ಬೆಂಗಳೂರು-ಬೆಳಗಾವಿ ನಡುವೆ ಐರಾವತ್ ಕ್ಲಬ್ ಕ್ಲಾಸ್‌ ಬಸ್ ಸಂಚಾರ

ಬೆಂಗಳೂರು, ಮಾರ್ಚ್ 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ಬೆಳಗಾವಿ ನಡುವೆ ಐರಾವತಿ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ನಲ್ಲಿ ಸಂಚಾರ ನಡೆಸುವ ಪ್ರಯಾಣಿಕರು 860 ರೂ. ದರವನ್ನು ಪಾವತಿ ಮಾಡಬೇಕಿದೆ.

ಬೆಂಗಳೂರು ಕೇಂದ್ರಿಯ ವಿಭಾಗ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್ 19ರಿಂದ ಬೆಂಗಳೂರು-ಬೆಳಗಾವಿ ಬಸ್‌ ಸಂಚಾರ ಆರಂಭಿಸಿದೆ. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ.

Airavat Club Class Bus Service Between Bengaluru And Belagavi

ಬೆಂಗಳೂರಿನಿಂದ ಬಸ್ 2200 ಗಂಟೆಗೆ ಹೊರಡಲಿದೆ. ಬೆಳಗಾವಿಯನ್ನು ಮರುದಿನ ಬೆಳಗ್ಗೆ 6 ಗಂಟೆಗೆ ತಲುಪಲಿದೆ. ಬೆಳಗಾವಿಯಿಂದ ಪುನಃ 2200 ಗಂಟೆಗೆ ಹೊರಡಲಿರುವ ಬಸ್ ಮರುದಿನ ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪಲಿದೆ.

ಬೆಂಗಳೂರು-ಬನಹಟ್ಟಿ (ಎಸಿ ಸ್ಲೀಪರ್ ಬಸ್); ಕೆಎಸ್ಆರ್‌ಟಿಸಿ ಬೆಂಗಳೂರು ಕೇಂದ್ರಿಯ ವಿಭಾಗ ಬೆಂಗಳೂರು-ಬನಹಟ್ಟಿ ನಡುವೆ ಎಸಿ ಸ್ಲೀಪರ್ ಬಸ್ ಸೇವೆಯನ್ನು ಮಾರ್ಚ್ 19ರಿಂದ ಆರಂಭಿಸಿದೆ. 1040 ರೂ.ಗಳ ದರವನ್ನು ನಿಗದಿ ಮಾಡಲಾಗಿದೆ.

ಬೆಂಗಳೂರು-ಬನಹಟ್ಟಿ ಬಸ್ ಬಾಗಲಕೋಟೆ, ಜಮಖಂಡಿ ಮೂಲಕ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ 19.45ಕ್ಕೆ ಹೊರಡುವ ಬಸ್ ಬನಹಟ್ಟಿಯನ್ನು 7 ಗಂಟೆಗೆ ತಲುಪಲಿದೆ. ಬನಹಟ್ಟಿಯಿಂದ 17.30ಕ್ಕೆ ಹೊರಡುವ ಬಸ್ ಬೆಂಗಳೂರು ನಗರವನ್ನು5 ಗಂಟೆಗೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+