Annamalai: ಟಿಪ್ಪು ಸುಲ್ತಾನ್ ಬಗ್ಗೆ ಅಣ್ಣಾಮಲೈ ಬಾಯಿತುಂಬಾ ಹೊಗಳಿದ್ದರು...

ಟಿಪ್ಪು ಸುಲ್ತಾನ್ ಬಗ್ಗೆ ಪದೇ ಪದೇ ಚರ್ಚೆ ನಡೆಯುತ್ತದೆ, ಅದರಲ್ಲೂ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ ವಿಚಾರ ಹಿಡಿದು ಸಾಕಷ್ಟು ಚರ್ಚೆ ಮಾಡುತ್ತಾರೆ. ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಕರ್ನಾಟಕ ಮಾತ್ರವಲ್ಲ ಕೇಂದ್ರ ಬಿಜೆಪಿ ನಾಯಕರಿಗೂ ಟಿಪ್ಪು ಸುಲ್ತಾನ್ ವಿಚಾರ ದೊಡ್ಡ ಅಸ್ತ್ರವಾಗಿದೆ. ಆದರೆ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಈಗಿನ ಬಿಜೆಪಿ ನಾಯಕರಾದ ಕೆ. ಅಣ್ಣಾಮಲೈ ಅವರು 'ಟಿಪ್ಪು ಸುಲ್ತಾನ್' ಬಗ್ಗೆ ಏನು ಹೇಳಿದ್ದರು ಅಂದ್ರೆ...

ಕೆ. ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ವೇಳೆ, ಸಾಕಷ್ಟು ದೊಡ್ಡ ಹೆಸರು ಮಾಡಿದ್ದರು. ಅದರಲ್ಲೂ ಸಿಗಂ ಎಂಬ ಬಿರುದು ಕೂಡ ಪಡೆದು ರಾಷ್ಟ್ರ ಮಟ್ಟದಲ್ಲಿ ಕೆ. ಅಣ್ಣಾಮಲೈ ಅವರು ಮಿಂಚಿದ್ದರು. ಯಾವುದೇ ಪಕ್ಷದ ಸರ್ಕಾರವೇ ಇದ್ದರೂ ಕೆ. ಅಣ್ಣಾಮಲೈ ಅವರು ಕೆಲಸದ ವಿಚಾರದಲ್ಲಿ ರಾಜಿ ಆಗುತ್ತಿರಲಿಲ್ಲ. ಬಿಜೆಪಿ & ಕಾಂಗ್ರೆಸ್ ಎರಡೂ ಪಕ್ಷದ ನಾಯಕರು & ಮುಖಂಡರಿಗೂ ಬೆವರು ಇಳಿಸುತ್ತಿದ್ದರು. ಹೀಗೆಲ್ಲಾ ಕೆ. ಅಣ್ಣಾಮಲೈ ಕೆಲಸಕ್ಕೆ ಸರ್ಕಾರ ಕೂಡ ಗುಡ್ ಗುಡ್ ಅಂದಿತ್ತು. ಅಲ್ಲದೆ ಕೋಮು ಸಂಘರ್ಷ ನಡೆದು, ರಕ್ತಪಾತವೇ ಆಗುತ್ತಿದ್ದ ಜಿಲ್ಲೆಗಳಲ್ಲಿ ಶಾಂತಿ ಮೂಡಿಸಲು ಇದೇ ಕೆ. ಅಣ್ಣಾಮಲೈ ಅವರು ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

Annamalai Once Said This About Tipu Sultan And Sringeri Temple

ಟಿಪ್ಪು ಸುಲ್ತಾನ್ ಬಗ್ಗೆ ಅಣ್ಣಾಮಲೈ ಮಾತು!

ಕೆ. ಅಣ್ಣಾಮಲೈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದ ಸಮಯದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದರು. ಹೀಗೆ ಮಾತನಾಡುವಾಗ, ಟಿಪ್ಪು ಸುಲ್ತಾನ್ ಹೇಗೆಲ್ಲಾ ಕರ್ನಾಟಕದ ದೇಗುಲ & ಮಠಗಳಿಗೆ ಗೌರವ ನೀಡುತ್ತಿದ್ದರು ಎಂಬುದರ ಕುರಿತು ಹೇಳಿದ್ದರು. ಅಲ್ಲದೆ ಟಿಪ್ಪು ಸುಲ್ತಾನ್ ಹಿಂದೂ ದೇಗುಲಗಳಿಗೆ ಎಷ್ಟೆಲ್ಲಾ ರಕ್ಷಣೆಯನ್ನ ನೀಡಿದ್ದರು ಎಂಬುದನ್ನ ಪ್ರಸ್ತಾಪ ಮಾಡಿದ್ದರು. ಕೆ. ಅಣ್ಣಾಮಲೈ ಬಿಜೆಪಿ ಸೇರುವ ಮೊದಲು ಅಂದ್ರೆ ಪೊಲೀಸ್ ಅಧಿಕಾರಿ ಆಗಿದ್ದ ಸಮಯದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಮಾಡಿದ್ದ ಭಾಷಣ ಇದೀಗ ಮತ್ತೆ ವೈರಲ್ ಆಗುತ್ತಿದೆ!

ಕೆ. ಅಣ್ಣಾಮಲೈ ಹೇಳಿದ್ದು ಏನು?

ಕಾರ್ಯಕ್ರಮ ಒಂದರಲ್ಲಿ ಕೆ. ಅಣ್ಣಾಮಲೈ ಈ ಹಿಂದೆ ಮಾತನಾಡುತ್ತಾ, ಟಿಪ್ಪು ಸುಲ್ತಾನ್ ಯಾವ ರೀತಿ ಜಾತ್ಯಾತೀತ ವಾದಿ ಆಗಿದ್ದರು? ಅನ್ನೋದನ್ನ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಅದೇ ರೀತಿ ಶೃಂಗೇರಿ ದೇಗುಲ ಹಾಗೂ ಕೊಲ್ಲೂರು ದೇಗುಲದ ವಿಚಾರ ಕೂಡ ಪ್ರಸ್ತಾಪಿಸಿ, ಟಿಪ್ಪು ಸುಲ್ತಾನ್ ಆಗ ಮಾಡಿದ್ದ ಸಹಾಯದ ಬಗ್ಗೆ ಕೂಡ ಮಾತನಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಸೆಕ್ಯುಲರ್ ಆಗಿದ್ದ ಕೆ. ಅಣ್ಣಾಮಲೈ ದಿಢೀರ್ ಬದಲಾವಣೆ ಆದ್ರಾ? ಅನ್ನೋ ಪ್ರಶ್ನೆಯನ್ನ ಇದೀಗ ಸೋಷಿಯಲ್ ಮೀಡಿಯಾ ಬಳಕೆದಾರರು ಕೇಳುತ್ತಿದ್ದಾರೆ. ಈ ಮೂಲಕ ಕೆ. ಅಣ್ಣಾಮಲೈ ವಿಡಿಯೋ ಭರ್ಜರಿ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ನಾಯಕರು ಇದನ್ನೇ ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ನಾಯಕರಿಗೆ ಪ್ರಶ್ನೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+