ವ್ಯತ್ಯಾಸ ಕಂಡುಬಂದಲ್ಲಿ ಕಾರ್ಖಾನೆಗಳ ವಿರುದ್ಧ ಕ್ರಮ: ಶಂಕರ ಪಾಟೀಲ ಮುನೇನಕೊಪ್ಪ

ಬೆಳಗಾವಿ, ಡಿಸೆಂಬರ್ 21: ಕಬ್ಬು ಸಾಗಣೆ ಮತ್ತು ತೂಕದಲ್ಲಿ ವ್ಯತ್ಯಾಸ ಇದೆ ಎನ್ನುವ ದೂರು ಆಧರಿಸಿ ಕಬ್ಬಿನ ತೂಕದ ಬಗ್ಗೆ ದೂರು ನೀಡಿದ ತರುವಾಯ ಮೊದಲನೇಯದಾಗಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಅಂಕಿ-ಅಂಶಗಳನ್ನು ಪಡೆದುಕೊಂಡಿದ್ದು ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಕಾರ್ಖಾನೆಗಳ ಮೇಲೆ ಕ್ರಮ ಸರಕಾರ ಕ್ರಮ ಜರುಗಿಸಲಿದೆ ಎಂದು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಮಂಗಳವಾರ ನಡೆದ ವಿಧಾನ ಪರಿಷತ್ತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್ ಸದಸ್ಯರಾದ ಪ್ರಕಾಶ ಕೆ.ರಾಠೋಡ್ ಮತ್ತು ಪಿ.ಆರ್.ರಮೇಶ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಕರೆ ಕಾರ್ಖಾನೆಗಳು ವಿವಿಧ ಮೂಲಗಳಿಂದ ಉತ್ಪಾದಿಸುವ ಎಥನಾಲ್‌ಗೆ ಕೇಂದ್ರ ಸರ್ಕಾರವು ಲಾಭದಾಯಕ ಬೆಲೆ ನಿಗದಿಪಡಿಸಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 2022-23ನೇ ಕಬ್ಬು ನುರಿಸುವ ಹಂಗಾಮಿಗೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಗೊಳಿಸಿ 2022ರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಕಬ್ಬು ಸಾಗಣೆ ಮತ್ತು ತೂಕದ ವಿಷಯದಲ್ಲಿ ರೈತರಿಗೆ ಕಾರ್ಖಾನೆಗಳಿಂದ ಮೋಸವಾಗುತ್ತಿದೆ ಎಂದು ಸದಸ್ಯರಾದ ಲಕ್ಷö್ಮಣ ಸವದಿ ಅವರು ತಿಳಿಸಿದರು. ಕಬ್ಬು ನುರಿಸುವ ಕಾರ್ಖಾನೆಗಳಿಂದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ತೂಕದ ವಿಷಯದಲ್ಲಿ ಕಾರ್ಖಾನೆಗಳು ಪ್ರಾಮಾಣಿಕತೆ ತೋರಿಸುತ್ತಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಅವರು ಸದನದ ಸದಸ್ಯರ ಪ್ರಶ್ನೆಗಳಿಗೆ ಧನಿಗೂಡಿಸಿದರು. ಎಥನಾಲಗೆ ಕಳುಹಿಸುವ ಕಬ್ಬಿಗೆ ಪ್ರತ್ಯೇಕ ಬೆಲೆ ನೀಡಬೇಕು. ಎಸ್‌ಎಪಿ ನಮ್ಮ ರಾಜ್ಯದಲ್ಲಿ ಜಾರಿ ಮಾಡಬೇಕು ಎಂದು ಪಿ.ಆರ್.ರಮೇಶ ಅವರು ಇದೆ ವೇಳೆ ಒತ್ತಾಯಿಸಿದರು.

