ಖಾಸಗಿ ಅನುದಾನಿತ ಶಿಕ್ಷಕರಿಗೂ ಆರನೇ ವೇತನ ಭಾಗ್ಯ

ಬೆಂಗಳೂರು, ಜು.28: ಸರ್ಕಾರದ ಅನುದಾನ ಪಡೆಯುತ್ತಿರುವ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಸಿಬ್ಬಂದಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸೌಲಭ್ಯ ಸಿಗಲಿದೆ.

68 ಪೂರ್ವ ಪ್ರಾಥಮಿಕ ಶಾಲೆಗಳ 108 ಶಿಕ್ಷಕರು, 2915 ಪ್ರಾಥಮಿಕ ಶಾಲೆಗಳ 15,187, 4,117 ಶಿಕ್ಷಕರು, ಪ್ರೌಢಶಾಲೆಗಳ 34,805, 929 ಪದವಿ ಪೂರ್ವ ಕಾಲೇಜುಗಳ 8,363 ಸಿಬ್ಬಂದಿಗೆ 6ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ವೇತನ ಸೌಲಭ್ಯ ಸಿಗಲಿದೆ.

ಅಂತೆಯೇ 929 ಪ್ರಥಮ ಕಾಲೇಜುಗಳ 7,416, 37 ಶಿಕ್ಷಕ ತರಬೇತಿ ಸಂಸ್ಥೆಗಳ 205, 40 ಬಿ.ಎಡ್‌ ಕಾಲೇಜುಗಳ 526, 44 ಪಾಲಿಟೆಕ್ನಿಕ್‌ ಕಾಲೇಜುಗಳ 2,395, 190 ಕೈಗಾರಿಕಾ ತರಬೇತಿ ಸಂಸ್ಥೆಗಳ 2,131, 11 ಎಂಜಿನಿಯರಿಂಗ್‌ ಕಾಲೇಜುಗಳ 1,856, 13 ಕಾನೂನು ಕಾಲೇಜುಗಳ 266 ಸಿಬ್ಬಂದಿ ಸೇರಿದಂತೆ ಒಟ್ಟು 8,698 ಅನುದಾನಿತ ಶಿಕ್ಷಣ ಸಂಸ್ಥೆಗಳ 73,258 ಸಿಬ್ಬಂದಿಗೆ ಈ ಸೌಲಭ್ಯ ಸಿಗಲಿದೆ. ಆದರೆ, ಈ ಸಂಬಂಧ ಆಯಾ ಇಲಾಖೆಗಳು ಪ್ರತ್ಯೇಕವಾಗಿ ಆದೇಶವಾಗಿ ಹೊರಡಿಸಬೇಕಾಗುತ್ತದೆ.

Aided educational institutions employees will get new pay scale

ರಾಜ್ಯ ಸರಕಾರ ಕೊನೆಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ರಾಜ್ಯ ವೇತನ ಜಾರಿಗೊಳಿಸಿದ್ದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+