ಕೋರ್ಟ್ ಆದೇಶದ ಚಿಂತೆಯಿಲ್ಲ: 'ಸಿನಿಮಾ ನೋಡಿ ಬನ್ನಿ' ಎಂದು ಯಶ್ ಆಹ್ವಾನ

ಬೆಂಗಳೂರು, ಡಿಸೆಂಬರ್ 20: ತೀವ್ರ ಕುತೂಹಲ ಮೂಡಿಸಿರುವ 'ಕೆಜಿಎಫ್' ಚಿತ್ರದ ಬಿಡುಗಡೆಗೆ ಯಾವುದೇ ಆತಂಕವಿಲ್ಲವೇ? ಅಥವಾ ನ್ಯಾಯಾಲಯದ ಆದೇಶದಂತೆ ಸಿನಿಮಾ ಬಿಡುಗಡೆಗೆ ತಡೆ ನೀಡಲಾಗುತ್ತದೆಯೇ? ಈ ಗೊಂದಲಗಳು ಸಿನಿಮಾ ಅಭಿಮಾನಿಗಳನ್ನು ಕಾಡುತ್ತಿದೆ.

ಸಿಟಿ ಸಿವಿಲ್ ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕವೂ ಯಶ್ ನಿರಾಳರಾಗಿರುವಂತೆ ಕಾಣಿಸುತ್ತಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಇದುವರೆಗೂ ಯಶ್ ಸಿನಿಮಾಕ್ಕೆ ಎದುರಾಗಿರುವ ಅಡ್ಡಿಯ ಬಗ್ಗೆ ಮಾತನಾಡಿಲ್ಲ.

ಆದರೆ, ಈ ಎಲ್ಲ ಗೊಂದಲಗಳ ನಡುವೆಯೂ ಅವರು ನಾಳೆ ಸಿನಿಮಾ ನೋಡಲು ಬನ್ನಿ ಎಂದು ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

actor yash tweet inviting fans to watch kgf city civil court stay

ಚಿತ್ರ ಬಿಡುಗಡೆಗೆ ಜನವರಿ 7ರವರೆಗೂ ಮಧ್ಯಂತರ ತಡೆ ನೀಡಿ ನ್ಯಾಯಾಲಯ ಆದೇಶ ನೀಡಿದ ಬಳಿಕ ಯಶ್ ಎರಡು ಟ್ವೀಟ್‌ಗಳನ್ನು ಮಾಡಿದ್ದಾರೆ. ಆದರೆ, ಎರಡರಲ್ಲಿಯೂ ನ್ಯಾಯಾಲಯದ ಆದೇಶದ ಬಗ್ಗೆ ಉಲ್ಲೇಖಿಸಿಲ್ಲ.

ಬದಲಾಗಿದೆ, ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿ ಎಂದು ಮನವಿ ಮಾಡಿದ್ದಾರೆ.

Array

ಯಶ್ ಮಾಡಿದ ಟ್ವೀಟ್

'ಮುಂಬೈನ ಬೀದಿಯಿಂದ ಕೋಲಾರದ ರಕ್ತಸಿಕ್ತ ಚಿನ್ನದ ಗಣಿ ಮೈದಾನದವರೆಗೆ. ಈ ಅದ್ಭುತ ಕಥೆಯನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ. ಕೆಜಿಎಫ್ ಚಿತ್ರದ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ ಎಂದು ಬುಕ್ ಮೈ ಶೋದ ಲಿಂಕ್ ಹಾಕಿ ಟ್ವೀಟ್ ಮಾಡಿದ್ದಾರೆ.

Array

ಚಿತ್ರಮಂದಿರದಲ್ಲಿ ಅನುಭವ ಪಡೆಯಿರಿ

ಕೆಲವು ನಿಮಿಷದ ಬಳಿಕ ಯಶ್ ಮತ್ತೊಂದು ಟ್ವೀಟ್ ಮಾಡಿದ್ದು, ನಿಮ್ಮ ಸಮೀಪದ ಚಿತ್ರಮಂದಿರದಲ್ಲಿ ಕೆಜಿಎಫ್ ಚಿತ್ರ ವೀಕ್ಷಣೆಯ ಅನುಭವ ಪಡೆಯಿರಿ. ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿ ಎಂದು ಮತ್ತೆ ಮನವಿ ಮಾಡಿದ್ದಾರೆ.

ಬುಕ್ ಮಾಡಿದ್ದು ಕ್ಯಾನ್ಸಲ್ ಆಗೊಲ್ಲ

ಬುಕ್ ಮಾಡಿದ್ದು ಕ್ಯಾನ್ಸಲ್ ಆಗೊಲ್ಲ

ಕೆಜಿಎಫ್ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಮತ್ತೆ ಮನವಿ ಮಾಡಿದ್ದಾರೆ.

ಬುಕ್ ಮೈ ಶೋ ಹಾಗೂ ಇತರೆ ಕಡೆಗಳಿಂದ ಟಿಕೆಟ್ ಖರೀದಿ ಮಾಡಿರುವವರು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸಿನಿಮಾ ಪ್ರದರ್ಶನ ರದ್ದಾಗುವುದಿಲ್ಲ. ಬುಕ್ ಮಾಡಿದ ಎಲ್ಲ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಲ್ಲ ರಾಜ್ಯಗಳಲ್ಲಿ ಬಿಡುಗಡೆ

ಎಲ್ಲ ರಾಜ್ಯಗಳಲ್ಲಿ ಬಿಡುಗಡೆ

ಕೆಜಿಎಫ್ ನಿಗದಿಯಂತೆಯೇ ಎಲ್ಲ ರಾಜ್ಯಗಳಲ್ಲಿಯೂ ಎಲ್ಲ ಚಿತ್ರಮಂದಿರಗಳಲ್ಲಿಯೂ ಬಿಡುಗಡೆಯಾಗಲಿದೆ. ಟಿಕೆಟ್ ರದ್ದಾಗುವ ಗೊಂದಲಗಳು ಬೇಡ. ನಾಳೆ, ನಾಡಿದ್ದು ಎಲ್ಲ ದಿನವೂ ಪ್ರದರ್ಶನಗಳು ನಡೆಯಲಿವೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.


ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ ನಾಳೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಮತ್ತು ಈಗಾಗಲೇ ಕಾಯ್ದಿರಿಸಿದ ಟಿಕೆಟ್‌ಗಳು ರದ್ದಾಗಲಿವೆ ಎಂಬ ಆತಂಕ ಸಿನಿಮಾ ಅಭಿಮಾನಿಗಳಲ್ಲಿ ಉಂಟಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+