ವಿಷ ಕುಡಿದ ಅಂಬಿ ಅಭಿಮಾನಿ, ರಮ್ಯಾ ಮನೆಗೆ ಸುಣ್ಣಬಣ್ಣ!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜೂನ್ 21 : ಅಂಬರೀಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮ ಖಂಡಿಸಿ ಅಂಬಿ ಅಭಿಮಾನಿಯೊಬ್ಬ ಪ್ರತಿಭಟನೆಯ ವೇಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಘಟನೆ ಕೆ.ಎಂ.ದೊಡ್ಡಿಯಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ, ರಂಗಭೂಮಿ ಕಲಾವಿದರ ಸಂಘ ಹಾಗೂ ನೂರಾರು ಅಭಿಮಾನಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸುತ್ತಿದ್ದ ವೇಳೆ ಕರಡಕೆರೆ ಗ್ರಾಮದ ಪುಟ್ಟಸ್ವಾಮಿ (32) ಎಂಬವರು ಏಕಾಏಕಿ ವಿಷ ಕುಡಿದಿದ್ದರು.

ತಕ್ಷಣ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. [ಬಳಸಿ ಬಿಸಾಡೋಕೆ ನಾನೇನು ಚಪ್ಲೀನಾ : ಶಾಲುಸುತ್ತಿ ಬಾರಿಸಿದ ಅಂಬಿ]

Ambarish fan tries to commit suicide in Mandya

ಅಂಬರೀಶ್ ಅವರನ್ನು ಸಂಪುಟದಿಂದ ಕೈಬಿಟ್ಟ ಬೆನ್ನಲ್ಲೇ, ಈ ಹಿಂದೆ ಬಾಡಿಗೆ ಪಡೆದು ಬಳಿಕ ಖಾಲಿ ಮಾಡಿದ್ದ ಮಾಜಿ ಸಂಸದೆ ರಮ್ಯಾ ವಾಸವಿದ್ದ ಮನೆಗೆ ಸುಣ್ಣಬಣ್ಣ ಬಳಿದು ಒಂದಷ್ಟು ನವೀಕರಣ ಮಾಡುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. [ಜಗ್ಗೇಶ್ ಅವರೆ, ಆಕೆಯೊಬ್ಬಳನ್ನೇ ಗುರಿಯಾಗಿಸುವುದು ಕುತರ್ಕ!]

ರಮ್ಯಾ ಮನೆಗೆ ಸುಣ್ಣಬಣ್ಣ : ಸಂಸದೆಯಾಗಿದ್ದ ವೇಳೆ ಮಂಡ್ಯದ ವಿದ್ಯಾನಗರದಲ್ಲಿ ಮಾಜಿ ಶಾಸಕ ಸಾದತ್ ಅಲಿಖಾನ್ ಅವರ ಸಾದತ್ ಮಂಜಿಲ್ ಎಂಬ ಮನೆಯನ್ನು ಬಾಡಿಗೆ ಪಡೆದಿದ್ದರು. ಆ ನಂತರ ಖಾಲಿ ಮಾಡಿದ್ದರು ಮತ್ತೆ ನವೀಕರಣಗೊಳಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ವಾಸ್ತುವನ್ನು ಬದಲಾಯಿಸಿದ್ದಾರೆ. [ಪಾಪ ರಮ್ಯಾಗೆ ಏನು ತಿಳಿದಿಲ್ಲ, ಅವಳನ್ನು ದೂಷಿಸಬೇಡಿ: ಅಂಬರೀಶ್]

Ambarish fan tries to commit suicide in Mandya

ರಾಜಕೀಯ ಮೂಲಗಳ ಪ್ರಕಾರ, ರಮ್ಯಾ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಬಳಿಕ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿಯನ್ನು ಕೊಡುವ ಆಲೋಚನೆಯೂ ಇದೆ. ಇದರಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ. ಆದರೆ ಇದೀಗ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಸಂಶಯವನ್ನು ಹುಟ್ಟು ಹಾಕಿದೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಬೇಕಿದೆ. ['ಅಂಬರೀಷ್- ಮೀರ್ ಸಾದಿಕ್, ಹೆಣ್ಣು ವಿರೋಧಿ']

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On one side Ambarish has resigned to legislator post after getting removed from cabinet, and on the other side former MP Ramya is getting her rented house renovated in Mandya. In an incident fan of Ambarish tried to commit suicide by consuming poison.
Please Wait while comments are loading...