ನಮ್ಮ ಸರ್ಕಾರಿ ಕಚೇರಿಗಳಲ್ಲಿ ಚಿಕ್ಕಪುಟ್ಟ ಲಂಚ, ಇಬ್ಬರು ಒಳಗೆ

Posted By: Ramesh
Subscribe to Oneindia Kannada

ಬೆಂಗಳೂರು/ ಬೀದರ್, ಜನವರಿ. 10 : ಜನವರಿ 10ರಂದು ಪ್ರತ್ಯೇಕವಾಗಿ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಬೀದರ್ ಜಿಲ್ಲೆಯ ಲಿಂಗದಹಳ್ಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬೆಂಗಳೂರು ಬಿ.ಬಿ.ಎಂ.ಪಿ, ಶಿವಾಜಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಭಾರತಿ ಈ ಇಬ್ಬರು ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವ ವೇಳೇ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ACB nets two karnataka government servants demanding and accpeting bribe

ಬೀದರ್: ಬೀದರ್ ಜಿಲ್ಲೆಯ ಹಂಪಸಂದ್ರದ ಲಿಂಗದಹಳ್ಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಞಾನೇಶ್ವರ್ಬಸವ ವಸತಿ ಚೆಕ್ ನೀಡಲು ಫಲಾನುಭವಿಗಳಿಂದ 10,000 ರು ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದು. ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಅವರನ್ನು ದಸ್ತಗಿರಿ ಮಾಡಿದ್ದಾರೆ.

ಬೆಂಗಳೂರು : ನಗರದ ಶಿವಾಜಿನಗರ ಗುತ್ತಿಗೆದಾರರೊಬ್ಬ ಹೌಸಿಂಗ್ ಸ್ಕಿಮ್ ನ ಅನುದಾನದ ಅಡಿಯಲ್ಲಿ ಎಸ್.ಸಿ/ಎಸ್.ಟಿ ಕುಟುಂಬದ ಮನೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಂತಿಮ ಅನುದಾನ 21.00 ಲಕ್ಷ ಹಣ ಬಿಡುಗಡೆ ಮಾಡಲು 2,50,000 ರುಗಳ ಲಂಚ ನೀಡುವಂತೆ ಬಿ.ಬಿ.ಎಂ.ಪಿ, ಶಿವಾಜಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಭಾರತಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಗುತ್ತಿಗೆದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದು. ದೂರುದಾರರು ನೀಡಿದ ದೂರಿನನ್ವಯ ಬಾರತಿ ಅವರು .23,000 ರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಅವರನ್ನು ದಸ್ತಗಿರಿ ಮಾಡಲಾಗಿದೆ. ಎಸಿಬಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anti Corruption Bureau nets two karnataka government servants demanding and accpeting bribe in Bidar district Lingadali and Bengaluru Shivaji Nagar BBMP Executive Engineer on January 10.
Please Wait while comments are loading...