ಮತಾಂತರ ನಿಷೇಧ ಕಾಯ್ದೆ ರದ್ದು: ಲವ್ ಜಿಹಾದ್‌ಗೆ ಗ್ರೀನ್ ಸಿಗ್ನಲ್, ಮುಸ್ಲಿಂ ಲೀಗ್ ಆದ ಕಾಂಗ್ರೆಸ್, ಕರಾಳ ದಿನ: ಆಕ್ರೋಶ
ಬೆಂಗಳೂರು, ಜೂನ್ 15: ರಾಜಕೀಯವಾಗಿ ನಮ್ಮನ್ನು ವಿರೋಧಿಸುವ ಭರದಲ್ಲಿ ಅವುಗಳನ್ನು ಹಿಂತೆಗೆದುಕೊಳ್ಳುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ರಾಷ್ಟ್ರ ವಿರೋಧಿ ಮತ್ತು ರೈತ ವಿರೋಧಿ ಧೋರಣೆಗಳನ್ನು ಪ್ರದರ್ಶಿಸುತ್ತಿದೆ ಎಂದು ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಹಿಂದಿನ ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಗುರುವಾರ ರದ್ದು ಮಾಡಿದೆ. ಈ ಸಂಬಂಧ ಕರ್ನಾಟಕ ಬಿಜೆಪಿ ಮತ್ತದರ ನಾಯಕರುಗಳು ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಿಜೆಪಿಯು ಟ್ವೀಟ್ ಮಾಡಿ, ರಾಷ್ಟ್ರದ ಹಿತ, ರೈತರ ಹಿತ ಮತ್ತು ಸಂಸ್ಕೃತಿಯ ರಕ್ಷಣೆಯ ಭಾಗವಾಗಿ ನಮ್ಮ ಸರ್ಕಾರ ಎಪಿಎಂಸಿ ಕಾಯ್ದೆ, ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಮುಂತಾದ ಕಾಯ್ದೆಗಳನ್ನು ಜಾರಿಗೆ ತಂದಿತ್ತು.
ʼಮತಾಂತರ ನಿಷೇಧ ಕಾಯ್ದೆʼ ಹಿಂಪಡೆಯುವ ತೀರ್ಮಾನ ಮಾಡಿರುವ ಕಾಂಗ್ರೆಸ್ ಸರ್ಕಾರ ಮತ್ತೆ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ.
— Nalinkumar Kateel (@nalinkateel) June 15, 2023
ಅಲ್ಪಸಂಖ್ಯಾತರ ಓಲೈಕೆಗಾಗಿ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಬಲವಂತದ ಮತಾಂತರ, ಲವ್ ಜಿಹಾದ್ʼನಂತಹ ಪ್ರಕರಣಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.
1/2
ಆದರೆ ರಾಜಕೀಯವಾಗಿ ನಮ್ಮನ್ನು ವಿರೋಧಿಸುವ ಅವಸರದಲ್ಲಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ರಾಷ್ಟ್ರ ವಿರೋಧಿ ಮತ್ತು ರೈತ ವಿರೋಧಿ ಧೋರಣೆಗಳನ್ನು ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನಿತ್ಯವೂ ಹೊಸ ಅಧಃಪತನ ಕಾಣುತ್ತಿದೆ. ದೇಶವನ್ನೇ ಶಿಥಿಲಗೊಳಿಸಲು ಹವಣಿಸುತ್ತಿರುವ ಕಾಂಗ್ರೆಸ್ ಜನರ ಭಾವನೆಗಳಿಗೆ ಕೊಳ್ಳಿ ಇಡುವ ಮೂಲಕ ಸ್ವತಃ ಶಿಥಿಲಗೊಳ್ಳಲಿದೆ ಎಂದು ತಿವಿದಿದೆ.

ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್
ಇನ್ನೂ ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಕರ್ನಾಟಕದಲ್ಲಿ ಮತಾಂತರ ಕಾಯ್ದೆ ರದ್ಧತಿಯನ್ನು ಮಾಫಿಯಾ ಎಂದು ಅವರು ಕರೆದಿದ್ದಾರೆ. ಈ ಮಾಫಿಯಾ ಮೂಲಕ ಹಿಂದೂ ವಿರೋಧಿ ಕಾಂಗ್ರೆಸ್ ಎಂಬುದನ್ನು ಖಚಿತವಾಗಿದೆ. ಬಿಜೆಪಿ ಸರ್ಕಾರ ತಂದ ಮತಾಂತ ವಿರೋಧಿ ಕಾಯ್ದೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರದ್ದುಗೊಳಸಿದೆ ಎಂದು ಅವರು ಕಿಡಿ ಕಾರಿದರು.
ಜನಸ್ನೇಹಿ ಭಾಗ್ಯಗಳನ್ನು ನೀಡುವಲ್ಲಿ ವಿಫಲವಾಗಿರುವ ಅಸಮರ್ಥ ಮತ್ತು ಕೋಮುವಾದಿ ಕಾಂಗ್ರೆಸ್ ಕನ್ನಡಿಗರಿಗೆ ಮತಾಂತರ ಭಾಗ್ಯ ನೀಡುತ್ತಿದೆ. ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಆಗಿದೆ ಎಂದು ಆರೋಪಿಸಿರುವ ಸಿಟಿ ರವಿ ಅವರು, ಹಿಂದೂಗಳನ್ನು ನೋಯಿಸಲು ಕಾಂಗ್ರೆಸ್ ಪಕ್ಷ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದೆ ಎಂದರು.
