ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ವರ್ಷಗಳ ನಂತರ ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 2017-18ರ ವರ್ಗಾವಣೆಗೆ ಮುಹೂರ್ತ ಕೂಡಿ ಬಂದಿದೆ. ಕಳೆದ ಎರಡು ವರ್ಷಗಳಿಂದ ಹಲವಾರು ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದರು ಇದೀಗ ವರ್ಗಾವಣೆಗೆ ಕಾಲ ಕೂಡಿ ಬಂದಿದೆ.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ಧ ಆಗಿದೆ. ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ, ಕಡ್ಡಾಯ ವರ್ಗಾವಣೆ ಹಾಗೂ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳ ಕುರಿತು ಕೆಲವೊಂದು ಪರಿಷ್ಕರಣೆ ಮಾಡಲಾಗಿದೆ.

ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!

ಕೌನ್ಸೆಲಿಂಗ್ ವಿವರ ಸೆಪ್ಟೆಂಬರ್ 22ರಂದು ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟವಾಗಲಿದೆ, ಸೆಪ್ಟೆಂಬರ್ 22ರಂದು ಹೆಚ್ಚುವರಿ ಪಟ್ಟಿಗೆ ಆಕ್ಷೇಪ ಸಲ್ಲಿಕಸಬಹುದಾಗಿದೆ, ಸೆಪ್ಟೆಂಬರ್ 22-25ರವರೆಗೆ ಆಕ್ಷೇಪಗಳ ಪರಿಶೀಲನೆ ನಡೆಯಲಿದೆ, ಸೆ.26ರಂದು ಬಿಇಒ ಪಟ್ಟಿಯನ್ನು ಪರಿಶೀಲಿಸಿ ಜಿಲ್ಲಾ ಹಂತದಲ್ಲಿ ಆನ್ ಲೈನ್ ನಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಶಿಕ್ಷಕರ ವರ್ಗಾವಣೆಗೆ ಇನ್ನೂ ಕೂಡಿಬರದ ಮುಹೂರ್ತ ಶಿಕ್ಷಕರ ವರ್ಗಾವಣೆಗೆ ಇನ್ನೂ ಕೂಡಿಬರದ ಮುಹೂರ್ತ

ಈಗಾಘಲೇ ಅರ್ಜಿ ಸಲ್ಲಿಕ್ಕೆ ಪೂರ್ಣಗೊಂಡಿದ್ದು, ಒಂದೆರೆಡು ದಿನಗಳಲ್ಲಿ ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪಟ್ಟಿಯೂ ಪ್ರಕಟಗೊಳ್ಳಲಿದೆ. ಸೆ.27-28ರಂದು ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ನಡೆಯಲಿದೆ. ಆನ್‌ಲೈನ್ ನಲ್ಲಿ ಮೊದಲನೇ ಹಂತದಲ್ಲಿ ತಾಲೂಕು ವ್ಯಾಪ್ತಿಗೆ ಮತ್ತು 2ನೇ ಹಂತದಲ್ಲಿ ಜಿಲ್ಲಾ ಹಂತಕ್ಕೆ ನಡೆಯಲಿದೆ.

ಕೋರಿಕೆ ವರ್ಗಾವಣೆ

ಕೋರಿಕೆ ವರ್ಗಾವಣೆ

ಕೋರಿಕೆ ವರ್ಗಾವಣೆಗಳ ಮತ್ತು ಕೋರಿಕೆ ವರ್ಗಾವಣೆಗಳ ಅಂತಿಮ ಪಟ್ಟಿಯನ್ನು ಸೆ.30ರಂದು ಪ್ರಕಟಿಸಲಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದವರಿಗೆ ಬಿ ವಲಯದ ಶಿಕ್ಷಕರು ಎ ವಲಯಕ್ಕೆ, ಸಿ ವಲಯದ ಶಿಕ್ಷಕರನ್ನು ಎ ವಲಯಕ್ಕೆ ಸಿ ವಲಯದ ಶಿಕ್ಷರನ್ನು ಬಿ ವಲಯಕ್ಕೆ ವರ್ಗಾವಣೆ ಕೌನ್ಸೆಲಿಂಗ್ ಅ.3ರಿಂದ 10ರವರೆಗೆ ನಡೆಯಲಿದೆ.

ಕೌನ್ಸೆಲಿಂಗ್ ವಿವರ ಇಲ್ಲಿದೆ

ಕೌನ್ಸೆಲಿಂಗ್ ವಿವರ ಇಲ್ಲಿದೆ

-ಸೆ.22 ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟ

- ಸೆ.22 ರಂದು ಹೆಚ್ಚುವರಿ ಪಟ್ಟಿಗೆ ಆಕ್ಷೇಪ ಸಲ್ಲಿಕೆ

-ಸೆ.22-25ರವರೆಗೆ ಆಕ್ಷೇಪಗಳ ಪರಿಶೀಲನೆ

-ಸೆ.26 ಬಿಇಒ ಪಟ್ಟಿಯನ್ನು ಪರಿಶೀಲಿಸಿ ಜಿಲ್ಲಾ ಹಂತದಲ್ಲಿ ಆನ್‌ಲೈನ್ ನಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡ

ಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆ

ಕಡ್ಡಾಯ ವರ್ಗಾವಣೆ, ಶಿಕ್ಷಕರ ಪಟ್ಟಿ ಪ್ರಕಟ

ಕಡ್ಡಾಯ ವರ್ಗಾವಣೆ, ಶಿಕ್ಷಕರ ಪಟ್ಟಿ ಪ್ರಕಟ

ಎ ವಲಯದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಟ್ಟಿಯನ್ನು ವರ್ಗಾವಣೆಗೆ ನಿಗದಿಪಿಡಿಸಿದ ಮಿತಿಗೊಳಪಟ್ಟ ಸಂಖ್ಯೆಯನ್ನು ಗಮನಿಸಿ ಸೆ.29ರಿಂದ ಅಕ್ಟೋಬರ್ 4 ವರೆಗೆಆಕ್ಷೇಪ ಆಹ್ವಾನಿಸಿದೆ.

ಕಡ್ಡಾಯ, ಕೋರಿಕೆ, ಪರಸ್ಪರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ

ಕಡ್ಡಾಯ, ಕೋರಿಕೆ, ಪರಸ್ಪರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ

ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಸೆ.19ರಂದು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಸೆಪ್ಟೆಂಬರ್ 19ರಿಂದ 26ರವರೆಗೆ ಬಿಇಒ ಹಂತದಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ, ಸೆ.27ರಂದು ವರ್ಗಾವಣೆಗೆ ಅನುಮೋದನೆ ದೊರೆಯಲಿದೆ.

English summary
State government has issued new schedule for counseling for the government school teachers after two years. Earlier notification was issued three times but it was postponed due various issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X