ಅಮರನಾಥ ಯಾತ್ರೆ : ಕನ್ನಡಿಗರು ಸುರಕ್ಷಿತ

Posted By:
Subscribe to Oneindia Kannada

ಬೆಂಗಳೂರು, ಜುಲೈ 12 : ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರು ಶ್ರೀನಗರದ ಬಲ್ತಾಲ್ ಚೌಕ್ ಮತ್ತು ಪಠಾಣ್ ಚೌಕ್ ಕ್ಯಾಂಪ್‌ಗಳಲ್ಲಿ ಸುರಕ್ಷಿತವಾಗಿದ್ದಾರೆ. ಜಮ್ಮು ಕಾಶ್ಮೀರದಿಂದ ದೆಹಲಿಗೆ ಆಗಮಿಸುವ ಕನ್ನಡಿಗರ ಸುರಕ್ಷತೆಗಾಗಿ ಕರ್ನಾಟಕ ಭವನದ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ.

ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಅತುಲ್ ಕುಮಾರ್ ತಿವಾರಿ ಅವರು ಕನ್ನಡಿಗರ ಸುರಕ್ಷತೆ ಕುರಿತು ಮಾಹಿತಿ ನೀಡಿದ್ದಾರೆ. 'ಕರ್ನಾಟಕ ರಾಜ್ಯದ ವಿಪತ್ತು ನಿರ್ವಹಣಾ ಘಟಕದಿಂದ ಮಾಹಿತಿ ಬಂದ ಕೂಡಲೇ ಶ್ರೀನಗರದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಕಂಟ್ರೋಲ್ ರೂಂ ಸಂಪರ್ಕಿಸಿ, ಮಾಹಿತಿ ನೀಡಿ ಯಾತ್ರಾರ್ಥಿಗಳ ಸುರಕ್ಷತೆ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆ' ಎಂದು ಹೇಳಿದ್ದಾರೆ.

amarnath yatra

'ಕರ್ಪ್ಯೂ ಜಾರಿಯಲ್ಲಿರುವುದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಪ್ರವಾಸಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ' ಎಂದು ಅತುಲ್ ಕುಮಾರ್ ತಿಳಿಸಿದ್ದಾರೆ. [ಅಮರನಾಥ ಯಾತ್ರೆ : ಕನ್ನಡಿಗ ಯಾತ್ರಾರ್ಥಿಗಳಿಗೆ ಸಹಾಯವಾಣಿ]

ಶ್ರೀನಗರ ವಿಮಾನ ನಿಲ್ದಾಣದಲ್ಲಿ 20 ಜನರು ಇದ್ದ ಬಗ್ಗೆ ಬಳ್ಳಾರಿಯ ವೆಂಕಟೇಶ್ ಎನ್ನುವವರು ಮಾಹಿತಿ ನೀಡಿದ್ದರು. ತಕ್ಷಣ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರನ್ನು ಮಿಲಿಟರಿ ಕ್ಯಾಂಪ್‌ನಲ್ಲಿ ಸುರಕ್ಷಿತವಾಗಿರುವಂತೆ ಕ್ರಮ ಕೈಗೊಳ್ಳಲಾಗಿದೆ.[ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಹತ್ಯೆ]

'ಜಮ್ಮು ಕಾಶ್ಮೀರ ರಾಜ್ಯದ ಹಿರಿಯ ಅಧಿಕಾರಿಗಳು, ಕಂಟ್ರೋಲ್ ರೂಂ ಜೊತೆ ಕರ್ನಾಟಕ ಭವನದ ನಿರಂತರ ಸಂಪರ್ಕದಲ್ಲಿದ್ದು, ಕಾಶ್ಮೀರದಿಂದ ದೆಹಲಿಗೆ ಆಗಮಿಸುವ ಕನ್ನಡಿಗರ ಸುರಕ್ಷಿತೆಗೆ ತಮ್ಮ ನೇತೃತ್ವದಲ್ಲಿ ಕರ್ನಾಟಕ ಭವನದ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ' ಎಂದು ಅತುಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕಾಶ್ಮೀರದಿಂದ ಆಗಮಿಸುವ ಕನ್ನಡಿಗರ ಅಹವಾಲುಗಳನ್ನು ಪರಿಹರಿಸಿ ರಾಜ್ಯಕ್ಕೆ ವಾಪಸ್ ಕಳಿಸಲು ತಂಡ ನೆರವಾಗಲಿದೆ. ತಂಡದ ಅಧಿಕಾರಿಗಳು

* ಕರ್ನಾಟಕ ಭವನದ ಉಪನಿವಾಸಿ ಆಯುಕ್ತರಾದ ಅನೀಸ್ ಕೆ ಜಾಯ್ - 9868393979
* ಶ್ರೀಕಾಂತ ರಾವ್ 9868393971
* ರೇಣುಕುಮಾರ್ 9868393953

ಈ ಅಧಿಕಾರಿಗಳಿಗೆ ಜಮ್ಮ ಕಾಶ್ಮೀರದಲ್ಲಿ ತೊಂದರೆಯಲ್ಲಿರುವ ಕನ್ನಡಿಗರ ಬಗ್ಗೆ ಮಾಹಿತಿ ನೀಡಿದರೆ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಜಮ್ಮು ಕಾಶ್ಮಿರದ ಕಂಟ್ರೋಲ್ ರೂಂ ಸಂಖ್ಯೆ 01942506479 ಗೂ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರ ಸಂಘಟನೆಯ ಕಮಾಂಡರ್‌ ಅಬ್ದುಲ್ ಬುರ್ಹಾನ್‌ ವನಿಯನ್ನು ಹತ್ಯೆ ಮಾಡಲಾಗಿದೆ. ವನಿ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ಸಂಭವಿಸಿದ್ದು ಕರ್ಪ್ಯೂ ಜಾರಿಗೊಳಿಸಲಾಗಿದೆ. ಇದರಿಂದ ಯಾತ್ರೆಗೆ ತೆರಳಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Delhi Karnataka Bhawan resident commissioner Atul Kumar Tiwari said, all Kannadiga pilgrims of Amarnath Yatra were safe.
Please Wait while comments are loading...