ಕರ್ನಾಟಕದ ಪಾಲಿಗೆ ದುಃಖದ ದಿನ
ಸಂಸದ ತೇಜಸ್ವಿ ಅವರು ಮತಾಂತರ ನಿಷೇಧ ಕಾಯ್ದೆ ರದ್ದು ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ PFIದ ಅಜೆಂಡಾ ವನ್ನು ಕಾರ್ಯರೂಪಕ್ಕೆ ತರುತ್ತಿದೆ.
ಮತಾಂತರ ವಿರೋಧಿ ಕಾನೂನನ್ನು ಹಿಂತೆಗೆದುಕೊಳ್ಳಲು ನಿರ್ಧರಿಸುವ ಮೂಲಕ, ಕಾಂಗ್ರೆಸ್ ಸರ್ಕಾರವು ಸಂವಿಧಾನ ಮತ್ತು ಮೋಸದ ಧಾರ್ಮಿಕ ಮತಾಂತರಗಳನ್ನು ಸ್ಪಷ್ಟವಾಗಿ ನಿಷೇಧಿಸುವ ಎಸ್‌ಸಿ ತೀರ್ಪುಗಳ ವಿರುದ್ಧ ನಿರ್ಧಾರ ಕೈಗೊಂಡಿದೆ ಎಂದು ಅವರು ಗುಡುಗಿದರು.
ವಿಡಿ ಸಾವರ್ಕರ್ ಮತ್ತು ಹೆಡಗೇವಾರ್ ಅವರ ಅಧ್ಯಾಯಗಳನ್ನು ಪಠ್ಯ ಪುಸ್ತಕಗಳಿಂದ ಕೈ ಬಿಡಲು ಬಯಸುತ್ತಿರುವ ಕಾಂಗ್ರೆಸ್ ಕೂಡ ತಮ್ಮ ಅಪರಾಧಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಕರ್ನಾಟಕದ ಪಾಲಿಗೆ ಇಂದು ದುಃಖದ ದಿನ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾಯ್ದೆ ರದ್ದಿಗೆ ಯಾವ 'ಮಾಫಿಯಾ'ದ ಒತ್ತಡವಿದೆ: ಯತ್ನಾಳ್
ಪ್ರಮುಖ ಹಿಂದುವಾದಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯನವರು ಹಿಂದೂ ವಿರೋಧಿ ನಿಲುವನ್ನು ಅನುಸರಿಸಿದ್ದಾರೆ. ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು "ಹಿಂದೂ" ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ? ಎಂದು ಅವರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಯಾವ "ಮಾಫಿಯಾ" ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜವ್ ಜಿಹಾದ್‌ಗಳಿಗೆ ಕಾಂಗ್ರೆಸ್ 'ಗ್ರೀನ್ ಸಿಗ್ನಲ್'
'ಮತಾಂತರ ನಿಷೇಧ ಕಾಯ್ದೆ' ಹಿಂಪಡೆಯುವ ತೀರ್ಮಾನ ಮಾಡಿರುವ ಕಾಂಗ್ರೆಸ್ ಸರ್ಕಾರ ಮತ್ತೆ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ ಹೊರತು ಬೇರೆನೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ವಾಗ್ಬಾಣ ಬಿಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಬಲವಂತದ ಮತಾಂತರ, ಲವ್ ಜಿಹಾದ್ʼನಂತಹ ಪ್ರಕರಣಗಳಿಗೆ ಈ ಮೂಲಕ 'ಗ್ರೀನ್ ಸಿಗ್ನಲ್' ನೀಡಿದೆ.
ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಗೆ ನನ್ನ ಧಿಕ್ಕಾರವಿರಲಿ. ಹಿಂದೂಗಳು ಈಗ ಜಾಗೃತರಾಗಿದ್ದಾರೆ. ನಿಮ್ಮ ಓಲೈಕೆಯ ಆಟ ಇನ್ನು ಮುಂದೆ ನಡೆಯುವುದಿಲ್ಲ. ಹಿಂದೂಗಳನ್ನು ರದ್ದಿ ಕಾಗದದಂತೆ ಬಳಸುವ ನಿಮ್ಮ ದಾರ್ಷ್ಟ್ಯಕ್ಕೆ ಶೀಘ್ರವೇ ಉತ್ತರ ಸಿಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ಈ ಹಿಂದೆ ತಿಳಿಸಿದಂತೆ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಿದ್ದಲ್ಲದೇ, ಪಠ್ಯದಿಂದ ಕೆಲವು ಅಧ್ಯಾಯನಗಳನ್ನು ಕೈ ಬಿಟ್ಟಿದೆ. ಎಪಿಎಂಸಿ ಕಾಯ್ದೆ ಸಹ ರದ್ದು ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕೆಲವು ಪ್ರಮುಖ ಕಾಯ್ದೆ, ಕಾನೂನುಗಳನ್ನು ಕಾಂಗ್ರೆಸ್ ರದ್ದುಗೊಳಿಸಿದೆ.












Click it and Unblock the Notifications