ಮಗ ನಿಖಿಲ್ ಮದುವೆ ಬಗ್ಗೆ ಹೀಗೆ ಹೇಳಿದ್ಯಾಕೆ ತಾಯಿ ಅನಿತಾ ಕುಮಾರಸ್ವಾಮಿ?

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಗೆ ಮದುವೆ ನಿಶ್ಚಯವಾಗಿದೆ. ಏಪ್ರಿಲ್ 17 ರಂದು ನಿಖಿಲ್ ಕುಮಾರ್ ಮತ್ತು ರೇವತಿ ಕಲ್ಯಾಣ ನಡೆಯಲಿದೆ.

ನಿಖಿಲ್-ರೇವತಿ ವಿವಾಹ ಮಹೋತ್ಸವ ರಾಮನಗರದಲ್ಲಿ (ಬೆಂಗಳೂರು-ಮೈಸೂರು ರಸ್ತೆ) ಇರುವ ಜಾನಪದ ಲೋಕದ ಹತ್ತಿರ ಸಪ್ತಪದಿ ಮಂಟಪದಲ್ಲಿ ನೆರವೇರಲಿದೆ. ಮದುವೆಗೆ ಇನ್ನೊಂದು ತಿಂಗಳು ಬಾಕಿಯಿದ್ದು, ತಯಾರಿಯಲ್ಲಿ ಕುಟುಂಬಸ್ಥರು ತೊಡಗಿದ್ದಾರೆ.

'ಈ' ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ನಿಖಿಲ್ ಭಾವಿ ಪತ್ನಿ ರೇವತಿ.!

ಈ ನಡುವೆ 'ನಿಖಿಲ್-ರೇವತಿ' ಮದುವೆಗೆ ಬರೋಬ್ಬರಿ 8 ಲಕ್ಷ ಲಗ್ನ ಪತ್ರಿಕೆ ಪ್ರಿಂಟ್ ಮಾಡಿಸಲಾಗಿದೆ, ರಾಮನಗರ-ಚನ್ನಪಟ್ಟಣದ ಮನೆ ಮನೆಗೂ ಸೀರೆ, ಶರ್ಟ್, ಪಂಚೆಯನ್ನ ಉಡುಗೊರೆಯಾಗಿ ನೀಡಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿಬಂದಿತ್ತು. ಇದೇ ವಿಚಾರದ ಕುರಿತು ನಿಖಿಲ್ ಕುಮಾರಸ್ವಾಮಿ ತಾಯಿ, ಶಾಸಕಿ ಅನಿತಾ ಕುಮಾರಸ್ವಾಮಿ ಕ್ಲಾರಿಟಿ ಕೊಟ್ಟಿದ್ದಾರೆ.

ಲಕ್ಷಾಂತರ ಗಟ್ಟಲೆ ಲಗ್ನಪತ್ರಿಕೆ ಪ್ರಿಂಟ್ ಮಾಡಿಸಿದ್ದೀರಾ.?

ಲಕ್ಷಾಂತರ ಗಟ್ಟಲೆ ಲಗ್ನಪತ್ರಿಕೆ ಪ್ರಿಂಟ್ ಮಾಡಿಸಿದ್ದೀರಾ.?

''ನಾವೇನು ಅಷ್ಟೊಂದು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿಲ್ಲ. ನಮ್ಮ ಜನರ ಮಧ್ಯೆ ಮದುವೆ ಮಾಡಬೇಕೆಂಬ ಆಸೆ ಅಷ್ಟೇ. ನಾವೇನು ಅದ್ಧೂರಿಯಾಗಿ ಮದುವೆ ಮಾಡ್ತಿಲ್ಲ. ನಮ್ಮ ಕಡೆಯಿಂದ ಯಾರಿಗೂ ಗಿಫ್ಟ್ ಕೊಡುತ್ತಿಲ್ಲ. ಅದೆಲ್ಲ ಸುಳ್ಳು ಮಾಹಿತಿ. ಈ ರೀತಿ ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಎಲ್ಲವೂ ಸರಳವಾಗಿ ನಡೆಯಲಿದೆ. ಬೆಂಗಳೂರು ಬದಲಾಗಿ ನಮ್ಮ ಜಿಲ್ಲೆಯಲ್ಲಿ ಮದುವೆ ಮಾಡುತ್ತಿದ್ದೇವೆ'' ಎಂದು ಇಂದು ಅನಿತಾ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಏನಂದರು.?

ಎಚ್.ಡಿ.ಕುಮಾರಸ್ವಾಮಿ ಏನಂದರು.?

''ನನ್ನ ಮಗನ ಮದುವೆಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ರಾಜಕೀಯ ದೃಷ್ಟಿಯಿಂದ ರಾಮನಗರದಲ್ಲಿ ಮದುವೆ ಮಾಡುತ್ತಿಲ್ಲ. ನನಗೆ ರಾಜಕೀಯ ಪುನರ್ಜನ್ಮ ನೀಡಿದ ಜನತೆಯ ಋಣ ತೀರಿಸುವ ಸಲುವಾಗಿ ಇಲ್ಲಿ ಮದುವೆ ಮಾಡುತ್ತಿದ್ದೇವೆ'' ಎಂದು ಇತ್ತೀಚೆಗೆಷ್ಟೇ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.

ಅದ್ಧೂರಿಯಾಗಿ ನೆರವೇರಿದ್ದ ನಿಶ್ಚಿತಾರ್ಥ ಸಮಾರಂಭ

ಅದ್ಧೂರಿಯಾಗಿ ನೆರವೇರಿದ್ದ ನಿಶ್ಚಿತಾರ್ಥ ಸಮಾರಂಭ

ಕಳೆದ ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿಖಿಲ್-ರೇವತಿ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ರಾಜಕೀಯ ಮತ್ತು ಸಿನಿಮಾ ರಂಗದ ಗಣ್ಯರು ನಿಖಿಲ್-ರೇವತಿ ನಿಶ್ಚಿತಾರ್ಥಕ್ಕೆ ಆಗಮಿಸಿ, ಶುಭ ಕೋರಿದ್ದರು.

ಯಾರು ಈ ರೇವತಿ.?

ಯಾರು ಈ ರೇವತಿ.?

ಬೆಂಗಳೂರಿನ ವಿಜಯನಗರದ ಶಾಸಕ ಕೃಷ್ಣಪ್ಪ ಅವರ ಸಂಬಂಧಿ ಮಂಜುನಾಥ್ ಮತ್ತು ಶ್ರೀದೇವಿ ಅವರ ಪುತ್ರಿ ಈ ರೇವತಿ (ಋತು). ಜ್ಯುವೆಲ್ಲರಿ ಡಿಸೈನಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿರುವ ರೇವತಿ ಇದೀಗ ಗೌಡರ ಮನೆ ಸೊಸೆಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+