ಶ್ರೀರಾಮ ಸೇನೆಯಿಂದ 'ಹಿಂದೂ ವಿರೋಧಿ ಟಿಪ್ಪು ಸುಲ್ತಾನ್' ಪುಸ್ತಕ ಬಿಡುಗಡೆ

Subscribe to Oneindia Kannada

ಬೆಂಗಳೂರು, ನವೆಂಬರ್ 7: ಟಿಪ್ಪು ಜಯಂತಿ ಸಮೀಪಿಸುತ್ತಿರುವ (ನವೆಂಬರ್ 10) ಬೆನ್ನಿಗೆ ಶ್ರೀರಾಮ ಸೇನೆ 'ಹಿಂದೂ ವಿರೋಧಿ ಟಿಪ್ಪು ಸುಲ್ತಾನ್' ಪುಸ್ತಕ ಹೊರ ತಂದಿದೆ.

ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಈ ಪುಸ್ತಕ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಮಧ್ಯಾಹ್ನ ಮೂರು ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಈ ಕಿರು ಪುಸ್ತಕ ಬಿಡುಗಡೆಯಾಗಲಿದೆ.

'Anti-Hindu tipu sultan' book released by Sri Ram Sena

"ಕರ್ನಾಟಕ ಕಂಡ ಅತ್ಯಂತ ಕ್ರೂರಿ, ಮತಾಂಧ, ಹಿಂದೂ ವಿರೋಧಿ ಟಿಪ್ಪು ಸುಲ್ತಾನ್ ಬಗ್ಗೆ ಒಂದು ವರ್ಗ ಸಮರ್ಥನೆ ಮಾಡಿಕೊಂಡು ಬಂದಿದೆ. ಅದಕ್ಕಾಗಿ ಟಿಪ್ಪು ಸುಲ್ತಾನ್ ನಿಜ ಸ್ವರೂಪವನ್ನು ಜನರ ಮುಂದಿಡಲು ಈ ಕಿರು ಪುಸ್ತಕ ಹೊರ ತರುತ್ತಿದ್ದೇವೆ," ಎಂದು ಶ್ರೀರಾಮ ಸೇನೆ ಹೇಳಿದೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ನಿವೃತ್ತ ನ್ಯಾಯಾಮೂರ್ತಿಗಳಾದ ರಾಮ ಜೋಯಿಸ್, ನಾಡೋಜ ಎಂ ಚಿದಾನಂದಮೂರ್ತಿ, ಹಿರಿಯ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shri Ram Sena has come out with a book titled "Anti-Hindu Tipu Sultan".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