ರಾಹುಲ್ ಗಾಂಧಿಯನ್ನು ಸುಳ್ಳಿನ ಸರದಾರ ಎಂದ ಅಮಿತ್ ಶಾ

Recommended Video

      ರಾಹುಲ್ ಗಾಂಧಿಯನ್ನ ಸುಳ್ಳುಗಾರ ಎಂದು ಕರೆದ ಅಮಿತ್ ಶಾ | Oneindia Kannada

      ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸುಳ್ಳುಗಾರ ಎಂದು ಕರೆದಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

      ರಾಹುಲ್ ಗಾಂಧಿ ಅವರ ಭಾಷಣದ ದೃಶ್ಯದ ತುಣುಕೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅಮಿತ್ ಶಾ ಅವರು 'ಸುಳ್ಳು ಮತ್ತು ಬರೀ ಸುಳ್ಳು' ಎಂದು ಬರೆದುಕೊಂಡಿದ್ದಾರೆ.

      ಅಮಿತ್ ಶಾ ಹಂಚಿಕೊಂಡಿರುವ ವಿಡಿಯೊ ದೃಶ್ಯದಲ್ಲಿ ರಾಹುಲ್ ಗಾಂಧಿ ಅವರು ದಲಿತರ ಮೇಲಿನ ದೌರ್ಜನ್ಯ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ.

      Amit Shah calls Rahul Gandhi a lire

      'ದಲಿತರ ಹಾಗೂ ಆದಿವಾಸಿಗಳ ಮೇಲೆ ದೌರ್ಜನ್ಯಗಳು ಆಗುತ್ತಲೇ ಇವೆ, ಆದರೆ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನೇ ರದ್ದು ಮಾಡಲಾಗುತ್ತದೆ ಆದರೆ ಇದರ ಬಗ್ಗೆ ನರೇಂದ್ರ ಮೋದಿ ಒಂದೂ ಮಾತನಾಡುವುದಿಲ್ಲ' ಎಂದು ಹೇಳುತ್ತಿರುವ ವಿಡಿಯೋ ಅದಾಗಿದೆ.

      'ನೋಡಿ ಹೇಗೆ ರಾಹುಲ್ ಗಾಂಧಿ ಅವರು ಎಸ್‌ಸಿ/ಎಸ್‌ಟಿ ಕಾಯ್ದೆಯ ಬಗ್ಗೆ ಸುಳ್ಳು ಮಾಹಿತಿ ಪಸರಿಸಿ ಸಮಾಜದಲ್ಲಿ ಅಸಹನೆ ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ' ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.

      ಕೆಲವು ದಿನಗಳ ಹಿಂದೆಯಷ್ಟೆ ಅಮಿತ್ ಶಾ ಅವರು ಬಾಯಿ ತಪ್ಪಿ ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದಿದ್ದನ್ನು ಕಾಂಗ್ರೆಸ್‌ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿ 'ಸುಳ್ಳುಗಳ ಸರದಾರ ಮೊದಲ ಬಾರಿಗೆ ಸತ್ಯ ಮಾತಾಡಿದ್ದಾರೆ' ಎಂದು ಗೇಲಿ ಮಾಡಿತ್ತು. ಇದೀಗ ಅಮಿತ್ ಶಾ ಅವರು ರಾಹುಲ್ ಅವರ ವಿಡಿಯೋ ಪ್ರಕಟಿಸಿ ಸುಳ್ಳುಗಾರ ಎಂದು ಕರೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+