Alcohol Price Hike: ಮದ್ಯ ಪ್ರಿಯರಿಗೆ ಕಾದಿದೆ ಶಾಕ್, ಬೆಲೆ ಏರಿಕೆ ಫಿಕ್ಸ್ ?
Alcohol Price Hike: ಕರ್ನಾಟಕ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭವಾಗಿದೆ. ಈ ರೀತಿ ಇರುವಾಗಲೇ ಮದ್ಯ ಪ್ರಿಯರಿಗೂ ಆತಂಕ ಶುರುವಾಗಿದೆ. ಹೌದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಎರಡು ಬಾರಿ ಮದ್ಯದ ಬೆಲೆ ಏರಿಕೆಯಾಗಿದೆ. ಅಲ್ಲದೆ ಇದರೊಂದಿಗೆ ಸ್ಟ್ರಾಂಗ್ ಬಿಯರ್‌ನ ಬೆಲೆಯೂ ಸಹ ಹೆಚ್ಚಳವಾಗಿದೆ. ಇದೀಗ 2025 - 2026ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಇದೇ 7ರಂದು ಮಂಡನೆಗೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ಗೆ ಮೂರು ದಿನಗಳು ಬಾಕಿ ಉಳಿರುವಾಗಲೇ ಈ ಬಾರಿ ಮದ್ಯ ಪ್ರಿಯರಿಗೆ ಶಾಕ್ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಬಜೆಟ್ ಮಂಡನೆ ಯಾವ ಕಾರಣಕ್ಕೆ ಮದ್ಯ ಪ್ರಿಯರ ನಿದ್ದೆ ಕೆಡಿಸಿದೆ ಎನ್ನುವ ವಿವರ ಇಲ್ಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಐದು ಗ್ಯಾರಂಟಿ ಯೋಜನೆಗಳು ಭಾರೀ ಹೊರೆಯಾಗಿವೆ. ಇದರ ನಡುವೆ ಇದೀಗ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕಳೆದ ಐದು ತಿಂಗಳಿನಿಂದಲೂ ಬಿಡುಗಡೆ ಮಾಡದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವುದರೊಂದಿಗೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನ, ಕಾಮಗಾರಿ, ಅನುದಾನ ಹಂಚಿಕೆ ಹಾಗೂ ಗುತ್ತಿಗೆದಾರರ ಬಿಲ್ ಬಾಕಿ ಸೇರಿದಂತೆ ಹಲವು ಕೆಲಸಗಳಿಗೆ ಹಣ ಬೇಕಾಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದಲೇ ಹೊರೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು. ಇದನ್ನು ಬಹಿರಂಗವಾಗಿ ಕರ್ನಾಟಕದ ಪ್ರಮುಖ ಸಚಿವರೇ ಹೇಳಿದ್ದಾರೆ. ಇದರಿಂದ ಸ್ಪಷ್ಟವಾಗಿ ಆರ್ಥಿಕ ಕೊರತೆ ತಿಳಿಯುತ್ತಿದೆ.

ಇದರ ನಡುವೆ ಈಗಾಗಲೇ ಎರಡು ಮೂರು ಬಾರಿ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದೆ. ಇದೀಗ ಈ ಬಾರಿಯ ಬಜೆಟ್‌ನಲ್ಲೂ ಮದ್ಯ ಪ್ರಿಯರಿಗೆ ಶಾಕ್ ಫಿಕ್ಸ್. ಯಾಕೆಂದರೆ ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಆಯಾ ತಿಂಗಳೇ ಅನುಷ್ಠಾನ ಮಾಡುವ ಒತ್ತಡ ಹೆಚ್ಚಳವಾಗಿದೆ. ಅಲ್ಲದೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಳವಾಗಿದೆ. ಇದೀಗ ಕಿಕ್ ಪ್ರಿಯರಿಗೆ ಕಿಕ್ ಸಿಗಬೇಕಾದರೆ ದುಬಾರಿ ಮೊತ್ತ ಪಾವತಿ ಮಾಡುವ ಸಮಯ ಬರಲಿದೆ ಎಂದೇ ಹೇಳಲಾಗುತ್ತಿದೆ.

ಮದ್ಯ ಬೆಲೆ ಹೆಚ್ಚಳ ಫಿಕ್ಸ್ ?
ರಾಜ್ಯ ಸರ್ಕಾರವು ಅನುದಾನವನ್ನು ಹೊಂದಿಸುವ ಕಾರಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಡ್ರಿಂಕ್ಸ್ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಬೆಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಅಲ್ಲದೆ ಈಗಾಗಲೇ ಎರಡು ತಿಂಗಳ ಹಿಂದಷ್ಟೇ ಸ್ಟ್ರಾಂಗ್ ಬಿಯರ್‌ನ ಬೆಲೆ ಹೆಚ್ಚಳ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬಿಯರ್ ಬೆಲೆ ಹಾಗೂ ಕೆಲವು ಮದ್ಯದ ಬೆಲೆ ಹೆಚ್ಚಾಗಿದೆ. ಹೀಗಾಗಿ, ಬೆಲೆ ಪರಿಷ್ಕರಣೆ ಮಾಡಬೇಕು ಅಂತ ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಳವಾದಾಗಲೇ ಬಿಯರ್ ಮಾರಾಟಗಾರರು ಆಗ್ರಹಿಸಿದ್ದರು. ಆದರೆ ಬೆಲೆ ಏರಿಕೆಯ ನಂತರ ಡ್ರಿಂಕ್ಸ್ ಬೆಲೆ ಇಳಿಕೆ ಆಗಿಲ್ಲ.

ಪ್ರತಿ ಬಾರಿ ಬಜೆಟ್‌ನಲ್ಲೂ ಮದ್ಯ ಸೇರಿದಂತೆ ಕೆಲವೊಂದು ವಸ್ತುಗಳ ಮೇಲೆ ಸಾಮಾನ್ಯವಾಗಿ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮಾಡುತ್ತವೆ. ಹೀಗಾಗಿ, ಈ ಬಾರಿಯೂ ಮದ್ಯದ ಬೆಲೆ ಹೆಚ್ಚಳವಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ.












Click it and Unblock the Notifications