ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಏರೋ ಇಂಡಿಯಾ ಎಲ್ಲಿ, ಬೆಂಗಳೂರಿನಲ್ಲಿ ಇನ್ಮುಂದೆ ಶೋ ಇಲ್ಲ?

1996ರಿಂದ ಆರಂಭವಾದ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆದುಕೊಂಡು ಬರುತ್ತಿತ್ತು. ಏರ್ ಶೋನ ಮುಂದಿನ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

|
Google Oneindia Kannada News

ನವದೆಹಲಿ, ಬೆಂಗಳೂರು ಫೆ 19: ಲಕ್ಷಾಂತರ ಜನ ಸಾಕ್ಷಿಯಾದ ಏರೋ ಇಂಡಿಯಾ 2017 ವೈಮಾನಿಕ ಪ್ರದರ್ಶನಕ್ಕೆ ಶನಿವಾರ (ಫೆ 18) ಅದ್ದೂರಿ ತೆರೆಬಿದ್ದಿದೆ. ಐದು ದಿನಗಳ ಲೋಹದ ಹಕ್ಕಿಗಳ ಆತ್ಯಾಕರ್ಷಕ ಜಾತ್ರೆಯಲ್ಲಿ ಈ ಬಾರಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ನಡೆದದ್ದು ಕೊನೆಯ ವೈಮಾನಿಕ ಪ್ರದರ್ಶನ ಎನ್ನುವ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ, ರಕ್ಷಣಾ ಇಲಾಖೆಯ ಅಧಿಕಾರಿಗಳು ಅಡ್ಡಗೋಡೆಯಲ್ಲಿ ದೀಪ ಇಟ್ಟ ಹಾಗೇ ಹೇಳಿಕೆ ನೀಡಿದ್ದಾರೆ. (ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ)

 Aero India 2017 concludes. No clarity on where the next Air show

ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನದ ಕೊನೆಯ ದಿನ ಮುಂದಿನ ಆವೃತ್ತಿ ಎಲ್ಲಿ ಎಂದು ಘೋಷಿಸಲಾಗುತ್ತಿತ್ತು. ಅಂತೆಯೇ, ಕಳೆದ ಆವೃತ್ತಿಯಲ್ಲಿ ಮುಂದಿನ ಶೋ ಬೆಂಗಳೂರಿನಲ್ಲಿ ಎಂದು ಘೋಷಿಸಲಾಗಿತ್ತು.

ಆದರೆ, ಈ ಬಾರಿಯ ಏರ್ ಶೋನಲ್ಲಿ ಮುಂದಿನ ಆವೃತ್ತಿ ಎಲ್ಲಿ ನಡೆಯಲಿದೆ ಎನ್ನುವುದರ ಬಗ್ಗೆ ಘೋಷಣೆ ಹೊರಬೀಳದೇ ಇರುವುದರಿಂದ, ಬೆಂಗಳೂರಿನಲ್ಲಿ ಇನ್ನು ಮುಂದೆ ಏರ್ ಶೋ ನಡೆಯುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಈ ಬಗ್ಗೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ. ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಕೆಲವೊಂದು ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಮುಂದಿನ ಶೋ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರಧಾನಿ ಸ್ಪಷ್ಟನೆ ನೀಡಿದ್ದರು.

ಮುಂದಿನ ಆವೃತ್ತಿಯ ಬಗ್ಗೆ ರಕ್ಷಣಾ ಸಚಿವರು ನಿರ್ಧರಿಸಲಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಮೂಲಗಳ ಪ್ರಕಾರ ಏರ್ ಶೋ, ಬೆಂಗಳೂರಿನಿಂದ ಗೋವಾಗೆ ಶಿಫ್ಟ್ ಆಗುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

1996ರಿಂದ ಆರಂಭವಾದ ವೈಮಾನಿಕ ಪ್ರದರ್ಶನದ ಹಬ್ಬ ಪ್ರತೀ ಬಾರಿಯೂ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿತ್ತು. ಈ ಬಾರಿ ನಡೆದದ್ದು ಹನ್ನೊಂದನೇ ಏರ್ ಶೋ. (ಚಿತ್ರ: ಪಿಟಿಐ)

English summary
The 11th edition of the five-day Aero India 2017 event concluded. Bengaluru is not going to host Air show any more? question remain unanswered from Defence Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X