ನಟ ದರ್ಶನ್ ಜಾಮೀನು ಕೇಳಿದ್ದೆಷ್ಟು; ಸಿಕ್ಕಿದ್ದೆಷ್ಟು, ಸಣ್ಣ ರಿಲೀಫ್ ಅಷ್ಟೇ!

ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್ ಜಾಮೀನಿಗಾಗಿ ಕಳೆದ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಇದೀಗ ಅವರಿಗೆ ದೀಪಾವಳಿಗೆ ಮುನ್ನವೇ ಕೋರ್ಟ್‌ನಿಂದ ಸಣ್ಣ ರಿಲೀಫ್‌ ಸಿಕ್ಕಿದೆ. ದರ್ಶನ್‌ಗೆ ಜಾಮೀನು ಸಿಕ್ಕು ಹೊರಗೆ ಬರಬೇಕು ಎಂದು ಅವರು ಅಭಿಮಾನಿಗಳು ಹಾಗೂ ಅವರ ಕುಟುಂಬದವರು ಕಾತುರದಿಂದ ಕಾಯುತ್ತಿದ್ದರು. ಇದೀಗ ಅವರಿಲ್ಲರಿಗೂ ಸಂತೋಷದ ಸುದ್ದಿ ಸಿಕ್ಕಿದೆ. ಇನ್ನು ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆಯಾದರೂ, ಅವರು ಕೇಳಿದಷ್ಟು ಜಾಮೀನು ಸಿಕ್ಕಿಲ್ಲ.

ನಟ ಹಾಗೂ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಇದೀಗ ಕೊನೆಗೂ ಜೈಲಿನಿಂದ ಹೊರ ಬರುತ್ತಿದ್ದಾರೆ. ದರ್ಶನ್‌ ಅವರಿಗೆ ಈಗ ಸಿಕ್ಕಿರುವುದು ಕೇವಲ ತಾತ್ಕಾಲಿಕ ರಿಲೀಫ್ ಮಾತ್ರ. ದರ್ಶನ್ ಅವರು ಬೆನ್ನು ನೋವಿನಿಂದ ಸಂಕಷ್ಟ ಅನುಭವಿಸುತ್ತಿದ್ದು, ಅವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಮಾತ್ರ ಈಗ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ಇದರಲ್ಲೂ ದರ್ಶನ್ ಹಾಗೂ ಅವರ ಪರ ವಕೀಲರು ಕೇಳಿದಷ್ಟು ಜಾಮೀನು ಮಂಜೂರಾಗಿಲ್ಲ. ದರ್ಶನ್‌ ಅವರ ಪರ ವಾದ ಮಂಡಿಸಿದ್ದ ವಕೀಲರು ಕೇಳಿದ್ದ ಜಾಮೀನಿನ ಅವಧಿಯಲ್ಲಿ ಅರ್ಧದಷ್ಟು ಮಾತ್ರ ಈಗ ಮಧ್ಯಂತರ ಜಾಮೀನಿನಲ್ಲಿ ನೀಡಲಾಗಿದೆ.

Actor Darshan asked for bail As far as I got it s a small relief

ದರ್ಶನ್ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡದಿದ್ದರೆ ಅವರ ಆರೋಗ್ಯದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಅವರಿಗೆ ಈಗ ಚಿಕಿತ್ಸೆ ನೀಡದೆ ಇದ್ದರೆ, ಅವರಿಗೆ ಲಕ್ವ ಹೊಡೆಯುವ ಸಾಧ್ಯತೆಯೂ ಇದೆ ಎಂದು ವಾದ ಮಂಡಿಸಲಾಗಿತ್ತು.

ಮೊದಲ ಹಂತದಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ಮೂರು ತಿಂಗಳ ವರೆಗೆ ಜಾಮೀನು ನೀಡಲು ಮನವಿ ಮಾಡಲಾಗಿತ್ತು. ಆದರೆ, ಅವರಿಗೆ ಇದೀಗ ಆರು ವಾರಗಳ ಕಾಲ ಮಾತ್ರ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಅದೂ ಸಹ ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರ. ಅವರು ಈಗ ಕೋರ್ಟ್‌ನಿಂದ ನೀಡಿರುವ ಮಧ್ಯಂತರ ಜಾಮೀನಿನನ್ನು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರ ಬಳಸಿಕೊಳ್ಳಬೇಕು ಎನ್ನುವ ಪ್ರಮುಖ ಷರತ್ತನ್ನು ವಿಧಿಸಲಾಗಿದೆ.

ದರ್ಶನ್‌ ಅವರು ಬೆನ್ನು ನೋವು ಸಮಸ್ಯೆಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ದರ್ಶನ್ ಅವರನ್ನು ಮೊದಲು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅಲ್ಲಿ ಅವರ ಬೆನ್ನು ನೋವು ಸಮಸ್ಯೆಗೆ ಸಂಬಂಧಿಸಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿತ್ತು. ಅಲ್ಲದೇ ಅವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿತ್ತು.

ಪಾಸ್‌ಪೋರ್ಟ್‌ ಸಲ್ಲಿಸಲು ಸೂಚನೆ: ಇನ್ನು ದರ್ಶನ್ ಅವರ ಪಾಸ್‌ಪೋರ್ಟ್‌ ಸಲ್ಲಿಸಬೇಕು ಎಂದು ಸಹ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಪಾಸ್‌ಪೋರ್ಟ್‌ ವಶಪಡಿಸಿಕೊಳ್ಳಲಾಗುತ್ತಿದ್ದು, ಈ ಮೂಲಕ ಅವರು ವಿದೇಶಕ್ಕೆ ಹೋಗದಂತೆ ನಿಗಾ ವಹಿಸುವ ಕ್ರಮ ಇದಾಗಿರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+