Action Will Be Taken Against Factories If Discrepancy Is Found Shankar Patil Munenakoppa Said

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 2022-23ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಮುಗಿದ ನಂತರ ಸಕ್ಕರೆ ಎಥನಾಲ್ ಮತ್ತು ಇತರೆ ಉಪ ಉತ್ಪನ್ನಗಳ ಮಾರಾಟದಿಂದ ಬರುವ ಅಂತಿಮ ಆದಾಯವನ್ನು ಹಂಚಿಕೆ ಸೂತ್ರದ ಪ್ರಕಾರ ಪರಿಗಣಿಸಿ ರೈತರಿಗೆ ಪಾವತಿಸಬೇಕಾದ ಅಂತಿಮ ಕಬ್ಬಿನ ದರವನ್ನು ನಿರ್ಧರಿಸಲಾಗುವುದು. ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಕಬ್ಬಿನ ಉಪ ಉತ್ಪನ್ನದ 202 ಕೋಟಿ ರೂ.ಗಳ ಲಾಭಾಂಶವನ್ನು ಕಬ್ಬು ಬೆಳೆಗಾರರಿಗೆ ಕೊಡುವ ಆದೇಶದ ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ 806 ಕೋಟಿ ರೂ.ಬಿಡುಗಡೆ: ಸಚಿವ ಬಸವರಾಜ

ಹುಬ್ಬಳ್ಳಿ-ಧಾರವಾಡ ಸ್ಮಾರ್ಟಸಿಟಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 2015-16ರಿಂದ 2022-23ರವರೆಗೆ 806 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಅವರು ತಿಳಿಸಿದ್ದಾರೆ.

Action Will Be Taken Against Factories If Discrepancy Is Found Shankar Patil Munenakoppa Said

ವಿಧಾನ ಪರಿಷತ್ತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್ ಸದಸ್ಯ ಸಲಿಂ ಅಹಮ್ಮದ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸ್ಮಾರ್ಟಸಿಟಿ ಯೋಜನೆಗೆ ರೂ.1080 ಕೋಟಿ ರೂ. ಅನುದಾನ ನಿಗದಿಯಾಗಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ಮಾರ್ಟ್ ಸಿಟಿ ಯೋಜನೆಯನ್ನು ಪೂರ್ಣಗೊಳಿಸಲು 2023 ಜೂನ್‌ರವರೆಗೆ ಕಾಲಾವಧಿ ನಿಗದಿಪಡಿಸಿದೆ. ಕಾಮಗಾರಿಗಳ ಸ್ಥಳ ಸರ್ವೇ ಕಾರ್ಯ ನಡೆಸಿ ಪರಿಕಲ್ಪನಾ ವರದಿ ತಯಾರಿಸುವಲ್ಲಿ, ಉದ್ದೇಶಿತ ವಾಹನಗಳಿಗೆ ಮಾನವ ಸಂಪನ್ಮೂಲ ನೇಮಕಾತಿ ವಿಷಯದಲ್ಲಿ ಕಾಲಾವಧಿ ಬೇಕಿರುವುದರಿಂದ ಮತ್ತು ಕೋವಿಡ್-19 ಕಾರಣಗಳಿಂದಲೂ ಅನುಷ್ಠಾನದಲ್ಲಿ ವಿಳಂಬವಾಗಿದೆ ಎಂದು ತಿಳಿಸಿದರು.

ಮಹಿಳಾ ಉದ್ಯಮಗಳ ಸ್ಥಾಪನೆಗೆ ಪರಿಶೀಲನೆ: ಸಚಿವ ಎನ್.ನಾಗರಾಜು

ಮಹಿಳೆಯರ ಮಾಲೀಕತ್ವ ಮತ್ತು ಒಡೆತನದಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಾಗುವುದು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರಾದ ಎನ್.ನಾಗರಾಜ(ಎಂಟಿಬಿ) ಹೇಳಿದರು.

ವಿಧಾನ ಪರಿಷತ್ತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದ ಅಂಶಗಳನ್ನು ತಿಳಿಸಿದ ಸಚಿವರು, ಉದ್ಯಮ ರಿಜಿಸ್ಟೆಷನ್ ಪೋರ್ಟಲ್‌ನಲ್ಲಿ ಮಹಿಳಾ ಮಾಲೀಕತ್ವದ ಉದ್ಯಮಿಗಳು ಸೇರಿದಂತೆ ಒಟ್ಟಾರೆಯಾಗಿ 7,21,722 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ನೋಂದಾಯಿಸಲ್ಪಿಟ್ಟಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+