ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು

ಬೆಂಗಳೂರು, ಜುಲೈ 07: ದೇಶದಲ್ಲಿರುವ 8 ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಕವೂ ಕೂಡ ಒಂದು ಎಂಬುದು ಆತಂಕವನ್ನು ಇಮ್ಮಡಿಗೊಳಿಸಿದೆ.

ಈ ಕುರಿತು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾತನಾಡಿ, ದೇಶದಲ್ಲಿ ಪ್ರಸ್ತುತ ಪತ್ತೆಯಾಗಿರುವ ಶೇ.80ರಷ್ಟು ಸೋಂಕು ಪ್ರಕರಣಗಳು 8 ರಾಜ್ಯಗಳ 90 ಜಿಲ್ಲೆಗಳಿಂದಲೇ ವರದಿಯಾಗುತ್ತಿವೆ. ಮಹಾರಾಷ್ಟ್ರದ 15 ಜಿಲ್ಲೆಗಳು, ತಮಿಳುನಾಡಿನ 15 ಜಿಲ್ಲೆಗಳು, ಕೇರಳ 14 ಜಿಲ್ಲೆ, ಒಡಿಶಾ 11 ಆಂಧ್ರಪ್ರದೇಶ 10 ಮತ್ತು ಕರ್ನಾಟಕದ 8 ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ಬೆಳವಣಿಗೆ ನಡುವಲ್ಲೇ ದೇಶದಲ್ಲಿ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗತೊಡಗಿದೆ. ದೇಶದ ಅತೀ ಹೆಚ್ಚು ಕೊರೊನಾ ಸೋಂಕಿತರು ಹೊಂದಿರುವ 8 ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Karnataka Among Eight States With High Daily Corona Cases

ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಅವರು ಮಾತನಾಡಿ, ಜನರು ಕೊರೋನಾ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡದೇ ಹೋದಲ್ಲಿ ಇದೂವರೆಗೂ ತೆಗೆದುಕೊಂಡಿದ್ದ ಕಠಿಣ ಕ್ರಮಗಳೆಲ್ಲಾ ವ್ಯರ್ಥವಾಗುತ್ತದೆ.

ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕೂಡ ಪತ್ತೆಯಾಗಿದ್ದು, ಇದೂ ಅತ್ಯಂತ ವೇಗವಾಗಿ ಸೋಂಕು ಹರಡುವಂತೆ ಮಾಡುತ್ತಿದೆ. ವೈರಸ್ ವಿರುದ್ಧ ಹೋರಾಟಲು ಡಬಲ್ ಮಾಸ್ಕ್, ಶುಚಿತ್ವ ಕಾಪಾಡುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ರಾಜ್ಯದ ಕೊಡಗು ಹಾಗೂ ಹಾಸನದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ದಿನಕಳೆದಂತೆ ಹೆಚ್ಚುತ್ತಲೇ ಇದ್ದು, ಇದು ಆತಂಕವನ್ನು ಹೆಚ್ಚು ಮಾಡಿದೆ. ಜೂನ್.29-ಜುಲೈ5 ರವರೆಗೆ ಈ ಎರಡು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಸೇ.6.76 ಮತ್ತು ಶೇ.6.05ರಷ್ಟಿದೆ ಎಂದು ತಿಳಿದುಬಂದಿದೆ.

ಸೋಂಕು ಇದೀಗ ಸ್ಥಳೀಯ ರೀತಿಯಲ್ಲಿ ಹರಡುತ್ತಿದೆ. ಜನರು ಸೇಡು ತೀರಿಸುತ್ತಿರುವಂತೆ ಪ್ರಯಾಣ ಮಾಡುತ್ತಿದ್ದಾರೆ ಮನಾಲಿ, ಮುಸ್ಸೂರಿ, ಸದರ್ ಬಜಾರ್ ದೆಹಲಿ, ಶಿಮ್ಲಾ, ಲಕ್ಷ್ಮಿ ನಗರ ದೆಹಲಿ, ದಾದರ್ ಮಾರ್ಕೆಟ್ ನಿಂದ ಬರುವ ಕೆಲವು ಫೋಟೋಗಳು ಮಾಸ್ಕ್ ಇಲ್ಲದೆ ಸುತ್ತಾಡುತ್ತಿರುವುದನ್ನು ತೋರಿಸುತ್ತದೆ.

ಇದು ಅಪಾಯಕಾರಿ. ಇದು ನಿರಂತರ ಹೋರಾಟ ಎಂದು ಜನರು ಅರ್ಥಮಾಡಿಕೊಳ್ಳಬೇಕು. ವೈರಸ್ ದಣಿದಿಲ್ಲ, ಅದು ಇನ್ನೂ ಇದೆ. ಸೂಕ್ತವಾದ ನಡವಳಿಕೆಯಿಂದ ಮಾತ್ರ ಕೊರೊನಾವೈರಸ್ ಅನ್ನು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+