತಿಪಕ್ಷಗಳು ಟೀಕೆ ಮಾಡಿದ ನಂತರ ಚಾಮರಾಜನಗರಕ್ಕೆ ಭೇಟಿ ನೀಡಿದರು. ಆದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆಯ ಕಾರಣಕ್ಕೇ ಕಿತ್ತೂರು ಉತ್ಸವಕ್ಕೂ ಗೈರುಹಾಜರಾದರು. ಹೀಗಾಗಿ ಇನ್ನೂ ಅವರೇ ಗೊಂದಲದಲ್ಲಿದ್ದಾರೆ. ಮೊದಲು ಅದರಿಂದ ಹೊರಬರಲಿ. ನಂತರ ಇಂತಹ ಮಸೂದೆಗಳ ಬಗ್ಗೆ ಚಿಂತನೆ ಮಾಡಲಿ.

ಬಕೆಟ್ ಹಿಡಿವ ಬುದ್ಧಿಜೀವಿಗಳು

ಬಕೆಟ್ ಹಿಡಿವ ಬುದ್ಧಿಜೀವಿಗಳು

ಎಚ್ ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ- 'ಯಾರೋ ನಾಲ್ಕು ಬುದ್ಧಿಜೀವಿಗಳನ್ನು ಕಟ್ಟಿಕೊಂಡು ಸರ್ಕಾರ ಜನರ ನಂಬಿಕೆಗಳನ್ನು ಹಾಳು ಮಾಡಲು ಹೊರಟಿದೆ. ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗಿದ್ದಾರೆ. ಬುದ್ಧಿಜೀವಿಗಳು ಅಥವಾ ವಿಚಾರವಾದಿಗಳನ್ನು ಕಟ್ಟಿಕೊಂಡು ಸರ್ಕಾರ ನಡೆಸುವುದಕ್ಕೆ ಸಾಧ್ಯವಿಲ್ಲ.
ಈ ಬುದ್ಧಿಜೀವಿಗಳು ಎನಿಸಿಕೊಂಡವರ ಕತೆ ಏನೆಂದು ಎಲ್ಲರಿಗೂ ಗೊತ್ತಿದೆ. ಇವರೆಲ್ಲ ಯಾರು ಯಾರ ಅಧಿಕಾರಾವಧಿಯಲ್ಲಿ ಯಾರಿಗೆಲ್ಲಾ ಬಕೆಟ್ ಹಿಡಿದಿದ್ದಾರೆ, ಯಾರನ್ನೆಲ್ಲಾ ಹೊಗಳುತ್ತಾರೆ ಎಂಬುದು ಗೊತ್ತು. ಇಂಥವರನ್ನು ಕಟ್ಟಿಕೊಂಡು ಜನರ ನಂಬಿಕೆ ಹಾಳು ಮಾಡುವ ಬದಲು ಬಡವರ ಕಲ್ಯಾಣ ಕಾರ್ಯಕ್ರಮಗಳ ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ನೀಡಲಿ.

ಸ್ವಾಸ್ಥ್ಯ ಕೆಡಿಸುವ ಪ್ರಯತ್ನ

ಸ್ವಾಸ್ಥ್ಯ ಕೆಡಿಸುವ ಪ್ರಯತ್ನ

ಡಿವಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ - ಮೌಢ್ಯ ಪ್ರತಿಬಂಧಕ ಕಾನೂನನ್ನು ಜಾರಿಗೆ ತರಲು ಬಿಡುವುದಿಲ್ಲ. ಇದು ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತದ್ದು. ವಿಧಾನಮಂಡಲ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಇದು ಸಮಾಜದಲ್ಲಿ ವಿಷಬೀಜ ಬಿತ್ತುವ ಮತ್ತು ಸ್ವಾಸ್ಥ್ಯ ಕೆಡಿಸುವ ಪ್ರಯತ್ನ.

English summary
Yeilding to so-called intellectuals over Anti-superstition bill Chief Minister Siddaramaiah is in danger zone says JDS leader HD Kumaraswamy. Maintaining that the proposed bill, to be tabled during the upcoming winter session of Assembly at Belgaum, hurts the Hindu sentiments, Almost all opposition parties threatened to stall the session if the government tabled it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X