ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ದಾಳಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳ ಮೇಲೆ ಪ್ರಕರಣ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ನಿನ್ನೆ (ಸೆಪ್ಟೆಂಬರ್ 19) ಮತ್ತು ಇಂದು ಎಸಿಬಿಯು ವಿವಿಧ ಜಿಲ್ಲೆಗಳಲ್ಲಿ ನಾಲ್ಕು ಕಡೆ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಸರ್ಕಾರಿ ಅಧಿಕಾರಿಗಳನ್ನು ಅಪರಾಧ ಮಾಡುವ ಸಮಯದಲ್ಲೇ ಹಿಡಿದಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಪಿ.ಕುಮಾರಸ್ವಾಮಿ ಎಂಬುವರು ಖಾತೆ ಬದಲಾವಣೆ ಮಾಡಿಕೊಡಲು 2500 ಲಂಚ ಪಡೆಯುತ್ತಿದ್ದ ವೇಳೆ ಎಸಿಬಿಯು ದಾಳಿ ನಡೆಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.

ಆಪರೇಷನ್ ಕಮಲ : ಬಿಜೆಪಿ ವಿರುದ್ಧ ಎಸಿಬಿಗೆ ಕಾಂಗ್ರೆಸ್ ದೂರು? ಆಪರೇಷನ್ ಕಮಲ : ಬಿಜೆಪಿ ವಿರುದ್ಧ ಎಸಿಬಿಗೆ ಕಾಂಗ್ರೆಸ್ ದೂರು?

ಮತ್ತೊಂದು ಪ್ರಕರಣದಲ್ಲಿ ಯಾದಗಿರಿ ಜಿಲ್ಲೆ ಹುಣಸಿಗಿ ಗ್ರಾಮೀಣ ಭಾಗದ ಬೆಸ್ಕಾಂ ಸೆಕ್ಷನ್ ಅಧಿಕಾರಿ ಅಮರೇಶ ಎಂಬುವರು ಕಕ್ಕೇರಾ ಗ್ರಾಮದ ನಿವಾಸಿಯ ಜಮೀನಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಲು 2000 ಲಂಚ ಪಡೆಯುವಾಗ ದಾಳಿ ನಡೆಸಿ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.

ACB registers case on government officials who were taking bribe

ಹಾವೇರಿ ಜಿಲ್ಲೆ ಸವಣೂರು ತಲ್ಲೂಕಿನ ವ್ಯಕ್ತಿಯೊಬ್ಬರ ಬಳಿ ಅದೇ ಗ್ರಾಮದ ಗ್ರಾಮಲೆಕ್ಕಾಧಿಕಾರಿ ರಾಜೇಸಾಬ್ ಪಾಪಣ್ಣನವರ್ ಅವರು ಆರ್‌ಟಿಸಿಗೆ ಹೆಸರು ಸೇರಿಸಲು 1500 ಲಂಚ ಕೇಳಿದ್ದಾರೆ. ಲಂಚವನ್ನು ಸ್ವೀಕರಿಸುವ ಸಮಯದಲ್ಲಿಯೇ ಹಾವೇರಿ ಜಿಲ್ಲಾ ಎಸಿಬಿ ತಂಡ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದೆ.

ಬೆಳ್ಳಂಬೆಳಗ್ಗೆ ಹಳೆಯಂಗಡಿ ಪಂಚಾಯತ್ ಕಚೇರಿ ಮೇಲೆ ಎಸಿಬಿ ದಾಳಿ ಬೆಳ್ಳಂಬೆಳಗ್ಗೆ ಹಳೆಯಂಗಡಿ ಪಂಚಾಯತ್ ಕಚೇರಿ ಮೇಲೆ ಎಸಿಬಿ ದಾಳಿ

ನಿವೇಶನ ಮಾರಾಟ ಮಾಡಲು ಎನ್‌ಓಸಿ ಪ್ರಮಾಣ ಪತ್ರ ನೀಡಲು ಬಾಗಲಕೋಟೆ ನಿವಾಸಿಯೊಬ್ಬರಿಂದ 5000 ರೂಪಾಯಿ ಲಂಚ ಪಡೆಯುವಾಗ ಪುನರ್ವಸತಿ ಅಧಿಕಾರಿಗಳ ಕಚೇರಿಯ ಪಟ್ಟಣ ಅಭಿವೃದ್ಧಿ ಅಧಿಕಾರಿ ಕವಿತಾ ಜ್ಯೋತಿಬಾ ಬೇವಿನಗಿಡ ಅವರು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡಿರುವ ಎಸಿಬಿ ಕವಿತಾ ಅವರ ಮೇಲೆ ಪ್ರಕರಣ ದಾಖಲಿಸಿದೆ.

English summary
ACB registers case against government officials who were taking bribe. ACB registered case in Mysuru, Yadagiri and Haveri districts. ACB raids on the basis of complaint of people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X