• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಚುನಾವಣೆ 2018: ಎಂಇಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ

By Sachhidananda Acharya
|

ಬೆಂಗಳೂರು, ಏಪ್ರಿಲ್ 17: ಅಖಿಲ ಭಾರತ ಮಹಿಳಾ ಎಂಪವರ್ ಮೆಂಟ್ ಪಾರ್ಟಿ (AIMEP) ತನ್ನ ಅಭ್ಯರ್ಥಿಗಳ ಎರಡನೇ ಹಾಗೂ ಅಂತಿಮ ಪಟ್ಟಿಯನ್ನು ಇಂದು ಪ್ರಕಟಿಸಿದೆ.

"ಅಭ್ಯರ್ಥಿಗಳಾಗಲು ಅರ್ಜಿ ಸಲ್ಲಿಸಿದ ಎಲ್ಲರನ್ನೂ ನಾವು ಅಭಿನಂದಿಸುತ್ತೇನೆ ಮತ್ತು ದೀರ್ಘಾವಧಿಯಲ್ಲಿ ನೀವು ನಮಗೆ ಅಗತ್ಯ ಎಂದು ಎಲ್ಲಾ ಬೆಂಬಲಿಗರಿಗೂ ಹೇಳಲು ಇಚ್ಛಿಸುತ್ತೇನೆ. ಟಿಕೆಟ್ ಟಿಕೆಟ್ ಪಡೆದಿರುವವರು ದಯವಿಟ್ಟು ರಾತ್ರಿ ಹಗಲು ಕೆಲಸ ಮಾಡಿ ಕರ್ನಾಟಕದ ಪ್ರತಿಯೊಂದು ಮನೆಗೂ ಎಂಇಪಿಯ ಹೆಸರನ್ನು ತಲುಪಿಸಿ ಮತ್ತು ನಾವು ಅವರಿಗೆ ಏನು ಮಾಡುತ್ತೇವೆ ಎಂಬುದನ್ನು ಮತದಾರರಿಗೆ ತಿಳಿಸಿ," ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ನೌಹೀರಾ ಶೇಖ್ ಹೇಳಿದ್ದಾರೆ.

ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲಲು ಯತ್ನಿಸಿ, ಚುನಾವಣೆಗೆ ಅಥವಾ ಮತಗಳಿಗೆ ಮಾತ್ರವಲ್ಲ ಅವರಿಗೆ ಅಗತ್ಯವಿರುವಾಗ ನೀವು ಅವರೊಂದಿಗೆ ನಿಲ್ಲುತ್ತೀರಿ ಎಂಬ ಭರವಸೆಯನ್ನು ಅವರಿಗೆ ನೀಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಅವರು ಬಿಡುಗಡೆ ಮಾಡಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ್ತಿ, ಉದ್ಯಮಿ ಹಾಗೂ ಹೀರಾ ಸಮೂಹದ ಸಂಸ್ಥಾಪಕಿ ಮತ್ತು ಸಿಇಒ ಡಾ.ನೌಹೀರಾ ಶೇಖ್‌ ಮಹಿಳೆಯರನ್ನು ಜಾತಿ, ವರ್ಗ, ಧಾರ್ಮಿಕತೆ ಮತ್ತು ಪ್ರದೇಶದ ಭಿನ್ನತೆ ಮೀರಿ ಸಬಲೀಕರಣಗೊಳಿಸುವ ಸಲುವಾಗಿ ಅಖಿಲ ಭಾರತೀಯ ಮಹಿಳಾ ಸಬಲೀಕರಣ ಪಕ್ಷ (ಎಐಎಂಇಪಿ) ಎಂಬ ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಎಂಇಪಿ ಅಭ್ಯರ್ಥಿಗಳ ಪಟ್ಟಿ:

English summary
All India Mahila Empowerment Party (AIMEP) unveils second and final list of its candidates today (April 18). The MEP is the first political party in the country focusing on women and their issues, as it believes that improving the conditions of women will ensure that the society as a whole will be improve said Nowhera Shaik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X