Get Updates
Get notified of breaking news, exclusive insights, and must-see stories!

ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರಕ್ಕೆ ಕಿಚ್ಚ ಸುದೀಪ್?

Recommended Video

      ಸಿದ್ದು - ಸುದೀಪ್ ಮಧ್ಯೆ ಇದೆ ಒಂದು ನಂಟು !| FIlmibeat Kannada

      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಸುದೀಪ್ ಅವರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಸುದೀಪ್ ಮತ್ತು ಸಿದ್ದರಾಮಯ್ಯ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದು, ಆದಷ್ಟು ಶೀಘ್ರವಾಗಿ ಸುದೀಪ್ ಅವರು ಸಿದ್ದರಾಮಯ್ಯ ಅವರ ಪರ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

      ಈ ಮುಂಚೆಯೂ ಸುದೀಪ್ ಅವರು ಸಿದ್ದರಾಮಯ್ಯ ಅವರು ಬೇರೆ ಬೇರೆ ಕಾರಣಗಳಿಗಾಗಿ ಸುದೀಪ್ ಅವರನ್ನು ಭೇಟಿ ಆಗಿದ್ದರು, ಅಲ್ಲದೇ ಸಿದ್ದರಾಮಯ್ಯ ಅವರೇ ಸುದೀಪ್ ಅವರು ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳಿಗೂ ತಿಳಿಸಿದ್ದರು ಆದರೆ ಯಾವಾಗನಿಂದ ಪ್ರಚಾರ ಆರಂಭಿಸುತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ.

      ಸಿದ್ದರಾಮಯ್ಯ ಅವರು ಈ ಬಾರಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಎರಡೂ ಕಡೆ ಸುದೀಪ್ ಪ್ರಚಾರ ಮಾಡುತ್ತಾರಾ ಅಥವಾ ಕೇವಲ ಚಾಮುಂಡೇಶ್ವರಿಯಲ್ಲಿ ಮಾಡುತ್ತಾರಾ ಕಾದು ನೋಡಬೇಕಿದೆ.

      Actor Sudeep may participate into campaign for Siddaramiah

      ಈಗಾಗಲೇ ನಟ ಯಶ್ ಸೇರಿದಂತೆ ಲೂಸ್ ಮಾದ ಖ್ಯಾತಿಯ ಯೋಗೀಶ್, ನಟಿ ಮಯೂರಿ, ನಟಿ ಅಮೂಲ್ಯ, ನಿಖಿಲ್ ಕುಮಾರ್ ಸೇರಿದಂತೆ ಹಲವು ಮಂದಿ ನಟರು ಈಗಾಗಲೇ ವಿವಿಧ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

      ಸುದೀಪ್ ಅವರು ಸಿದ್ದರಾಮಯ್ಯ ಅವರ ಹೊರತಾಗಿ ಕುಮಾರಸ್ವಾಮಿ ಅವರನ್ನೂ ಸಹ ಎರಡು ಭಾರಿ ಭೇಟಿ ಆಗಿದ್ದರು, ಅವರು ಜೆಡಿಎಸ್‌ ಪರ ಚುನಾವಣಾ ಪ್ರಚಾರ ಮಾಡುತ್ತಾರೆ ಎಂಬ ಊಹಾಪೋಹ ಹರಿದಾಡುತ್ತಿತ್ತು. ಆದರೆ ಆ ವಿಷಯ ಇನ್ನೂ ಖಾತ್ರಿಯಾಗಿಲ್ಲ.

      Actor Sudeep may participate into campaign for Siddaramiah

      ಸುದೀಪ್ ಅವರು ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುವ ಜೊತೆಗೆ ಅವರ ಗೆಳೆಯ ಸುರಪುರ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ ಪರವಾಗಿಯೂ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+