Karnataka Railways; ಆಲಮಟ್ಟಿ-ಕುಷ್ಟಗಿ ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣ; ಡಿಪಿಆರ್, ಕಾಮಗಾರಿ ಅಪ್ಡೇಟ್ಸ್
ನವದೆಹಲಿ, ಡಿಸೆಂಬರ್ 18: ನೈಋತ್ಯ ರೈಲ್ವೆ ವಿಭಾಗದ ಕರ್ನಾಟಕ ವ್ಯಾಪ್ತಿಯಲ್ಲಿ ವಿವಿಧೆಡೆ ಹೊಸ ರೈಲು ಮಾರ್ಗದ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. ಕೆಲವು ಮಾರ್ಗಗಳ ಕಾಮಗಾರಿ ಆರಂಭವಾದರೆ, ಇನ್ನೂ ಕೆಲವು ಡಿಪಿಆರ್ ಹಂತದಲ್ಲಿವೆ. ಈವರೆಗೆ ಚರ್ಚೆಯಲ್ಲಿದ್ದ ರಾಜ್ಯದ ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗ ಯೋಜನೆಗೆ ವೇಗ ಸಿಕ್ಕಿದೆ. ಇದರ ವಿಸ್ತೃತ ಯೋಜನಾ ವರದಿ (DPR) ಬಗ್ಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಮಹತ್ವದ ಅಪ್ಡೇಟ್ ನೀಡಿದ್ದಾರೆ.
ಆಲಮಟ್ಟಿ-ಕುಷ್ಟಗಿ ನಡುವೆ 91 ಕಿಲೋ ಮೀಟರ್ ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯು ಮುಂದಿನ ಐದು ತಿಂಗಳಲ್ಲಿ (2025 ಮೇ) ತಯಾರಾಗಲಿದೆ ಎಂದು ಅವರು ಜೋಶಿಯವರು ಬುಧವಾರ ತಿಳಿಸಿದ್ದಾರೆ. ಇದಾಗುತ್ತಿದ್ದಂತೆ ಟೆಂಡರ್ ಪ್ರಕ್ರಿಯೆ ನಡೆದು ಪೂರ್ಣಗೊಳ್ಳಲು ಕೊಂಚ ಸಮಯ ಹಿಡಿಯುತ್ತದೆ. 2026ರ ಅಂತ್ಯಕ್ಕೆ ಕಾಮಗಾರಿ ಆರಂಭವಾಗುವ ನಿರೀಕ್ಷೆಗಳು ಇವೆ.

ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಅವರು ಈ ಭಾಗದಲ್ಲಿ ಹೊಸ ರೈಲು ಮಾರ್ಗದ ಅಗತ್ಯವಿದೆ ಎಂಬುದನ್ನು ಪತ್ರ ಮುಖೇನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಗಮನಕ್ಕೆ ಈ ಹಿಂದೆ ತಂದಿದ್ದರು. ಈ ಸಂಬಂಧ ಇವತ್ತು ಸಹ ಸಂಸದರು ಭೇಟಿ ಮಾಡಿ ಮನವಿ ಮಾಡಿದರು.
ಇದರ ಬೆನ್ನಲ್ಲೆ ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರಹ್ಲಾದ್ ಜೋಶಿ ಭೇಟಿ ಮಾಡಿ ಚರ್ಚಿಸಿ ಮನವರಿಕೆ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು ಪತ್ರದ ಮೂಲಕ ಯೋಜನೆಗೆ ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಮತ್ತೊಂದು ಹೊಸ ರೈಲ್ವೆ ಯೋಜನೆ ಆರಂಭಕ್ಕೆ ಅಂಕಿತ ಹಾಡಿದಂತಾಗಿದೆ.
ಯಾವೆಲ್ಲ ಜಿಲ್ಲೆಗಳಿಗೆ ಯೋಜನೆಯಿಂದ ಅನುಕೂಲ?
ಆಲಮಟ್ಟಿಯಿಂದ ಕುಷ್ಟಗಿವರೆಗಿನ ಈ ಹೊಸ ರೈಲು ಮಾರ್ಗವು ವಿಜಯಪುರ, ಬಾಗಲಕೋಟೆ, ಕೊಪ್ಪಳ, ವಿಜಯನಗರ ಸೇರಿ ನಾಲ್ಕು ಜಿಲ್ಲೆಗಳ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಲಿದೆ. ಇದರಿಂದ ಆಯಾ ಭಾಗದ ಶೈಕ್ಷಣಿಕ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಉತ್ತಮ ಹಾಗೂ ರಸ್ತೆ ಸಾರಿಗೆ ಜೊತೆಗೆ ಅಗ್ಗದ ರೈಲು ಸಾರಿಗೆ ಸೇವೆ ಸಿಕ್ಕಂತಾಗುತ್ತದೆ. ಯೋಜನೆಗೆ ಅಂದಾಜು ವೆಚ್ಚ ಎಷ್ಟಾಗಲಿದೆ?, ಟೆಂಡರ್ ಆಹ್ವಾನ ಯಾವಾಗ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬೀಳಬೇಕಿದೆ.
ಆಲಮಟ್ಟಿಯಿಂದ ಕುಷ್ಟಗಿವರೆಗೆ ನೂತನ ರೈಲ್ವೆ ಮಾರ್ಗದ ಕುರಿತಾಗಿ
— Pralhad Joshi (@JoshiPralhad) December 17, 2025
ವಿಜಯಪುರದ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ @mpbijapur ಹಾಗೂ ಬಾಗಲಕೋಟೆಯ ಸಂಸದರಾದ ಶ್ರೀ ಪಿಸಿ ಗದ್ದಿಗೌಡರ್ @PCGaddigoudar ಅವರು ಆಗ್ರಹಿಸಿದ್ದರು
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ಅವರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿ… pic.twitter.com/9lfqyOuBq0
ಪ್ರಹ್ಲಾದ್ ಜೋಶಿ ಹರ್ಷ
ಕೇಂದ್ರ ಸರ್ಕಾರ ಯೋಜನೆಗೆ ಸಹಮತಿ ನೀಡಿದ್ದಕ್ಕೆ ಪ್ರಹ್ಲಾದ್ ಜೊಶಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವ ಜಾಲ ವಿಸ್ತರಿಸುವ ಮೂಲಕ ವಾಣಿಜ್ಯೋದ್ಯಮ ಜತೆಗೆ ಸಂಚಾರ ಸುವ್ಯವಸ್ಥೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
2000 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಯ ಸೊಬಗು: 1.32 ಲಕ್ಷ ಕುಶಲಕರ್ಮಿಗಳಿಗೆ ಮಾರುಕಟ್ಟೆ ಭಾಗ್ಯ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications