ಮತದಾರರ ಪಟ್ಟಿಯಿಂದ 18 ಲಕ್ಷ ಮುಸ್ಲಿಮರು ನಾಪತ್ತೆ: ಎನ್ ಜಿಒ
Recommended Video

ನವದೆಹಲಿ, ಮಾರ್ಚ್ 29: ಕರ್ನಾಟಕ ವಿಧಾನಭೆ ಚುನಾವಣೆ 2018ಕ್ಕೂ ಮುನ್ನ 18 ಲಕ್ಷ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ ಎಂದು ದೆಹಲಿ ಮೂಲದ ಸರಕಾರೇತರ ಸಂಸ್ಥೆ ಹೇಳಿದೆ.
ಒಂದೋ ಇವರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ, ಅಥವಾ ಅವರ ಬಳಿಯಲ್ಲಿ ಗುರುತಿನ ಚೀಟಿ ಇಲ್ಲ ಎಂದು ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡಿಬೇಟ್ಸ್ ಇನ್ ಡೆವಲಪ್ಮೆಂಟ್ ಪಾಲಿಸಿ ಸಂಸ್ಥೆ ಹೇಳಿದೆ.
ಹೆಸರಾಂತ ಆರ್ಥಿಕ ತಜ್ಞ ಡಾ. ಅಬುಸಲೇಹ್ ಶರೀಫ್ ನೇತೃತ್ವದ ಈ ಸಂಸ್ಥೆ ಇದೀಗ ಈ ಸಂಬಂಧ ಆಂದೋಲನ ನಡೆಸಲು ಮುಂದಾಗಿದೆ.

ಈ ಕುರಿತು ಡೆಕ್ಕನ್ ಹೆರಾಲ್ಡ್ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಸಂಶೋಧಕ ಖಾಲಿದ್ ಸೈಫುಲ್ಲಾ, ಕರ್ನಾಟಕದ 16 ವಿಧಾನಸಭೆ ಕ್ಷೇತ್ರಗಳಲ್ಲಿ 1.28 ಲಕ್ಷ ಮುಸ್ಲಿಮರ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುವುದನ್ನು ಪತ್ತೆ ಹಚ್ಚಿದ್ದೇವೆ. ಇದರ ಅಂದಾಜಿನ ಮೇಲೆ 224 ವಿಧಾನಸಭೆ ಕ್ಷೇತ್ರಗಳಲ್ಲಿ 18 ಲಕ್ಷ ಮುಸ್ಲಿಮರ ಹೆಸರು ನಾಪತ್ತೆಯಾಗಿರಬಹುದು ಎಂದು ಅಂದಾಜಿಸಿದ್ದೇವೆ ಎಂದು ಹೇಳಿದ್ದಾರೆ.
2011ರ ಜನಗಣತಿ ವರದಿ ಮತ್ತು ಹೊಸ ಮತದಾರರ ಪಟ್ಟಿಯ ಜತೆ ಹೋಲಿಕೆ ಮಾಡಿ ಅವರು ಈ ಅಂಕಿ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
"2011ರ ಜನಗಣತಿ ಮಾಹಿತಿಗಳ ಪ್ರಕಾರ ಶಿವಾಜಿನಗರದಲ್ಲಿ 18,453 ಮುಸ್ಲಿಂ ಕುಟುಂಬಗಳಿದ್ದು ಇವರಲ್ಲಿ ಶೇಕಡಾ 4.3 ಒಬ್ಬರೇ ಇರುವ ಮನೆಗಳಾಗಿವೆ. ಆದರೆ ಇಲ್ಲಿನ 18,453 ಕುಟುಂಬಗಳಲ್ಲಿ 8,900 ಕ್ಕೂ ಹೆಚ್ಚು ಕುಟುಂಬಗಳಲ್ಲಿ ಒಬ್ಬರು ಮಾತ್ರ ಮತದಾರರಿದ್ದಾರೆ. ಇದು ಒಟ್ಟು ಮುಸ್ಲಿಮರ ಸಂಖ್ಯೆಯ ಕೇವಲ ಶೇಕಡಾ 40 ಮಾತ್ರವಾಗಿದೆ ಎಂದವರು ಹೇಳುತ್ತಾರೆ.
ಇದೀಗ ಈ ಸಂಸ್ಥೆ missingmuslimvoters.com ಎಂಬ ವೆಬ್ಸೈಟ್ ಮತ್ತು Muslim Voters ಎಂಬ ಆಂಡ್ರಾಯ್ಡ್ ಆ್ಯಪ್ ಆರಂಭಿಸಿದೆ. ಜನರನ್ನು ಸಂಘಟಿಸಲು ಮತ್ತು ಅವರಲ್ಲಿ ಜಾಗೃತಿ ಮೂಡಿಸಲು ಇದನ್ನು ಆರಂಭಿಸಿದ್ದಾರೆ.












Click it and Unblock the Notifications